Advertisement

ಪೋಲಿಯೋ ಮುಕ್ತ ರಾಷ್ಟ್ರಕ್ಕೆ ಸಹಕರಿಸಿ

04:54 PM Jan 28, 2018 | |

ವಿಜಯಪುರ: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಹೇಳಿದರು.

Advertisement

ಶನಿವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ, ನಗರ ಆರೋಗ್ಯ ಕೇಂದ್ರ ನವಭಾಗ ಹಾಗೂ ವಿವಿಧ ಎನ್‌ ಜಿಒಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಜನಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜ. 28ರಿಂದ 31ರವರೆಗೆ ಪೋಲಿಯೋ ಲಿಸಿಕಾ ಕಾರ್ಯಕ್ರಮ ಜರುಗಲಿದ್ದು ಸಾರ್ವಜನಿಕರು ತಮ್ಮ 5 ವರ್ಷದ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ ಪೋಲಿಯೋ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಪೋಲಿಯೋ ಮರಕಳಿಸಲು ಅವಕಾಶ ನೀಡಬೇಡಿ. 

ನಿಮ್ಮ ಮಗುವಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಎಚ್ಚರ ವಹಿಸಿದರೆ ಮಾತ್ರ ಅದು ಪೋಲಿಯೋದಿಂದ ಸಂಪೂರ್ಣ ಸುರಕ್ಷಿತ ಎಂದು ಹೇಳಿದರು. ಜಿಲ್ಲೆಯಲ್ಲಿ 0-5 ವರ್ಷದ ಒಟ್ಟು 2,77,379 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನಗರದ ನರ್ಸಿಂಗ್‌ ಹಾಗೂ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳ ಒಳಗೊಂಡು 1,313 ತಂಡ ರಚಿಸಲಾಗಿದೆ. 

ಮೇಲ್ವಿಚಾರಣೆಗಾಗಿ 257 ಸಿಬ್ಬಂದಿ ನೇಮಿಸಿದೆ. ಆಯಾ ತಾಲೂಕಿಗೆ ತಾಲೂಕು ನೋಡಲ್‌ ಅಧಿಕಾರಿಗಳನ್ನು
ಮೇಲ್ವಿಚಾರಣೆ ನಿಯೋಜಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಭಾಗದ ಉಸ್ತುವಾರಿ ಹೊಂದಿರುತ್ತಾರೆ. ವಿಶೇಷವಾಗಿ ತೋಟದ ಮನೆ, ಇಟ್ಟಂಗಿ ಬಟ್ಟಿ, ಅಲೆಮಾರಿ ಜನಾಂಗ, ಕಟ್ಟಡ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಸೂಚಿಸಿದರು.

Advertisement

ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ| ರಾಜಕುಮಾರ ಯರಗಲ್ಲ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ| ಮಹಿಂದ್ರ ಕಾಪ್ಸೆ, ಡಾ| ಮುಕುಂದ ಗಲಗಲಿ, ಡಾ| ಸುರೇಶ ಚವ್ಹಾಣ, ಡಾ| ಎಲ್‌.ಎಚ್‌. ಬಿದರಿ, ಡಾ| ಸಂಪತ್‌ ಗುಣಾರಿ, ಡಾ| ಜ್ಯೋತಿ ಪಾಟೀಲ, ಡಾ| ಜೈಬುನಿಸಾ ಬೀಳಗಿ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಕೆ.ಡಿ. ಗುಂಡಬಾವಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next