Advertisement
ಎರಡನೆಯದಾಗಿ, ಕಿವುಡುತನದಿಂದ ಮಗುವಿನ ಗ್ರಹಣಾತ್ಮಕ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಮೂರನೆಯದಾಗಿ, ಶ್ರವಣ ಶಕ್ತಿ ಹೀನತೆಯು ಮಗುವಿನ ಕಲಿಯುವಿಕೆ, ಶೈಕ್ಷಣಿಕ ಸಾಧನೆಗಳಿಗೆ ಅಡ್ಡಿಯಾಗುತ್ತದೆ. ಕೊನೆಯದಾಗಿ, ಅದು ಔದ್ಯೋಗಿಕ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವೆಲ್ಲವೂ ಒಟ್ಟಾಗಿ ಶ್ರವಣ ದೋಷ ಹೊಂದಿರುವ ವ್ಯಕ್ತಿಯು ಕಳಪೆ ಗುಣಮಟ್ಟದ ಜೀವನವನ್ನು ಸಾಗಿಸಬೇಕಾಗುತ್ತದೆ.
Related Articles
Advertisement
1.ಸುಳ್ಳು: ಶ್ರವಣ ಶಕ್ತಿ ನಷ್ಟವಾದರೆ ಕೊಕ್ಲಿಯರ್ ಇಂಪ್ಲಾಂಟ್ ಮಾತ್ರ ಪರ್ಯಾಯ, ಶ್ರವಣ ಸಾಧನಗಳಿಂದ ಉಪಯೋಗವಿಲ್ಲ. ನಿಜ: ಅನೇಕ ಮಕ್ಕಳು ಶ್ರವಣ ಸಾಧನಗಳಿಂದಲೇ ಚೆನ್ನಾಗಿ ಕೇಳಿಸಿಕೊಳ್ಳಲು ಶಕ್ತರಾಗುತ್ತಾರೆ. ಶ್ರವಣ ಸಾಧನಗಳಿಂದ ಪ್ರಯೋಜನವಾಗುತ್ತದೆ ಎಂದಾದರೆ ಕೊಕ್ಲಿಯರ್ ಇಂಪ್ಲಾಂಟ್‌ಗಳನ್ನು ಶಿಫಾರಸು ಮಾಡುವುದಿಲ್ಲ. ಮಗು ಶ್ರವಣ ಸಾಧನಗಳಿಂದ ಕೇಳಿಸಿಕೊಳ್ಳುತ್ತದೆ ಎಂದಾದರೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. 2.ಸುಳ್ಳು: ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿದ ಬಳಿಕ ಮಗು ತಾನು ಕೇಳಿಸಿಕೊಂಡ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ.
ನಿಜ: ಆಲಿಸುವುದು ಮತ್ತು ಅರ್ಥ ಮಾಡಿಕೊಳ್ಳುವುದು ಸಂಪೂರ್ಣ ಭಿನ್ನವಾದವು. ಮಗು ಸಂಭಾಷಣೆಯ ಸಹಿತ ಎಲ್ಲವನ್ನೂ ಕೇಳಿಸಿಕೊಳ್ಳುವಂತೆ ಕೊಕ್ಲಿಯರ್ ಇಂಪ್ಲಾಂಟ್ ಸಹಾಯ ಮಾಡುತ್ತದೆ, ಆದರೆ ಮಾತುಕತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆಲಿಸುವುದು ಮಾತ್ರ ಅಲ್ಲ; ಅದಕ್ಕಿಂತ ಹೆಚ್ಚಿನದು ಅಗತ್ಯವಾಗಿದೆ. ಸಾಮಾನ್ಯ ಮಗುವೊಂದು ಜನಿಸಿದ ತತ್‌ಕ್ಷಣದಿಂದಲೇ ಎಲ್ಲವನ್ನೂ ಕೇಳಿಸಿಕೊಳ್ಳಲಾರಂಭಿಸುತ್ತದೆ ಹಾಗೂ ಈ ಆಲಿಸುವಿಕೆಯನ್ನು ಭಾಷೆ ಮತ್ತು ಸಂಭಾಷಣೆಯ ಕೌಶಲವನ್ನು ಬೆಳೆಸಿಕೊಳ್ಳಲು ಉಪಯೋಗಿಸುತ್ತದೆ. ಈಗಷ್ಟೇ ಕೊಕ್ಲಿಯರ್ ಇಂಪ್ಲಾಂಟ್ ಪಡೆದುಕೊಂಡ ಮಗು ಹೊರಜಗತ್ತಿನ ಜತೆಗೆ ಸಂವಹನ ಸಾಧಿಸಲು ಇನ್ನಷ್ಟೇ ಭಾಷೆ ಮತ್ತು ಸಂಭಾಷಣೆಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾ ಗುತ್ತದೆ. ಭಾಷೆ, ಸಂಭಾಷಣೆ ಮತ್ತು ಆಲಿಸುವಿಕೆಯ ಚಿಕಿತ್ಸೆಗಳು ಕೇಳಿಸಿಕೊಂಡ ಶಬ್ದದ ಜತೆಗೆ ಅರ್ಥವನ್ನು ಸ್ಥಾಪಿಸಿಕೊಳ್ಳಲು ಮಗುವಿಗೆ ಸಹಾಯ ಮಾಡುತ್ತವೆ. 3.ಸುಳ್ಳು: ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿದ ಬಳಿಕ ಮಗು ಮಾತನಾಡಲು ಮತ್ತು ಆಲಿಸಲು ಶಕ್ತವಾಗುತ್ತದೆ.
ನಿಜ: ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸುವುದರಿಂದಷ್ಟೇ ಮಗು ಸಹಜ ಮಾತು ಮತ್ತು ಭಾಷಿಕ ಕೌಶಲಗಳನ್ನು ಪಡೆದುಕೊಳ್ಳುವುದು ಅಸಾಧ್ಯ. ಮಗು ಸ್ವಯಂಚಾಲಿತವಾಗಿ ಮಾತನ್ನು ಅರ್ಥ ಮಾಡಿಕೊಳ್ಳದು ಅಥವಾ ಮ್ಯಾಜಿಕ್‌ನಂತೆ ಶೈಕ್ಷಣಿಕ ಸಾಧನೆಗಳನ್ನು ಮಾಡಲಾಗದು. ಆಲಿಸುವುದು ಮತ್ತು ಸಂಭಾಷಣೆ ನಡೆಸಲು ತೀವ್ರವಾದ ವ್ಯಕ್ತಿಗತ ಭಾಷೆ, ಸಂಭಾಷಣೆ, ಶ್ರವಣ ತರಬೇತಿಗಳನ್ನು ಪರಿಣತ ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಬಳಿ ಪಡೆಯುವುದು ಅಗತ್ಯವಾಗಿದೆ. 4.ಸುಳ್ಳು: ಶ್ರವಣ ಸಾಧನಗಳಿಗೆ ಹೋಲಿಸಿದರೆ ಕೊಕ್ಲಿಯರ್ ಇಂಪ್ಲಾಂಟ್ ಮೂಲಕ ಮಗುವಿನ ಮಾತು ಮತ್ತು ಭಾಷಿಕ ಕೌಶಲಗಳು ಉತ್ತಮಗೊಂಡಿರುವುದರಿಂದ ಸಂಭಾಷಣೆ, ಭಾಷೆ ಮತ್ತು ಶ್ರವಣ ಚಿಕಿತ್ಸೆಗಳ ಅಗತ್ಯವಿಲ್ಲ.
ನಿಜ: ಅನೇಕ ಹೆತ್ತವರು ಇಲ್ಲೇ ತಪ್ಪು ಮಾಡುತ್ತಾರೆ. ಮಗು ಶ್ರವಣ ಸಾಧನಕ್ಕಿಂತ ಹೆಚ್ಚು ಚೆನ್ನಾಗಿ ಕೊಕ್ಲಿಯರ್ ಇಂಪ್ಲಾಂಟ್ ಮೂಲಕ ಆಲಿಸುವುದನ್ನು ಗಮನಿಸುತ್ತಾರೆ ಮಾತ್ರವಲ್ಲದೆ, ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿದ್ದರಿಂದ ತತ್‌ಕ್ಷಣಕ್ಕೆ ಮಗುವಿನ ಮಾತುಕತೆ ಮತ್ತು ಭಾಷಿಕ ಸಾಮರ್ಥ್ಯಗಳು ಕೊಂಚ ಉತ್ತಮಗೊಂಡಿರುವುದನ್ನು ಗಮನಿಸುತ್ತಾರೆ. ತಮ್ಮ ಮಗುವಿನ ಸ್ಥಿತಿ ಉತ್ತಮವಾಗಿದೆ ಎಂದು ಭಾವಿಸಿ ನಿಯಮಿತ ಚಿಕಿತ್ಸೆಗೆ ಹಾಜರಾಗುವ ಅಗತ್ಯವಿಲ್ಲ ಎಂದುಕೊಳ್ಳುತ್ತಾರೆ. ನಿಜ ವಿಚಾರವೆಂದರೆ, ಮಗು ಹಿಂದಿಗಿಂತ ಚೆನ್ನಾಗಿದೆ ಎಂದ ಮಾತ್ರಕ್ಕೆ ಮಗು ತನ್ನ ಪರಿಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರ್ಥವಲ್ಲ. ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಕೆಯ ಸಂಪೂರ್ಣ ಪ್ರಯೋಜನ ಪಡೆಯಬೇಕಾದರೆ ಭಾಷೆ, ಸಂಭಾಷಣೆ ಮತ್ತು ಶ್ರವಣ ತರಬೇತಿಗಳು ಅತ್ಯಗತ್ಯವಾಗಿವೆ. – ಡಾ| ಉಷಾ ಶಾಸಿŒ ,
ಅಸಿಸ್ಟೆಂಟ್ ಪ್ರೊಫೆಸರ್ – ಹಿರಿಯ ಶ್ರೇಣಿ
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು.