Advertisement

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

12:48 AM Jul 05, 2024 | Team Udayavani |

ಬಜಪೆ: ಬಜಪೆ – ಪೊರ್ಕೋಡಿ ರಸ್ತೆಯಲ್ಲಿ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿಯಿರುವ ಮೋರಿಯ ಬಳಿ ಬುಧವಾರ ರಾತ್ರಿ ಗುಂಡಿ ಬಿದ್ದ ಕಾರಣ ಘನ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

Advertisement

ಮಳೆನೀರು ಹರಿವಿಗೆ ಮೋರಿಯಲ್ಲಿ ತಡೆಯಾಗಿ, ಮೋರಿಯ ಮೇಲಿಂದಲೇ ನೀರು ಹರಿದಿದೆ. ಪರಿಣಾಮವಾಗಿ ಮೋರಿಯ ಮಣ್ಣು ಸವೆದು ರಸ್ತೆಯಲ್ಲಿ ಗುಂಡಿಬಿದ್ದಿದೆ. ಈ ಮೋರಿಯ ಅಪಾಯದ ಬಗ್ಗೆ ಸ್ಥಳೀಯರು ಈ ಮೊದಲೇ ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರು.

ಗುಂಡಿ ಸೃಷ್ಟಿಯಾದ ಕಾರಣ ಗುರುವಾರ ಈ ರಸ್ತೆಯಲ್ಲಿ ಲಘುವಾಹನಗಳು ಮಾತ್ರ ಸಂಚರಿಸಿದವು. ಬಸ್ಸು ಹಾಗೂ ಲಾರಿಗಳು ಬಜಪೆಯಿಂದ ಕಳುವಾರು, ಜೋಕಟ್ಟೆಯಾಗಿ ಹಾಗೂ ಕೆಲವು ವಾಹನಗಳು ಕರಂಬಾರು, ತಾರಬರಿ, ಪೊರ್ಕೋಡಿ ಮಾರ್ಗದಲ್ಲಿ ಸಂಚರಿಸಿದವು.

ಬಜಪೆ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗುಂಡಿಗೆ ಮಣ್ಣು ಹಾಕಿ ದುರಸ್ತಿ ಮಾಡಿದರು. ಮಧ್ಯಾಹ್ನ 12 ಗಂಟೆ ಬಳಿಕ ವಾಹನ ಸಂಚಾರ ಯಥಾಸ್ಥಿತಿಗೆ ಬಂತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next