Advertisement

ಶತಮಾನದ ಚಳಿಗೆ ನಡುಗುತ್ತಿರುವ ರಾಷ್ಟ್ರ ರಾಜಧಾನಿ ಹೊಸದಿಲ್ಲಿ

09:51 AM Dec 29, 2019 | keerthan |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಭಾರಿ ಚಳಿಗೆ ನಡುಗುತ್ತಿದೆ. ಕಳೆದ ಮೂವತ್ತು ವರ್ಷಗಳಲ್ಲಿಯೇ ಅತೀ ಕಡಿಮೆ ಎಂದರೆ 2.4 ಡಿಗ್ರಿ ಸೆಲ್ಸಿಯಸ್ ಚಳಿ ದಿಲ್ಲಿಯಲ್ಲಿಂದು ದಾಖಲಾಗಿದೆ.

Advertisement

ದಿಲ್ಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಡಕಾಗಿದೆ. ಮಂಜು ಮುಸುಕಿದ ವಾತಾವರಣ ಇರುವ ಕಾರಣ ದೆಹಲಿಯಲ್ಲಿ ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ.

ದೆಹಲಿ ಮಾತ್ರವಲ್ಲದೆ ಉತ್ತರ ಭಾರತ ಭಾರಿ ಚಳಿಗೆ ತತ್ತರಿಸಿದೆ. ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ತೀವ್ರ ಚಳಿಗೆ ಜನರು ನಡುಗುತ್ತಿದ್ದಾರೆ.

ಈ ರಾಜ್ಯಗಳಲ್ಲಿ ಶೀತ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next