ಮಂಗಳೂರು: ವಾಮಂಜೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ದೇವರಪದವು ನಿವಾಸಿ ಹರಿಶ್ಚಂದ್ರ ಪೂಜಾರಿ (50) ಬುಧವಾರ ಮೃತಪಟ್ಟಿದ್ದಾರೆ.
Advertisement
ಅವರು ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದರು. ಸೂಕ್ತ ಸುರಕ್ಷತೆ ಕ್ರಮ ಅನುಸರಿಸದೆ ಕೆಲಸ ಮಾಡಿ ಸಿದ ಗುತ್ತಿಗೆದಾರರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ರೈಲ್ವೇಯ ಸೀನಿಯರ್ ಸೆಕ್ಷನ್ ಎಂಜಿನಿಯರ್ ಲೋಕೇಶ್ ಕುಮಾರ್ ಎ. 28ರಂದು ಸಂಜೆ 6.30ರ ಸುಮಾರಿಗೆ ಕಂಕನಾಡಿ ರೈಲ್ವೇ ಜಂಕ್ಷನ್‌ನ ಪಾರ್ಕಿಂಗ್ ಸ್ಥಳ ದಲ್ಲಿ ನಿಲ್ಲಿಸಿದ್ದ ಬೈಕ್ ಕಳವಾಗಿದ್ದು, ಪ್ರಕರಣ ದಾಖಲಾಗಿದೆ. ವ್ಯವಹಾರದಲ್ಲಿ ನಷ್ಟ: ವ್ಯಕ್ತಿ ನಾಪತ್ತೆ
ಮಂಗಳೂರು: ವ್ಯವಹಾರದಲ್ಲಿ ನಷ್ಟ ಹೊಂದಿದ್ದ ಅರಕೆರೆಬೈಲು ಜಪ್ಪು ನಿವಾಸಿ ಪುಷ್ಪರಾಜ (52) ನಾಪತ್ತೆಯಾಗಿದ್ದಾರೆ.
Related Articles
Advertisement
ಸಂಪಾಜೆ: ಕಂಟೈನರ್ ಲಾರಿ ಪಲ್ಟಿಅರಂತೋಡು: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಪಾಲ ಸಮೀಪ ಬುಧವಾರ ಕಂಟೈನರ್ ಲಾರಿ ಪಲ್ಟಿಯಾಗಿ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಮಡಿಕೇರಿ ಕಡೆ ಕಂಟೈನರ್ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಜಾತಿನಿಂದನೆ; ಪ್ರಕರಣ ದಾಖಲು
ಕುಂದಾಪುರ: ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಆವರಣ ಗೋಡೆ ಕೆಡವಿದ್ದನ್ನು ಪ್ರಶ್ನಿಸಿದ ಶಿಕ್ಷಕಿ ಹಾಗೂ ಬ್ಯಾರೀಸ್ ಬಾಲಕಿಯರ ವಸತಿ ನಿಲಯದ ವಾರ್ಡನ್‌ಗೆ ಜಾತಿನಿಂದನೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಫಿರೋಜ್ (25), ಸಲೀಂ ಮಲ್ಲಿಕ್ (28) ಅವರು ಬ್ಯಾರೀಸ್ ವಿದ್ಯಾಸಂಸ್ಥೆಯ ಆವರಣ ಗೋಡೆ ಕೆಡವುತ್ತಿದ್ದಾರೆಂದು ಭದ್ರತಾ ಸಿಬಂದಿ ಮನೀಷ್ ರಾಯ್ ಮಾಹಿತಿ ನೀಡಿದರು. ವಾರ್ಡನ್ ವೀಣಾ ಆಗೇರ ಅವರು ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಜಾತಿನಿಂದನೆ ಮಾಡಿ ಎಳೆದಿದ್ದಾರೆ. ಬ್ಯಾರೀಸ್ ವಿದ್ಯಾಸಂಸ್ಥೆಯ ಸ್ಥಿರಾಸ್ತಿಯಲ್ಲಿ ಸುಳ್ಳು ಹಕ್ಕು ಸ್ಥಾಪಿಸುವ ದುರುದ್ದೇಶ ಹೊಂದಿ ದುಷ್ಕೃತ್ಯ ಎಸಗಿದ್ದಾಗಿ ಪ್ರಕರಣ ದಾಖಲಾಗಿದೆ. ಮಲಗಿದಲ್ಲೇ ಅಪರಿಚಿತ ಸಾವು
ಕುಂದಾಪುರ: ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಹೊಟೇಲ್ ಒಂದರ ಜಗಲಿಯಲ್ಲಿ ಮಲಗಿದಲ್ಲೇ ಮೃತಪಟ್ಟಿದ್ದಾರೆ. ಶಾಸ್ತ್ರಿ ಸರ್ಕಲ್ ಬಳಿ ಹೊಟೇಲ್ ಒಂದರ ಹೊರಗೆ ನೆಲದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪುರುಷನ ಮೃತದೇಹ ದೊರೆತಿದೆ. ಸುಮಾರು 55-60 ವರ್ಷ ಪ್ರಾಯವೆಂದು ಅಂದಾಜಿಸಿದ್ದು, ಟೀ ಶರ್ಟ್ ಮತ್ತು ಬಿಳಿ ಬಣ್ಣದ ಚಡ್ಡಿ ಧರಿಸಿದ್ದರು. ಕಪ್ಪು ಬಿಳಿ ಬಣ್ಣದ ತಲೆ ಕೂದಲು ಕುರುಚಲು ಗಡ್ಡ ಹೊಂದಿದ್ದು ಕಪ್ಪು ಮೈ ಬಣ್ಣ ಹೊಂದಿದ್ದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.