Advertisement
ಒಟ್ಟಾರೆ ಹಿಂಗಾರು ಅವಧಿಯ ಅಕ್ಟೋಬರ್ 1ರಿಂದ ಡಿಸೆಂಬರ್ ಅಂತ್ಯದವರೆಗೆ ಕರಾವಳಿ ಭಾಗದಲ್ಲಿ 259.4 ಮಿ.ಮೀ. ಮಳೆ ಸುರಿಯಬೇಕು. ಆದರೆ, ನಾಲ್ಕೇ ವಾರದಲ್ಲಿ (ಅ.25ರ ವರೆಗೆ) 247.6 ಮಿ.ಮೀ. ಮಳೆಯಾಗಿದೆ. ಹಿಂಗಾರು ಕೊನೆಗೊಳ್ಳಲು ಇನ್ನೂ ಎರಡು ತಿಂಗಳು ಇದ್ದು, ಮಳೆ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ ವಷವೂ ಕರಾವಳಿ ಭಾಗದಲ್ಲಿ ಹಿಂಗಾರು ಉತ್ತಮವಾಗಿತ್ತು. ದ.ಕ. ಜಿಲ್ಲೆಯಲ್ಲಿ ಶೇ. 46 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ.1ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆರಂಭದಲ್ಲಿಯೇ ಹಿಂಗಾರು ಬಿರುಸು ಪಡೆದುಕೊಂಡಿದ್ದು, ಮಳೆ ಪ್ರಮಾಣವೂ ಅಧಿಕವಾಗಿದೆ. ಈ ಕಾರಣಕ್ಕೆ ಹಿಂಗಾರು ಅವಧಿಯ ಇನ್ನಷ್ಟು ದಿನಗಳಲ್ಲಿ ಉತ್ತಮ ವರ್ಷಧಾರೆಯಾಗುವ ನಿರೀಕ್ಷೆ ಇದೆ.
Related Articles
ಕರಾವಳಿಗೆ ಹೋಲಿಕೆ ಮಾಡಿದರೆ ಅ. 1ರಿಂದ ಈವರೆಗೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಕಡಿಮೆ (ಶೇ.-35) ಮಳೆಯಾಗಿದ್ದು, ಕುಂದಾಪುರದಲ್ಲಿ ಅಧಿಕ (ಶೇ.156) ಮಳೆ ಸುರಿದಿದೆ. ಉಳಿದಂತೆ ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ವಾಡಿಕೆಗಿಂತ ಶೇ. 6 ಅಧಿಕ, ಮಂಗಳೂರುನಲ್ಲಿ ಶೇ. 21, ಬಂಟ್ವಾಳದಲ್ಲಿ ಶೇ. 9, ಪುತ್ತೂರಿನಲ್ಲಿ ಶೇ.16, ಸುಳ್ಯ ಶೇ. 21, ಮೂಡುಬಿದಿರೆ ಶೇ. 20, ಕಡಬ ಶೇ. 10, ಮೂಲ್ಕಿಯಲ್ಲಿ ಶೇ. 25, ಉಳ್ಳಾಲದಲ್ಲಿ ಶೇ. 8, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶೇ. 23, ಉಡುಪಿಯಲ್ಲಿ ಶೇ. 25, ಬೈಂದೂರಿನಲ್ಲಿ ಶೇ. 100, ಬ್ರಹ್ಮಾವರದಲ್ಲಿ ಶೇ. 2 ಮತ್ತು ಹೆಬ್ರಿಯಲ್ಲಿ ಶೇ. 108ರಷ್ಟು ಮಳೆ ವಾಡಿಕೆಗಿಂತ ಅಧಿಕ ಸುರಿದಿದೆ.
Advertisement
ಹಿಂಗಾರು ಮಳೆ ಪ್ರಮಾಣ (259.4 ಮಿ.ಮೀ. ವಾಡಿಕೆ ಮಳೆ)ವರ್ಷ – ಮಳೆ ಪ್ರಮಾಣ (ಶೇ.)
2016 – ಶೇ. 57
2017 – ಶೇ. 25
2018- ಶೇ. 28
2019 – ಶೇ. 124
2020- ಶೇ. 27
2021 – ಶೇ. 122
2022 – ಶೇ. 14
2023 – ಶೇ. 6