Advertisement
“ಟೂ ವೀಲ್ಹರ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವಂತೆ ಮಳೆಗಾಲದಲ್ಲಿ ಓಡಾಡುವವರಿಗೆ ರೈನ್‌ಕೋಟ್, ಛತ್ರಿ ಕಡ್ಡಾಯ ಎಂಬ ರೂಲ್ಸ್ ಮಾಡಬೇಕು…’ ಎಂದುಕೊಂಡ ಶಂಕ್ರಿ.
Related Articles
Advertisement
ನೆರೆಹೊರೆಯವರು ಬಂದು ಗಲಾಟೆ ಮಾಡಿದರೂ ಹೆಂಡತಿಗೆ ಟ್ರೀಟ್ಮೆಂಟ್ ಕೊಡಿಸಲಿಲ್ಲ ಎಂಬ ಅಪವಾದ ಬರಬಾರದು ಎಂದು ಶಂಕ್ರಿ, ಡಾಕ್ಟರ್ ಬಳಿಗೆ ಹೋಗಲು ಸುಮಿಯನ್ನು ಒಪ್ಪಿಸಿದ. ಇವರ ಫ್ಯಾಮಿಲಿ ಡಾಕ್ಟರ್ ಡಾ. ಸೀನಪ್ಪನವರಿಗೆ ಶಂಕ್ರಿ ಕುಟುಂಬದೊಂದಿಗೆ ಅಪಾರ ಸಲುಗೆ, ಸ್ನೇಹ. ಟ್ರೀಟ್ಮೆಂಟ್ ಫೀಸ್‌ನಲ್ಲಿ ಡಿಸ್ಕೌಂಟ್ ಕೊಡದಿದ್ದರೂ, ಸಾಲ ಹೇಳಿ ಕಂತಿನಲ್ಲಿ ಪಾವತಿಸಲು ಅವಕಾಶವಿರುವಷ್ಟು ಡಾಕ್ಟರ್ ಆತ್ಮೀಯರು.
ಶಂಕ್ರಿ, ಸುಮಿ ಬಂದು ಡಾಕ್ಟರ್ ಸೀನಪ್ಪರ ಮನೆ ಬಾಗಿಲು ಬಡಿದರು. ಡಾಕ್ಟರ್ ಹೆಂಡತಿ ಬಾಗಿಲು ತೆರೆದು- “ನಮ್ಮ ಮೊಮ್ಮಗಳ ನಾಮಕರಣಕ್ಕೆ ಕರೆದಾಗ ಬರಲಿಲ್ಲ, ಬರ್ತ್ ಡೇ ಗೂ ಬರಲಿಲ್ಲ, ಈಗಲಾದರೂ ಬಂದಿರಲ್ಲಾ’ ಎಂದು ಸ್ವಾಗತಿಸಿದರು.
“ಕಾಯಿಲೆ ಕಸಾಲೆ ಬಂದಾಗ ಮಾತ್ರ ಇವರಿಗೆ ಡಾಕ್ಟರ್ ನೆನಪಾಗುತ್ತಾರೆ…’ ಎಂದು ಕಾಫಿ ಹೀರುತ್ತಾ ಕುಳಿತಿದ್ದ ಡಾ. ಸೀನಪ್ಪ ಹುಸಿ ಕೋಪ ತೋರಿದರು. “ಆಸ್ಪತ್ರೆಗೆ, ಪೊಲೀಸ್ ಸ್ಟೇಷನ್ನಿಗೆ ಪದೇಪದೆ ಹೋಗುತ್ತಿದ್ದರೆ ಜನ ತಪ್ಪು ತಿಳಿದುಕೊಳ್ತಾರೆ’ ಎಂದ ಶಂಕ್ರಿ.
“ಏನ್ರೀ ಸುಮಿ, ನಿಮ್ಮ ಮೂಗು ಕೆಂಪಗೆ ಊದಿಕೊಂಡಿದೆ!…’ ಕಾಫಿ ಕೊಡುತ್ತಾ ಡಾಕ್ಟರ್ ಹೆಂಡ್ತಿ ಕೇಳಿದರು. “ಶಂಕ್ರಿ ಮುಖ ನೋಡು, ಸುಟ್ಟ ಬದನೆಕಾಯಿ ಆಗಿದೆ’ ಎಂದು ಡಾಕ್ಟರ್ ಶಂಕ್ರಿಯ ಮುಖಭಾವ ಅಳೆದು ಕಿಚಾಯಿಸಿದರು.
“ಆಕ್ಷೀ… ಮೂದು ದಿನದಿಂದ ಶೀತ, ನೆಗಡಿಯಾಗಿ ಮೂದು ಭಾರ ಆಗಿದೆ ಆಂಟಿ, ಆಕ್ಷೀ…’ ಸುಮಿ ಸಂಕಟ ತೋಡಿಕೊಂಡಳು. “ಉಚ್ಛಾರಣೆ ಅಧ್ವಾನವಾಗುವಷ್ಟು ನೆಗಡಿ ವಿಪರೀತವಾಗಿದೆ, ಇಷ್ಟು ದಿನ ಏನು ಮಾಡ್ತಿದ್ರೀ?’ ಡಾಕ್ಟರ್ ಸಿಟ್ಟಾದರು. “ಆಕ್ಷೀ… ಮೂದಿನ ಸಹವಾಸ ಸಾಕಾಗಿದೆ ಡಾತ್ರೇ, ಯಾರಿಗಾದರೂ ದಾನ ಕೊದೋಣ ಅನಿಸಿಬಿಟ್ಟಿದೆ, ಆಕ್ಷೀ…’
“ಕಣ್ಣು, ಕಿಡ್ನಿ ದಾನ ಪಡೆಯುವವರಿ¨ªಾರೆ, ಮೂಗನ್ನು ಮೂಸಿ ನೋಡುವವರೂ ಇಲ್ಲ’. “ಸುಮಿಯ ಮೂಗಿನಲ್ಲಿ ವಿಪರೀತ ಸೋರಿಕೆಯಾಗುತ್ತಿದೆ. ಹೇಗಾದ್ರೂ ಮಾಡಿ ಸೋರಿಕೆ ನಿಲ್ಲಿಸಿ, ನೆಗಡಿ ನಿವಾರಿಸಿ…’ ಶಂಕ್ರಿ ಕೇಳಿಕೊಂಡ.
“ಎಂತೆಂಥಾ ಶೀತ, ನೆಗಡಿ ನಿವಾರಿಸಿದ್ದೇನೆ ಇದ್ಯಾವ ಮಹಾ…’“ಮೂಗು ಒರೆಸಲು ದಿನಕ್ಕೆ ಎರಡು ಟವೆಲ್ ಬೇಕಾಗುತ್ತೆ ಡಾಕ್ಟ್ರೇ ಅಂದ ಶಂಕ್ರಿ.
“ದಿನಕ್ಕೆ ಎರಡು ಎಂದರೆ ಮೂರು ದಿನದಲ್ಲಿ ಆರು ಟವೆಲ್ ಬಳಸಿದ್ದೀರಾ?’
“ನಿಮ್ಮ ಲೆಕ್ಕ ಕರೆಕ್ಟಾಗಿದೆ ಸಾರ್’
“ನಿಮ್ಮ ಹೆಂಡತಿ ದಿನಕ್ಕೆ ಎಷ್ಟು ಸೀನು ಸೀನುತ್ತಾರೆ?’
“ಲೆಕ್ಕ ಹಾಕಿಲ್ಲಾ ಸಾರ್. ಇನ್ಮೆàಲೆ ಸೀನುಗಳ ಲೆಕ್ಕ ಇಡುತ್ತೇನೆ ಸರ್’ “ಒಂದು ಗಂಟೆಗೆ ಎಷ್ಟು ಸೀನು ಬರುತ್ತವೆ? ದಿನಕ್ಕೆ ಒಟ್ಟು ಎಷ್ಟು ಸೀನುಗಳಾಗಬಹುದು? ಮೂರು ದಿನದ ಸರಾಸರಿ ಸೀನುಗಳ ಸಂಖ್ಯೆ ಎಷ್ಟು ಎಂದು ಮಗಳ ಜೊತೆ ಸೇರಿ ಸೀನುಗಳನ್ನು ಎಣಿಸಿ, ಗುಣಿಸಿ ಲೆಕ್ಕ ಹಾಕಿದ್ದರೆ ಮಗಳ ಮ್ಯಾಥೆಮೆಟಿಕ್ಸ್ ನಾಲೆಡ್ಜ್ ಮತ್ತಷ್ಟು ಇಂಪೂ›ವ್ ಆಗ್ತಿತ್ತು’ ನಕ್ಕರು ಡಾಕ್ಟರ್. “ನೀವು ಡಾಕ್ಟರ್, ನಿಮಗೆ
ಕಾಯಿಲೆಗಳು ಹೆದರುತ್ತವೆ, ಕಾಯಿಲೆಗಳು ನಮ್ಮನ್ನು ಹೆದರಿಸ್ತವೆ’ ಶಂಕ್ರಿ ತನ್ನ ಕಷ್ಟ ಹೇಳಿಕೊಂಡ.
“ನಮ್ಮ ಪಕ್ಕದ ಮನೆ ಹುಡುಗ ಪೊಲೀಸ್ ಅಂದರೆ ಹೆದರಲ್ಲ, ಈ ಡಾಕ್ಟರ್ ಹೆಸರು ಹೇಳಿ ಇಂಜೆಕ್ಷನ್ ಕೊಡಿಸ್ತೀವಿ ಅಂದ್ರೆ ಸಾಕು ಹೆದರಿಬಿಡ್ತಾನಂತೆ…’ ಡಾಕ್ಟರ್ ಹೆಂಡ್ತಿ ಗಂಡನ ಸಾಮರ್ಥ್ಯದ ಬಗ್ಗೆ ಬೀಗಿದರು. “ಶೀತ, ನೆಗಡಿಯವರಿಗೆ ಚಿಕಿತ್ಸೆ ನೀಡುವ ನೀವು ಯಾವತ್ತೂ ಸೀನಿಲ್ಲ, ನಿಮ್ಮಲ್ಲಿ ನೆಗಡಿ ನಿರೋಧಕ ಶಕ್ತಿ ಇದೆಯಾ ಸಾರ್?’ ಶಂಕ್ರಿ ತಮಾಷೆ ಮಾಡಿದ.
“ನನ್ನ ಮುಂದೆ ಡಾಕ್ಟರ್ ಕೆಮ್ಮಂಗಿಲ್ಲ, ಸೀನಂಗಿಲ್ಲ… ಅವರ ಆರೋಗ್ಯವನ್ನು ಹಾಗೆ ಕಾಪಾಡಿದ್ದೇನೆ…’ ಅಂದ್ರು ಡಾಕ್ಟರ್ ಹೆಂಡ್ತಿ.
“ಕೆಮ್ಮು ಬಂದರೂ ಹೆಂಡ್ತಿ ಮುಂದೆ ಕೆಮ್ಮುವುದಿಲ್ಲ, ಅಚೆ ಹೋಗಿ ಕೆಮ್ಮಿ ಬರ್ತೀನಿ’ ಡಾಕ್ಟರ್ ಜೋಕ್ ಹೇಳಿದರು.
“ನಿಮ್ಮಿಬ್ಬರ ಕೆಮಿಸ್ಟ್ರಿ ಅರ್ಥವಾಯ್ತು, ನನ್ನ ಹೆಂಡತಿಯನ್ನು ಶೀತಮುಕ್ತ ಮಾಡಿ’. “ಡೋಂಟ್ ವರಿ, ಶೀತ, ನೆಗಡಿ ಸೀಜನ್ ಕಾಯಿಲೆ. ಹಬ್ಬದಲ್ಲಿ ನೆಂಟರು ಬರುವಂತೆ ಮಳೆಗಾಲದಲ್ಲಿ ಇಂಥಾ ಕಾಯಿಲೆಗಳು ಬರುವುದು ಸಹಜ. ಊಟೋಪಚಾರ ಮಾಡಿ ಬಂದ ನೆಂಟರನ್ನು ಕಳಿಸುವಂತೆ, ಔಷಧೋಪಚಾರ ಮಾಡಿ ಕಾಯಿಲೆಯನ್ನೂ ಸಾಗಹಾಕಬೇಕು. ಮೂಗಿಗೆ ನೆಗಡಿ ಭಾರ ಆಗಬಾರದು…’ ಎಂದು ಡಾಕ್ಟರ್ ಸುಮಿಗೆ ನೀಡಬೇಕಾದ ಚಿಕಿತ್ಸೆ ನೀಡಿ, ಮಾತ್ರೆ, ಮದ್ದು ಕೊಟ್ಟರು.
ಸುಮಿಗೆ ಕುಂಕುಮ ಕೊಟ್ಟ ಡಾಕ್ಟರ್ ಹೆಂಡ್ತಿ, “ಆಗಿಂದಾಗ್ಲೇ ಮನೆ ಕಡೆ ಬರ್ತಾ ಇರಿ…’ ಎಂದು ಹೇಳಿ ಕಳಿಸಿದರು. – ಮಣ್ಣೆ ರಾಜು, ತುಮಕೂರು