ಹಾಗೂ ಈ ಸಂಬಂಧ ಶೀಘ್ರವೇ ಮಠಾಧೀಶರ ಸಭೆ ಕರೆದು ತೀರ್ಮಾನ ಕೈಗೊಳ್ಳಲು ವೀರ ಶೈವ ಮಹಾಸಭೆಯಲ್ಲಿ
ನಿರ್ಧರಿಸಲಾಗಿದೆ. ಪ್ರತ್ಯೇಕ ಧರ್ಮದ ಗೊಂದಲಗಳ ನಿವಾರಣೆ ಕುರಿತು ಚರ್ಚಿಸಲು ಬುಧವಾರ ನಡೆದ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳ ಲಾಗಿದ್ದು, ವೀರಶೈವದ ಬಗ್ಗೆ ಅಪಸ್ವರ ಎತ್ತಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟು ಪ್ರದರ್ಶಿಸಲು ಮಹಾಸಭೆ ನಿರ್ಧರಿಸಿದೆ.
Advertisement
ಅಲ್ಲದೇ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾ ದೇವಿ ಅವರ ಮಾತುಗಳನ್ನು ನಿರ್ಲಕ್ಷ್ಯ ಮಾಡಲುಮಹಾಸಭೆ ತೀರ್ಮಾನಿಸಿದೆ. ಸಭೆಯ ನಂತರ ಮಾತನಾಡಿದ ಮಹಾಸ ಭೆಯ ಮಹಾ ಪ್ರಧಾನ ಕಾರ್ಯದರ್ಶಿ
ಈಶ್ವರ್ ಖಂಡ್ರೆ, “”113 ವರ್ಷ ಇತಿಹಾಸ ಇರುವ ವೀರಶೈವ ಮಹಾಸಭೆಯಲ್ಲಿ ಫ.ಗು. ಹಳಕಟ್ಟಿ, ಸಿದ್ದಗಂಗೆಯ
ಶಿವಕುಮಾರ ಸ್ವಾಮಿ, ಡಿ.ಸಿ. ಪಾವತೆ ಆವರಂಥ ಅನೇಕ ಮಹನೀಯರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಎನ್ನುವುದು ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಇತ್ತೀಚಿನ ದಿನಗಳಲ್ಲಿ ಕೆಲವರು ಸ್ವಾರ್ಥಕ್ಕಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುತ್ತಿದಾರೆ. ಇದು ದುರದೃಷ್ಟಕರ” ಎಂದರು.
ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಎಲ್ಲರೂ ಒಂದೇ ಎನ್ನುವ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. 2003ರಲ್ಲಿಯೂ ಪಂಚಪೀಠಾಧೀಶರು ಮತ್ತು ವಿರಕ್ತ ಪರಂಪರೆಯ ಸ್ವಾಮೀಜಿಗಳನ್ನು ಕೂಡಲಸಂಗಮದಲ್ಲಿ ಸಭೆ ಕರೆದು
ಎಲ್ಲರೂ ಒಂದೇ ಎನ್ನುವ ಸಂಕಲ್ಪ ಮಾಡಲಾಗಿತ್ತು. ಈಗ ಮತ್ತೆ ನಮ್ಮೊಳಗೆ ಕಚ್ಚಾಡುತ್ತಿರುವುದು ವಿಷಾದನೀಯವಾಗಿದೆ.
ಪ್ರತ್ಯೇಕ ಧರ್ಮ ಸ್ಥಾಪಿಸಿ ಯಾವುದೇ ಸವಲತ್ತು ಪಡೆಯುವ ಉದ್ದೇಶ ಹೊಂದಿಲ್ಲ ಎಂದರು. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ 1981 ರಲ್ಲಿಯೇ ಮಹಾಸಭೆಯಿಂದ ಬೇಡಿಕೆ ಇಡಲಾಗಿದೆ. ಆಗಲೇ ಲಿಂಗಾಯತರಿಗೆ ಪತ್ಯೇಕ ಧರ್ಮದ ಕೋಡ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ನಂತರ 2013
ರಲ್ಲಿಯೂ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದ ಎಲ್ಲ ಪಕ್ಷಗಳ ಪ್ರಮುಖ ರಾಜಕೀಯ ನಾಯಕರೂ ಬೇಡಿಕೆಗೆ ಸಹಿ ಹಾಕಿದ್ದಾರೆ. ವೀರಶೈವ ಪದ ಬಳಕೆ ಮಾಡಿದರೆ, ಬೇಡಿಕೆ ತಿರಸ್ಕಾರ ಆಗುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.
Related Articles
ರಾಜ್ಯ ಸರ್ಕಾರಕ್ಕೆ ಒಮ್ಮತದ ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.
Advertisement
ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಬಸವರಾಜ್ ರಾಯರಡ್ಡಿ ಅವರ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಈಶ್ವರ್ ಖಂಡ್ರೆ, ಸಚಿವರ ಪ್ರವಾಸದ ಬಗ್ಗೆ ರಾಯರಡ್ಡಿ ಅವರು ಮಹಾಸಭೆಯೊಂದಿಗೆ ಚರ್ಚೆ ನಡೆಸಿಲ್ಲ.
ಅವರಿಗೆ ಕಾಲಿಗೆ ಏಟು ಬಿದ್ದಿದ್ದರಿಂದ ಹಾಸಿಗೆ ಹಿಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇವೆ. ಇದಕ್ಕೆ ಸರ್ಕಾರದ
ಸಚಿವರು ಪ್ರವಾಸ ಹೋಗುವ ಅಗತ್ಯವಿಲ್ಲ ಎಂದು ಹೇಳಿದರು. ಅದೇ ರೀತಿ ಎಂ. ಬಿ. ಪಾಟೀಲ್ ಕೂಡ ಏಕಾಏಕಿ ತಮ್ಮ ನಿಲುವು ಬದಲಿಸಿದ್ದಾರೆ. ಅವರೊಂದಿಗೂ ಮಾತುಕತೆ ನಡೆಸಲಾಗಿದೆ ಎಂದರು. ಸಭೆಯಲ್ಲಿ ವೀರಶೈವ ಮಹಾಸಭೆಯ ರಾಜ್ಯ ಪದಾಧಿಕಾರಿಗಳು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಿಲ್ಲಾಧ್ಯಕ್ಷರುಗಳೂ ಪಾಲ್ಗೊಂಡಿದ್ದರು.