Advertisement
ಕೆಲವು ವರ್ಷಗಳಿಂದ ತೆಂಗು ಉತ್ಪಾದನೆಯಲ್ಲಿ ಇತರ ರಾಜ್ಯಗಳಿಗಿಂತ ಹಿಂದೆ ಬಿದ್ದಿದ್ದ ಕೇರಳ ಈಗ ಈ ರಾಜ್ಯಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ನೆಗೆದಿದೆ. 2011- 12 ರಿಂದ ಕೇರಳ ತೆಂಗು ಉತ್ಪಾದನೆಯಲ್ಲಿ ಹಿಂದೆ ಸರಿದಿತ್ತು. ಈ ಸ್ಥಾನವನ್ನು ತಮಿಳುನಾಡು, ಕರ್ನಾಟಕ ತುಂಬಿದ್ದವು.2016-17ನೇ ಸಾಲಿನಲ್ಲಿ ಕೇರಳದ 7.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದು, 746.42 ಕೋಟಿ ತೆಂಗು ಉತ್ಪಾದಿಸಲಾಯಿತು. ಈ ಮೂಲಕ ಕೇರಳ ತೆಂಗು ಉತ್ಪಾದನೆಯಲ್ಲಿ ನಂ.1 ನೇ ಸ್ಥಾನವನ್ನು ಮತ್ತೆ ಹಿಡಿಯಲು ಸಾಧ್ಯವಾಯಿತು.
Related Articles
Advertisement
ಹೆಕ್ಟೇರ್‌ಗೆ 12,000 ತೆಂಗು: ನಿರೀಕ್ಷೆ2010-11ರಲ್ಲಿ ಕೇರಳದಲ್ಲಿ ಹೆಕ್ಟೇರ್ ಒಂದಕ್ಕೆ ತೆಂಗು ಉತ್ಪಾದನೆ ಕೇವಲ 7,000 ತೆಂಗು ಲಭಿಸುತ್ತಿತ್ತು. ಅದು ಇದೀಗ 9,663 ತೆಂಗು ಲಭಿಸುವಂತಾಗಿದೆ. 2020 ರ ಹೊತ್ತಿಗೆ ಹೆಕ್ಟರ್‌ಗೆ 12,000 ತೆಂಗು ಉತ್ಪಾದಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ ಎಂದು ನಾಳಿಕೇರ ಅಭಿವೃದ್ಧಿ ಮಂಡಳಿ ಅಸಿಸ್ಟೆಂಟ್ ಡೈರೆಕ್ಟರ್ ವಿ.ಸಿ.ವಸಂತ ಕುಮಾರ್ ಹೇಳಿದ್ದಾರೆ. ರೋಗ, ಧಾರಣೆ ಕುಸಿತ ಸಮಸ್ಯೆ
2011 ರ ವರೆಗೆ ತೆಂಗು ಉತ್ಪಾದನೆಯಲ್ಲಿ ಒಂದನೇ ಸ್ಥಾನದಲ್ಲಿದ್ದ ಕೇರಳ ವಿವಿಧ ರೋಗ ಹಾಗೂ ಧಾರಣೆ ಕುಸಿತದಿಂದಾಗಿ ಕೇರಳವನ್ನು ತೆಂಗು ಉತ್ಪಾದನೆಯಲ್ಲಿ ಹಿಂದಕ್ಕೆ ಸರಿಯುವಂತೆ ಮಾಡಿತು. 1970-71ರಲ್ಲಿ ದೇಶದಲ್ಲಿ 10.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತಿತ್ತು. ಈ ಪೈಕಿ ಕೇರಳದಲ್ಲಿ ಮಾತ್ರ 7.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿತ್ತು. 2017 ಕ್ಕೆ ತಲುಪುತ್ತಿದ್ದಂತೆ ಇತರ ರಾಜ್ಯಗಳಲ್ಲೂ ತೆಂಗು ಉತ್ಪಾದನೆ ಅಧಿಕವಾಯಿತು. ಇದೀಗ ದೇಶದಲ್ಲಿ ಒಟ್ಟು 20.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ.