Advertisement

“Coastal, ಮಲೆನಾಡಿನ ಪ್ರಣಾಳಿಕೆಯೂ ಕಾರ್ಯರೂಪಕ್ಕೆ’: ಮಂಜುನಾಥ ಭಂಡಾರಿ

01:12 AM Nov 01, 2023 | Team Udayavani |

ಮಂಗಳೂರು: ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ ಗ್ಯಾರಂಟಿಗಳ ಜತೆಗೆ ಕರಾವಳಿ ಮತ್ತು ಮಲೆನಾಡಿನ ಪ್ರತ್ಯೇಕ ಚುನಾವಣ ಪ್ರಣಾಳಿಕೆಗಳು ಕೂಡ ಕಾರ್ಯರೂಪಕ್ಕೆ ಬರುತ್ತಿವೆ. ಸರಕಾರ ನುಡಿದಂತೆ ನಡೆಯುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಪ್ರತ್ಯೇಕ ಚುನಾವಣಾ ಪ್ರಣಾಳಿಕೆ 10 ಅಂಶಗಳನ್ನು ಒಳಗೊಂಡಿತ್ತು. ಅದರಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮ ಮಾಡಲಾಗಿದೆ. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ವನ್ನು ಬಜೆಟ್‌ನಲ್ಲಿ ಸೇರಿಸಿಕೊಳ್ಳಲಾಗಿದೆ. ಮೀನುಗಾರ ಮಹಿಳೆಯರಿಗೆ 3 ಲ.ರೂ. ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಡೀಸೆಲ್‌ ಮೇಲಿನ ಸಬ್ಸಿಡಿ ಕೋಟಾವನ್ನು ಹೆಚ್ಚಿಸಲಾಗಿದೆ. ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಿಸಲಾಗಿದೆ. ಬಂಟರ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಿಗಮ ಸ್ಥಾಪನೆಯ ಅಗತ್ಯ ಮನಗಂಡು ಬಂಟ ಸಮುದಾಯದ ಸರ್ವತೋಮುಖ ಅಭಿವೃದ್ಧಿ, ಸಂಸ್ಕೃತಿಯ ಉಳಿವು, ಸಂಶೋಧನೆಗಾಗಿ, ಶೈಕ್ಷಣಿಕ ಬೆಂಬಲ, ಇತರ ಆರ್ಥಿಕ ಬೆಂಬಲಕ್ಕಾಗಿ ಎಲ್ಲರ ಒಮ್ಮತದ ಬೇಡಿಕೆಯಂತೆ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿದೆ. ಶೇ.60 ರಷ್ಟು ಮಂದಿ ಬಂಟರು ಹಳ್ಳಿ ಪ್ರದೇಶದಲ್ಲಿದ್ದು ಅತೀ ಹಿಂದುಳಿದವರಾಗಿದ್ದಾರೆ ಎಂದರು.

ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ
ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾತನಾಡಿ, ಇದುವರೆಗೆ ಯಾವ ಸರಕಾರ ಕೂಡ ಬಂಟ ಸಮು ದಾಯವನ್ನು ಗುರುತಿಸರಲಿಲ್ಲ. ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸು ತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಲಾ ಗುತ್ತಿಲ್ಲ. ಗ್ಯಾರಂಟಿ ಅನುಷ್ಠಾನದ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ಬಿಡುಗಡೆಯಾಗುತ್ತಿದೆ. ಪುತ್ತೂರಿಗೆ ಕುಡಿಯುವ ನೀರು ಯೋಜನೆಗೆ 1,010 ಕೋ.ರೂ. ಬಿಡುಗಡೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭವಾಗಲಿದೆ. ತುಳುಭಾಷೆ, ಕಂಬಳಕ್ಕೂ ಸರಕಾರದಿಂದ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಬಿಜೆಪಿಯವರು ಅಪಪ್ರಚಾರ ಮಾಡು
ತ್ತಿದ್ದಾರೆ. ಬಿಜೆಪಿಯವರ ನಿರ್ಲಕ್ಷ್ಯದಿಂ ದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗಳು ನನೆಗುದಿಗೆ ಬಿದ್ದಿವೆ ಎಂದರು.

ಬಿಜೆಪಿ ಶ್ರೀಮಂತರ ಪರ
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಶ್ರೀಮಂತರ ಸಾಲಮನ್ನಾ ಮಾಡುತ್ತಿದೆ. ಆದರೆ ಕಾಂಗ್ರೆಸ್‌ ಸರಕಾರ ಬಡವರಿಗಾಗಿ ಕೆಲಸ ಮಾಡುತ್ತಿದೆ. ದೇಶದಾದ್ಯಂತ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿ ಐಟಿ, ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next