Advertisement

ಕರಾವಳಿಗೆಇನ್ನೂ ದರ್ಶನವಾಗದಸ್ವದೇಶದರ್ಶನಕೋಸ್ಟಲ್‌ ಟೂರಿಸಂಸರ್ಕ್ಯೂಟ್!

05:37 AM Feb 13, 2019 | Team Udayavani |

ಮಹಾನಗರ : ಕೇಂದ್ರ ಸರಕಾರದ ‘ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸರ್ಕ್ಯೂಟ್’ ಯೋಜನೆಯಡಿ ನಗರದ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳ ಅಭಿವೃದ್ಧಿಗೆ ಅನುಮೋದನೆ ದೊರಕಿ ವರ್ಷವಾಗುತ್ತಿದ್ದರೂ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಇದರಿಂದ ಬೀಚ್ ಪ್ರವಾಸೋದ್ಯಮ ಉತ್ತೇಜಿಸುವ ಯೋಜನೆ ಹಳ್ಳ ಹಿಡಿದಿದೆ.

Advertisement

ಕರಾವಳಿ ತೀರಗಳಲ್ಲಿ ಪ್ರವಾಸೋದ್ಯ ಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015-16ನೇ ಸಾಲಿನಲ್ಲಿ ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸರ್ಕ್ಯೂಟ್ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿತ್ತು.

ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳನ್ನು ಆಯ್ಕೆ ಮಾಡಿಕೊಂಡು ಸುಮಾರು 25,35,79,000 ರೂ. ವೆಚ್ಚದ ಯೋಜನ ವರದಿ ಸಿದ್ಧಪಡಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡಲಾಗಿತ್ತು.

ತಣ್ಣೀರಬಾವಿ: 20.52 ಕೋ.ರೂ. ಯೋಜನೆ
ಇದರಲ್ಲಿ ತಣ್ಣೀರಬಾವಿ ಬೀಚ್‌ನ ಪ್ರವಾಸೋದ್ಯಮ ಅಭಿವೃದ್ಧಿಗೆ ಒಟ್ಟು 20.52 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮತ್ತು ಸೌಲಭ್ಯಗಳನ್ನು ಅಳವಡಿಸುವ ಯೋಜನೆಗಳಿಗೆ ಅನುಮೋದನೆ ದೊರಕಿದೆ.

4.23 ಕೋ.ರೂ. ವೆಚ್ಚದ ಪ್ರವಾಸಿ ಫೆಸಿಲಿಟೇಶನ್‌ ಕೇಂದ್ರ ಹಾಗೂ ಜೀವರಕ್ಷಕ ತರಬೇತಿ ಶಾಲೆ, 11.09 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು 49 ಬೆಂಚ್‌ಗಳು, 19.45 ಲಕ್ಷ ರೂ. ವೆಚ್ಚದಲ್ಲಿ 4 ಜೀವ ರಕ್ಷಕ ವಾಚ್ ಟವರ್‌, 4.01 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ, 31.13 ಕೋ.ರೂ. ವೆಚ್ಚದಲ್ಲಿ ಸಾರ್ವಜನಿಕ ಸೇವಾ ಸೌಲಭ್ಯಗಳು, 20 ಲಕ್ಷ ರೂ., ವೆಚ್ಚದಲ್ಲಿ ಸೋಲಾರ್‌ ಬೀದಿ ದೀಪಗಳ ಅಳವಡಿಕೆ, 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಕೆಮರಾ ಅಳವಡಿಕೆ, 75 ಲಕ್ಷ ರೂ. ವೆಚ್ಚದಲ್ಲಿ ಬೀಚ್ ಶುದ್ಧೀಕರಣ ಸಾಮಗ್ರಿಗಳು, 1 ಕೋ.ರೂ. ವೆಚ್ಚದಲ್ಲಿ ವಾಟರ್‌ ನ್ಪೋರ್ಟ್ಸ್ ಸಲಕರಣೆಗಳು, 20 ಲಕ್ಷ ರೂ. ವೆಚ್ಚದಲ್ಲಿ ವಾಕಿಟಾಕಿ, ಹ್ಯಾಂಡ್‌ ಮೈಕ್‌, ನಿಯಂತ್ರಣ ವ್ಯವಸ್ಥೆ ಸೇರಿದಂತೆ ಬೀಚ್ ನಿರ್ವಹಣ ಘಟಕ, 10 ಲಕ್ಷ ರೂ. ವೆಚ್ಚದಲ್ಲಿ ಬೀಚ್ ಮಾರ್ಷಲ್‌ ವಾಹನ, 15 ಲಕ್ಷ ರೂ. ವೆಚ್ಚದಲ್ಲಿ ಲೈಫ್‌ಬೋಯಿ, ರಕ್ಷಣಾ ಟ್ಯೂಬ್‌, ರಕ್ಷಣಾ ಬೆಡ್‌ಗಳು, 2 ಲಕ್ಷ ರೂ. ವೆಚ್ಚದಲ್ಲಿ ಕ್ಯುಬಿಕಲ್‌ ಶೋವರ್‌ ಬ್ಲಾಕ್‌, 4.80 ಕೋ.ರೂ. ವೆಚ್ಚದಲ್ಲಿ ಕುಳೂರು ಸೇತುವೆ ಬಳಿ, ಸುಲ್ತಾನ್‌ ಬತ್ತೇರಿ, ಬಂಗ್ರಕುಳೂರಿನಲ್ಲಿ ತೇಲುವ ಜೆಟ್ಟಿಗಳ ನಿರ್ಮಾಣ ಯೋಜನೆಗಳು ಒಳಗೊಂಡಿವೆ.

Advertisement

ಸಸಿಹಿತ್ಲುಯಲ್ಲಿ ಒಟ್ಟು 4,83,55,000 ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಹಾಗೂ ಸೌಲಭ್ಯಗಳಿಗೆ ಸ್ವದೇಶದರ್ಶನ ಯೋಜನೆಯಲ್ಲಿ ಅನುಮೋದನೆ ಲಭಿಸಿದೆ. ಇದರಲ್ಲಿ 5.55 ಲಕ್ಷ ರೂ. ವೆಚ್ಚದಲ್ಲಿ ಕುಳಿತುಕೊಳ್ಳಲು 20 ಬೆಂಚ್‌ಗಳು, 9.72 ಲಕ್ಷ ರೂ.ವೆಚ್ಚದಲ್ಲಿ 2 ಜೀವರಕ್ಷಕ ವಾಚ್ ಟವರ್‌, 4.01 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ, 2 ಲಕ್ಷ ರೂ. ವೆಚ್ಚದಲ್ಲಿ ಕ್ಯುಬಿಕಲ್‌ ಶೋವರ್‌ ಬ್ಲಾಕ್‌, 40 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ಕೆಮರಾ ಅಳವಡಿಕೆ, 75 ಲಕ್ಷ ರೂ. ವೆಚ್ಚದಲ್ಲಿ ಬೀಚ್ ಶುದ್ಧೀಕರಣ ಸಾಮಗ್ರಿಗಳು, 20 ಲಕ್ಷ ರೂ. ವೆಚ್ಚದಲ್ಲಿ ವಾಕಿಟಾಕಿ, ಹ್ಯಾಂಡ್‌ ಮೈಕ್‌, ನಿಯಂತ್ರಣ ವ್ಯವಸ್ಥೆ ಸಹಿತ ಬೀಚ್ ನಿರ್ವಹಣ ಘಟಕ, 15 ಲಕ್ಷ ರೂ. ವೆಚ್ಚದಲ್ಲಿ ಲೈಫ್‌ಬೋಯಿ, ರಕ್ಷಣಾ ಟ್ಯೂಬ್‌, ಬೆಡ್‌ಗಳು, 30 ಲಕ್ಷ ರೂ. ವೆಚ್ಚದಲ್ಲಿ ಸರ್ಫಿಂಗ್‌ ಸಲಕರಣೆಗಳು, 1.60 ಕೋ.ರೂ. ವೆಚ್ಚದಲ್ಲಿ ತೇಲುವ ಜೆಟ್ಟಿ ನಿರ್ಮಾಣ ಯೋಜನೆಗಳು ಒಳಗೊಂಡಿದೆ.

ನದಿ ತೀರಗಳ ಅಭಿವೃದ್ಧಿ
ಸುಮಾರು 5 ಕೋ.ರೂ. ವೆಚ್ಚದಲ್ಲಿ ತಣ್ಣೀರುಬಾವಿ, 51.14 ಲಕ್ಷ ರೂ. ವೆಚ್ಚದಲ್ಲಿ ಸಸಿಹಿತ್ಲುನಲ್ಲಿ ನದಿ ತೀರಗಳ ಅಭಿವೃದ್ಧಿ ಯೋಜನೆಯೂ ಸ್ವದೇಶ ದರ್ಶನದಲ್ಲಿ ಒಳಗೊಂಡಿದೆ. ಇದರಲ್ಲಿ ಲ್ಯಾಂಡ್‌ಸ್ಕೇಪಿಂಗ್‌, ಪಾಥ್‌ವೇ, ಪಾದಚಾರಿ ಆಸನಗಳು, ನೀರು ಶುದ್ಧೀಕರಣ ಘಟಕ, ತಾತ್ಕಾಲಿಕ ರೆಸ್ಟ್‌ರೂಂ ಒಳಗೊಂಡಿವೆೆ.

ಅನುದಾನ ಬಿಡುಗಡೆ ನಿರೀಕ್ಷೆ
ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸರ್ಕ್ನೂಟ್ ಯೋಜನೆಯಡಿ ಮಂಗಳೂರಿನ ಎರಡು ಬೀಚ್‌ಗಳ ಅಭಿವೃದ್ಧಿಗೆ 25.52 ಕೋ.ರೂ. ಮಂಜೂರಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಉದಯ ಕುಮಾರ್‌,
ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next