Advertisement

ನೀತಿ ಸಂಹಿತೆ: ಬಂಟಿಂಗ್‌, ಬ್ಯಾನರ್‌ ತೆರವು; ಅಸಮಾಧಾನ

08:20 AM Mar 30, 2018 | Team Udayavani |

ಕೋಟ: ಸಾಸ್ತಾನದಲ್ಲಿ ನಡೆಯುತ್ತಿದ್ದ ನಾಗಮಂಡಲ,ಚೇಂಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಸಂತೋತ್ಸವದ ಪ್ರಯುಕ್ತ ಅಳವಡಿಸಿದ ಕೇಸರಿ ಬಂಟಿಂಗ್‌, ಬ್ಯಾನರ್‌ಗಳನ್ನು ಸಾರ್ವಜನಿಕರ ಪ್ರತಿರೋಧದ ನಡುವೆ ತೆರವುಗೊಳಿಸಿದ ಘಟನೆ ಮಾ.28ರಂದು ನಡೆಯಿತು. 
 
ರಾತ್ರಿ 9 ಗಂಟೆ ಸುಮಾರಿಗೆ ನಾಗಮಂಡಲ ನಡೆಯುತ್ತಿದ್ದ  ಸ್ಥಳಕ್ಕೆ ವಿಶೇಷ ತಂಡದ ಅಧಿಕಾರಿಗಳು ಆಗಮಿಸಿ  ಮೇಲಧಿಕಾರಿಗಳ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಸಮೀಪ ಅಳವಡಿಸಿದ ಬ್ಯಾನರ್‌, ಬಂಟಿಂಗ್‌ ತೆರವುಗೊಳಿಸಬೇಕು ಎಂದು ಸೂಚಿಸಿದರು. 

Advertisement

ಬ್ಯಾನರ್‌ನಲ್ಲಿ ಧಾರ್ಮಿಕತೆ ಹೊರತು ಪಡಿಸಿ ಯಾವುದೇ ರಾಜಕೀಯ ನಾಯಕರ  ಭಾವಚಿತ್ರವಿಲ್ಲ. ಆದ್ದರಿಂದ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅಧಿಕಾರಿಗಳೊಂದಿಗೆ ಮಾತಿಗಿಳಿದು  ರಾತ್ರಿ 12 ಗಂಟೆ ತನಕ ಕಾಲಾವಕಾಶ ನೀಡಿ ಪರಿ-ಪರಿಯಾಗಿ ವಿನಂತಿಸಿದರು. ತೆರವು ಗೊಳಿಸದಿದ್ದರೆ ಆಯೋಜಕರ ಮೇಲೆ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಅನಂತರ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ  ಸ್ಥಳದಲ್ಲಿದ್ದ ಅನೇಕರು ಪೋನಾಯಿಸಿ ವಿನಂತಿಸಿದರು. ಆದರೆ ಯಾವುದೇ  ಮನವಿ ಪುರಸ್ಕರಿಸದೆ ಸಾಸ್ತಾನ, ಚೇಂಪಿಯಲ್ಲಿ ಅಳ ವಡಿಸಿದ ಬ್ಯಾನರ್‌, ಬಂಟಿಂಗ್‌ಗಳನ್ನು ತೆರವುಗೊಳಿಸಲಾಯಿತು.

ಕೋಟ ಅಸಮಾಧಾನ
ಚುನಾವಣಾ ನೀತಿ ಸಂಹಿತೆ  ಸಂದರ್ಭ  ಪೂರ್ವ ನಿರ್ಧರಿತ ನಾಗಮಂಡಲ ಸೇರಿದಂತೆ, ಧಾರ್ಮಿಕ ಪ್ರಕ್ರಿಯೆ ತಡೆ ಯುವುದು, ಅ ಧಿಕಾರಿಗಳ ಮೂಲಕ ಕಿರುಕುಳ ನೀಡುವುದು, ಪೂಜೆ  ಸಂದರ್ಭ  ಪೊಲೀಸರು ಮಧ್ಯಪ್ರವೇಶಿಸಿ ಗೊಂದಲ ಉಂಟುಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಶಾಸಕ  ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಸಾಸ್ತಾನದ ನಾಗಮಂಡಲ  ಪೂರ್ವ ನಿರ್ಧರಿತವಾಗಿದ್ದು, ಅಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟ ವಿದ್ಯಮಾನ,  ಪ್ರಚಾರ ಫಲಕ ಇರಲಿಲ್ಲ. ಜಿಲ್ಲಾ ಧಿಕಾರಿಗಳ ಆದೇಶವಿದೆ ಎಂದು ಬಲಾತ್ಕಾರದಿಂದ ಧಾರ್ಮಿಕ ಚಹರೆಗಳನ್ನು  ತೆರವುಗೊಳಿಸಿದ್ದು ಸರಿಯಲ್ಲ,ಜಿಲ್ಲೆಯಲ್ಲಿ ಇಂತಹ ಘಟನೆ  ಮರುಕಳಿಸಬಾರದು. ಧಾರ್ಮಿಕ ಸಮಾ ರಂಭಗಳಲ್ಲಿ ಹಠಾತ್‌ ಗೊಂದಲ  ನಿರ್ಮಿಸ ಬಾರದು.  ಇದು ಮುಂದುವರಿದರೆ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next