ಮುಂಬಯಿ: ಕಲ್ಲಿದ್ದಲು ಸರಬರಾಜು ಮಾಡುವ ಕೆಲಸಕ್ಕಾಗಿ ಮಹಾರಾಷ್ಟ್ರ ಸ್ಟೇಟ್ ಮೈನಿಂಗ್ ಕಾರ್ಪೊರೇಶನ್ ಲಿ. (ಎಂಎಸ್‌ಎಂಸಿ) ಖಾಸಗಿ ಸಂಸ್ಥೆಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿದೆ ಎಂದು ಆರೋಪಿ ಸಿರುವ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ಟೆಂಡರಿಂಗ್ ಕಾರ್ಯವಿಧಾನದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕಲ್ಲಿದ್ದಲು ತೊಳೆಯುವ ಮತ್ತು ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನ ಕಂಪೆನಿಗೆ ಸರಬರಾಜು ಮಾಡುವ ಕೆಲಸಕ್ಕಾಗಿ ರುಖೆ¾ ç ಇನ್‌ಫ್ರಾಸ್ಟ್ರಕ್ಚರ್ಸ್ ಪ್ರೈ. ಲಿ. ಅನ್ನು ಆಯ್ಕೆ ಮಾಡಲಾಗಿದೆ. ಜೂ. 26ರಂದು ಮುಖ್ಯ ಮಂತ್ರಿಗೆ ಬರೆದ ಪತ್ರದಲ್ಲಿ ಈ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವುದರಿಂದ ಕಂಪೆನಿಗೆ ನೀಡಲಾಗುವ ಟೆಂಡರ್ ಅನ್ನು ತತ್‌ಕ್ಷಣವೇ ನಿಲ್ಲಿಸಬೇಕು ಎಂದು ಪಟೋಲೆ ಹೇಳಿದ್ದಾರೆ.
ರುಖೆ¾ ç ಮೂಲ ಸೌಕರ್ಯಗಳನ್ನು ಈ ವರ್ಷ ಮೇ 21ರಂದು ಮಹಾರಾಷ್ಟ್ರ ಸ್ಟೇಟ್ ಮೈನಿಂಗ್ ಕಾರ್ಪೊರೇಶನ್ ಲಿ. ಆಯ್ಕೆ ಮಾಡಿದೆ. ಆದರೆ ಸ್ವೀಕರಿಸಿದ ದೂರುಗಳ ಪ್ರಕಾರ ಕಂಪೆನಿಗೆ ಯಾವುದೇ ನೆಟ್‌ವರ್ಕ್, ವಹಿವಾಟು, ಭದ್ರತಾ ತೆರವು ಮತ್ತು ಕಲ್ಲಿದ್ದಲು ತೊಳೆಯುವಲ್ಲಿ ಅನುಭವವಿಲ್ಲ. ಅದೇ ರೀತಿ ರುಖೆ¾ ç ಮೂಲಸೌಕರ್ಯ ಹೊಂದಿರುವ ಕಂಪೆನಿ ಜಂಟಿ ಉದ್ಯಮವನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿ (ಎನ್‌ಸಿಎಲ್‌ಟಿ) ಕಪ್ಪುಪಟ್ಟಿಗೆ ಸೇರಿಸಿದೆ.
ರುಖೆ¾ ç ಮೂಲ ಸೌಕರ್ಯಕ್ಕೆ ಯಾವುದೇ ಮಾನದಂಡಗಳನ್ನು ಪೂರೈಸದಿದ್ದರೂ ಟೆಂಡರ್ ನೀಡಲಾಯಿತು ಎಂದು ಆರೋಪಿಸಿರುವ ಪಟೋಲೆ, ಕಂಪೆನಿಯು ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನ ಕಂಪೆನಿಗೆ ಸಮಯಕ್ಕೆ ಸರಿಯಾಗಿ ಕಲ್ಲಿದ್ದಲು ಪೂರೈಸುವುದು ಅಸಾಧ್ಯ. ಇದರಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಟೆಂಡರ್ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು, ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಅವರಿಗೂ ಪತ್ರದ ಪ್ರತಿಯನ್ನು ಸಲ್ಲಿಸಿದ್ದಾರೆ.
ಈ ಪತ್ರವು ವಿದ್ಯುತ್ ಇಲಾಖೆಗೆ ವಿರುದ್ಧವಾಗಿಲ್ಲ, ಆದರೆ ಎಂಎಸ್‌ಎಂಸಿಯ ಟೆಂಡರ್‌ಗೆ ವಿರುದ್ಧವಾಗಿದೆ. ಇದು ವಿದ್ಯುತ್ ಇಲಾಖೆಗೆ ಸಂಬಂಧವಿಲ್ಲ. ನನ್ನ ಮತ್ತು ನನ್ನ ಸಹೋದ್ಯೋಗಿ ನಿತಿನ್ ರಾವುತ್ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಪಟೋಲೆ ಹೇಳಿದ್ದಾರೆ.