Advertisement
1. ಒಣ ಕೂದಲು, ನೆತ್ತಿಯನ್ನು ತೇವಗೊಳಿಸುವುದುಹೆಚ್ಚಿನ ತೈಲಗಳು ಕೂದಲಿನ ಮೇಲ್ಮೆ„ಯಲ್ಲಿ ಕುಳಿತುಕೊಳ್ಳುತ್ತವೆ. ಆದರೆ ತೆಂಗಿನೆಣ್ಣೆ ಕೂದಲಿನ ಬುಡಕ್ಕೆ ಆಳವಾಗಿ ತೂರಿಕೊಳ್ಳುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಈ ತೈಲ ಕೂದಲನ್ನು ಮೃದುವಾಗಿಸುತ್ತದೆ. ಕೂದಲು ಶಾಫ್ಟ್ ತುಂಬಲು ಇದು ಸಹಕಾರಿ. ಕೂದಲನ್ನು ತೊಳೆಯುವ ಮುನ್ನ ತೆಂಗಿನೆಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಯ ಬಳಿಕ ಸ್ನಾ ಮಾಡಿದರೆ ಒಣ ಕೂದಲು ಹಾಗೂ ನೆತ್ತಿ ತೇವಗೊಳ್ಳುವುದು.
ಅನೇಕರು ತೆಂಗಿನೆಣ್ಣೆ ಕೂದಲು ಉದುರುವಿಕೆ ಕಡಿಮೆಗೊಳಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 2015ರಲ್ಲಿ ಇಲಿಗಳ ಮೇಲೆ ನಡೆದ ಅಧ್ಯಯನದಲ್ಲಿ ತೆಂಗಿನೆಣ್ಣೆ ಕೂದಲಿನ ಬೆಳವಣಿಗೆ ಹಾಗೂ ಕೂದಲನ್ನು ದಪ್ಪವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ತೆಂಗಿನೆಣ್ಣೆ ಪರಿಸರ ಮಾಲಿನ್ಯದಿಂದ ಕೂದಲನ್ನು ರಕ್ಷಿಸುತ್ತದೆ ಹಾಗೂ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. 3. ರಾಸಾಯನಿಕ ಹಾನಿಯನ್ನು ತಡೆಯುತ್ತದೆ
ತೆಂಗಿನೆಣ್ಣೆ ಕೂದಲಿನ ಬುಡದಲ್ಲಿ ತುಂಬುವುದರಿಂದ ಹಾನಿಕಾರಕ ಪದಾರ್ಥಗಳಿಂದ ಕೂದಲನ್ನು ರಕ್ಷಿಸುತ್ತದೆ. ಕ್ಲೋರಿನೇಟೆಡ್ ಕೊಳದಲ್ಲಿ ಈಜಲು ಬಯಸುವ ವ್ಯಕ್ತಿ ತೆಂನ ಎಣ್ಣೆಯನ್ನು ಉಪಯೋಗಿಸಿದರೆ ಕೂದಲಿಗೆ ಬರುವ ಕ್ಲೋರಿನ್ ಪ್ರಮಾಣವನ್ನು ಕಡಿಮೆ ಮಾಡಬಹುದು.
Related Articles
ಇತರ ಎಣ್ಣೆಗಳಂತೆ ತೆಂಗಿನೆಣ್ಣೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಒಣ ಕೂದಲಿನ ಮೇಲೆ ಶೈನ್ ಸೀರಮ್ ಆಗಿ ತೆಂಗಿನೆಣ್ಣೆಯನ್ನು ಹನಿಗಳನ್ನು ಬಳಸುತ್ತಾರೆ. ಸಿಲಿಕೋನ್ ಮತ್ತು ಅಂತಹುದೇ ಪದಾರ್ಥಗಳನ್ನು ತಪ್ಪಿಸಲು ಬಯಸುವ ಜನರು ತೆಂಗಿನೆಣ್ಣೆಯಣ್ನು ಬಳಸಬಹುದು. ಕೂದಲ ಆರೈಕೆಗೆ ತೆಂಗಿನೆಣ್ಣೆ ಪ್ರಯೋಜನಕಾರಿ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ತೆಂಗಿನೆಣ್ಣೆಗಳಿಗೆ ರಾಸಾಯನಿಕಗಳಿಂದ ಕೂಡಿದ್ದು ಕೂದಲಿಗೆ ಮಾರಕವಾಗಬಹುದು.
Advertisement