Advertisement

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

05:46 PM May 06, 2024 | Team Udayavani |

ಕೊಚ್ಚಿ: ಕೇರಳದ ಕರಾವಳಿಯಲ್ಲಿ ಆರು ಭಾರತೀಯ ಮೀನುಗಾರರಿದ್ದ ಇರಾನ್ ನ ಮೀನುಗಾರಿಕಾ ಹಡಗನ್ನು ತಡೆಹಿಡಿದು ವಶಕ್ಕೆ ತೆಗೆದುಕೊಂಡಿರುವುದಾಗಿ ಭಾರತೀಯ ಕೋಸ್ಟ್ ಗಾರ್ಡ್ ಸೋಮವಾರ ತಿಳಿಸಿದೆ.

Advertisement

ತಮಿಳುನಾಡಿನ ಕನ್ಯಾಕುಮಾರಿ ಮೂಲದ ಆರು ಮಂದಿ ಮೀನುಗಾರರು ಇರಾನ್ ಮೂಲದ ಸೈಯದ್ ಸೌದ್ ಅನ್ಸಾರಿ ಎಂಬವರಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಮೀನುಗಾರರನ್ನು ಕನಿಷ್ಠವಾಗಿ ನಡೆಸಿಕೊಳ್ಳಲಾಗಿದ್ದು, ಅವರಿಗೆ ಮೂಲಭೂತ ಜೀವನ ಪರಿಸ್ಥಿತಿಗಳನ್ನೂ ಸಹ ಒದಗಿಸಿರಲ್ಲ. ಹೀಗಾಗಲಿ ಹಡಗನ್ನು ಬಳಸಿ ಇರಾನ್‌ನಿಂದ ಭಾರತಕ್ಕೆ ಪರಾರಿಯಾಗಲು ನಿರ್ಧರಿಸಿದ್ದರು ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.

ಕೋಸ್ಟ್ ಗಾರ್ಡ್ ತನ್ನ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತ್ವರಿತವಾಗಿ ನಿಯೋಜಿಸಿ ಇರಾನ್ ಹಡಗನ್ನು ತಡೆಯಿತು. ಕೋಸ್ಟ್ ಗಾರ್ಡ್ ಬೋರ್ಡಿಂಗ್ ತಂಡ ಹಡಗನ್ನು ಹತ್ತಿ ಆರು ಮೀನುಗಾರರು ಕೆಲಸ ಮಾಡುತ್ತಿದ್ದುದನ್ನು ಕಂಡುಕೊಂಡರು. ಯಾವುದೇ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವ ಸಾಧ್ಯತೆಯ ಬಗ್ಗೆ ದೋಣಿಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಪರಿಶೀಲನೆಯ ನಂತರ ಹೆಚ್ಚಿನ ತನಿಖೆಗಾಗಿ ಹಡಗನ್ನು ಕೊಚ್ಚಿಗೆ ತರಲಾಗಿದೆ.

2023 ಮಾರ್ಚ್ 26 ರಿಂದ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು ನಮ್ಮ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next