Advertisement

ಉದಯವಾಣಿಯಲ್ಲಿ ಕರಾವಳಿಯ ಸಚಿವ ತ್ರಯರು: ಸಾರ್ವಜನಿಕರ ಪ್ರಶ್ನೆಗಳಿಗೆ ಸ್ಪಂದನೆ

04:08 PM Apr 30, 2022 | Team Udayavani |

ಮಣಿಪಾಲ : ‘ಕರಾವಳಿಯ ಅಭಿವೃದ್ಧಿಯ ಆದ್ಯತೆಗಳು’ ಎಂಬ ವಿಷಯದ ಕುರಿತು ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಒಂದೆಡೆ ಸೇರಿ ಉದಯವಾಣಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜನರ ಹಲವು ಸಮಸ್ಯೆಗಳಿಗೆ ಸ್ಪಂದನೆ ನೀಡಿದರು.

Advertisement

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಮತ್ತು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಫೋನ್‌ ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ರ್ವಜನಿಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು.

ಅಭಿವೃದ್ಧಿಯ ಆದ್ಯತೆ ಕುರಿತು ಸಲಹೆಗಳನ್ನು ಪಡೆದರು. ಉತ್ತರಕನ್ನಡ ಜಿಲ್ಲೆಯಲ್ಲಿ ನ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಕೆಲವೆಡೆ ಕಂಡು ಬಂದಿರುವ ವಿದ್ಯುತ್ ಸಮಸ್ಯೆ, ಮೀನುಗಾರರ ಸಮಸ್ಯೆಗಳ ಕುರಿತು ಸಚಿವ ತ್ರಯರು ಉತ್ತರ ನೀಡಿದರು.

ಹೊನ್ನಾವರ -ತಾಳಗುಪ್ಪ ನಡುವಿನ ರೈಲಿನ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಚಿವ ಶ್ರೀನಿವಾಸ ಪೂಜಾರಿ ಉತ್ತರಿಸಿದರು.

ಇಂಧನ ಸಚಿವ ಸುನಿಲ್ ಕುಮಾರ್ ಅವರು ‘ಎನ್ಓಸಿ ಇಲ್ಲದೆ ವಿದ್ಯುತ್ ಸಂಪರ್ಕವನ್ನು ಕೇವಲ ಬೆಳಕು ಯೋಜನೆಯಡಿ ಮಾತ್ರ ನೀಡಲಾಗುವುದು’ ಎಂದರು.

Advertisement

ಮೀನುಗಾರ ಜನಾಂಗದ ಉಪ ಜಾತಿಗಳ ಪರಿಶಿಷ್ಟ ಜಾತಿ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ ‘ ಸರಕಾರ ಈ ಬಗ್ಗೆ ಪರಿಶೀಲಿಸುತ್ತಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಉತ್ತರಿಸಿದರು.

ಗ್ರಾಮೀಣ ಭಾಗದ ರಸ್ತೆ ಸಂಪರ್ಕಗಳು, ಕರಾವಳಿಯ ಕೆಲವೆಡೆ ಅಗತ್ಯವಾಗಿರುವ ಸೇತುವೆಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಸಚಿವರು ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.

ಕರಾವಳಿಯಲ್ಲಿ ಗರಡಿಗಳನ್ನು ಸರಕಾರದ ವ್ಯಾಪ್ತಿಗೆ ತರುವ ವಿಚಾರ ಸರಕಾರದ ಮುಂದಿಲ್ಲ, ಈ ಬಗ್ಗೆ ಈ ಹಿಂದೆ ಕೇವಲ ಪ್ರಸ್ತಾವನೆಯಾಗಿತ್ತು ಮಾತ್ರ ಎಂದು ಶ್ರೀನಿವಾಸ ಪೂಜಾರಿ ಅವರು ಸ್ಪಷ್ಟ ಪಡಿಸಿದರು.

ಕರಾವಳಿಯ ಮೂರು ಜಿಲ್ಲೆಗಳಿಂದ ನೂರಾರು ಮಂದಿ ಕರೆ ಮಾಡಿ ಅಭಿವೃದ್ಧಿ ಕುರಿತಾಗಿನ ಸಲಹೆ, ಬೇಡಿಕೆಗಳನ್ನು ಸಚಿವರ ಮುಂದಿಡಲು ಉದಯವಾಣಿ ವೇದಿಕೆ ಯಾಯಿತು.

ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿರುವ ಸಚಿವರು ಅಧಿಕಾರಿಗಳೊಂದಿಗೆ ಈ ಬಗ್ಗೆ ಇಂದೇ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next