Advertisement

ಗುಡುಗು ಮಳೆಗೆ ತೆಂಗಿನ ಮರ ಧರೆಗೆ

03:47 PM Apr 23, 2018 | Team Udayavani |

ಹುಣಸೂರು: ಕಳೆದೆರಡು ದಿನಗಳಿಂದ ಹುಣಸೂರು ತಾಲೂಕಿನ ವಿವಿಧೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಬಿದ್ದ ಮಳೆಗೆ ತೆಂಗಿನ ಮರಗಳು ಧರೆಗುರುಳಿದ್ದರೆ, ಮನೆಯ ಮೇಲಾ^ವಣೆ ಹಾರಿ ಹೋಗಿದ್ದು, ಸಾವಿರಾರು ರೂ. ನಷ್ಟಸಂಭವಿಸಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ಚಿಕ್ಕಹೆಜೂರು, ಕೊಳವಿಗೆ, ಯಶೋಧರಪುರದಲ್ಲಿ ಸಾಕಷ್ಟು ಹಾನಿಯಾಗಿದೆ. ಕೋಣನಹೊಸಹಳ್ಳಿ, ಮುದಗನೂರು, ಕೊಳವಿಗೆ ಗ್ರಾಮಗಳಲ್ಲೂ ಹಾನಿಯುಂಟಾಗಿದೆ. ಚಿಕ್ಕಹೆಜೂರಿನ ದೇವರಾಜರಿಗೆ ಸೇರಿದ ಮನೆ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ತೆಂಗಿನ ಮರ ಅಧ‌ìಕ್ಕೆ ಕಡಿದು ಬಿದ್ದಿದೆ.

ಮನೆಯ ಮೇಲ್ಛಾವಣಿಗೆ ಹಾಕಿದ್ದ ಹೆಂಚುಗಳು ಬಿರುಗಾಳಿಗೆ ಹಾರಿಹೋಗಿದೆ. ಗೋಡೆ ಬಿರುಕು ಬಿಟ್ಟಿದ್ದು ವಾಸಿಸಲು ಯೋಗ್ಯವಿಲ್ಲದಂತಾಗಿದ್ದರೆ, ಇದೇ ಗ್ರಾಮದ ನಂಜುಂಡಪ್ಪರ ಮನೆ ಸಹ ಬಿರುಕು ಬಿಟ್ಟಿದೆ. ಮೂರ್ತಿ, ಮಾಜಿ ಚೇರ್ಮನ್‌ ಚಂದ್ರಶೇಖರ್‌ರಿಗೆ ಸೇರಿದ ಮನೆಯ ಹೆಂಚುಗಳು ಹಾರಿಹೋಗಿದೆ.

ಅಲ್ಲದೆ ರೂಪಾನಂದೀಶ್‌ ಎಂಬುವರು ಇತ್ತೀಚೆಗಷ್ಟೇ ನಿರ್ಮಿಸಿದ್ದ ಹೊಸ ಮನೆಯ ಮೇಲ್ಛಾವಣೆಗೆ ಹೊದಿಸಿದ್ದ ಕಲಾ°ರ್‌ ಶೀಟ್‌ ಹಾರಿಹೋಗಿ ದೂರದ ವಿದ್ಯುತ್‌ ಲೈನ್‌ ಮೇಲೆ ಬಿದ್ದಿದ್ದೆ. ಇಡೀ ಗ್ರಾಮದಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತ್ತು.

ಸುಮಾರು 15ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಮೈಸೂರು ಬಂಟ್ವಾಳ ಹೆದ್ದಾರಿಯ ಪಕ್ಕದ ಯಶೋಧರಪುರ ಬಳಿ ಹೈಟೆಷನ್‌ ಲೈನ್‌ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದರಿಂದಾಗಿ ಆ ಭಾಗದಲ್ಲಿ ವಿದ್ಯುತ್‌ ಸಂಪರ್ಕ ಅಸ್ತವ್ಯಸ್ತಗೊಂಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next