Advertisement
ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಉದ್ಯಮಿ ಗುರುಗ್ರಾಮದ ಪಬ್‌ಗ ಹೋಗಿ, ಹೊಸ ಮಾದರಿಯ ಕಾಕ್‌ಟೇಲ್ ತರಿಸಿದ್ದರು. ಇದಕ್ಕೆ ದ್ರವ ಸಾರಜನಕ ಸೇರಿಸಲಾಗಿತ್ತು. ಒಂದು ಸೇವಿಸುವಾಗಲೇ ಹೊಟ್ಟೆ ನೋವು ಆರಂಭವಾಗಿದ್ದರೂ, ಮತ್ತೂಂದು ಸೇವಿಸಿದ್ದರು. ಕೆಲ ಸೆಕೆಂಡ್‌ಗಳಲ್ಲೇ ಹೊಟ್ಟೆ ಉಬ್ಬರಿಸಿ, ಆಸ್ಪತ್ರೆಗೆ ದಾಖಲಿಸಿದಾಗ ಹೊಟ್ಟೆಯಲ್ಲಿ ದೊಡ್ಡ ತೂತಾಗಿರುವುದು ಪತ್ತೆಯಾಗಿತ್ತು. ಬಳಿಕ ವೈದ್ಯರು ಹೊಟ್ಟೆಯ ಅಲ್ಪ ಭಾಗ ಕತ್ತರಿಸಿ ತೆಗೆದಿದ್ದಾರೆ. ದ್ರವ ಸಾರಜನಕದ ಕಾಕ್‌ಟೇಲ್‌ನಲ್ಲಿ ಹೊಗೆ ಬರುತ್ತದೆ. ಹೊಗೆ ಆವಿಯಾದ ಬಳಿಕವೇ ಕಾಕ್‌ಟೇಲ್ ಸೇವಿಸಬೇಕು. ಇಲ್ಲದಿದ್ರೆ ಅಪಾಯ ಖಚಿತ. ಸಾರಜನಕವನ್ನು ಮೈನಸ್ 195 ಡಿ.ಸೆ.ಗೆ ಇಳಿಸಿ ದ್ರವ ಸಾರಜನಕ ತೆಗೆಯಲಾಗುತ್ತದೆ. Advertisement
ಕಾಕ್‌ಟೇಲ್ ಕುಡಿದು ಹೊಟ್ಟೆ ತೂತಾಯ್ತು..!
03:45 AM Jul 05, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.