Advertisement

World Cup ಫೈನಲ್ ನಲ್ಲಿ ಭಾರತಕ್ಕೆ ಸೋಲು: ಕೋಚ್ ಆಗಿ ಮುಂದುವರೆಯುತ್ತಾರಾ ದ್ರಾವಿಡ್ ?

09:25 AM Nov 20, 2023 | Team Udayavani |

ನವದೆಹಲಿ: ಭಾನುವಾರ ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯಾವಳಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ೬ ವಿಕೆಟ್ ಗಳಿಂದ ಸೋಲನ್ನಪಿದೆ.

Advertisement

ಈ ನಡುವೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದವು ಭಾನುವಾರ ಕೊನೆಗೊಂಡಿದೆ.

ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್ ತನ್ನ ಭವಿಷ್ಯದ ಬಗ್ಗೆ ತಾನು ಯೋಚಿಸಿಲ್ಲ ಅಲ್ಲದೆ ಈ ಬಗ್ಗೆ ಆಲೋಚನೆ ಮಾಡಲು ಸಮಯಾವಕಾಶ ಬೇಕಾಗಿದೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಪಂದ್ಯಾವಳಿ ತವರು ನೆಲದಲ್ಲಿ ಆಡುತ್ತಿದ್ದರೂ, ಆಸ್ಟ್ರೇಲಿಯಾ ತಂಡದ ಕೈಯಲ್ಲಿ ಭಾರತವು ಹೀನಾಯ ಸೋಲನ್ನು ಎದುರಿಸಿತು ಎಂದು ಹೇಳಿದರು.

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್‌ ಗೆದ್ದು ಜಾಣ್ಮೆಯ ನಿರ್ಧಾರವನ್ನು ತೆಗೆದುಕೊಂಡರು, ಸಂಜೆಯ ಇಬ್ಬನಿಯು ಭಾರತದ ಬೌಲಿಂಗ್ ದಾಳಿಗೆ ಅಡ್ಡಿಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಭಾರತದ ಅಸಾಧಾರಣ ಬ್ಯಾಟಿಂಗ್ ಲೈನ್‌ಅಪ್ ಆಸ್ಟ್ರೇಲಿಯದ ಕಠಿಣ ಬೌಲಿಂಗ್‌ ದಾಳಿಗೆ ನಮ್ಮ ತಂಡ ಸೆಣಸಾಡಬೇಕಾಯಿತು ಎಂದು ಹೇಳಿದರು.

Advertisement

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಮ್ಮ ಅರ್ಧಶತಕಗಳೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು, ಇದರೊಂದಿಗೆ ಭಾರತವು ನಿಗದಿತ 50 ಓವರ್‌ಗಳಲ್ಲಿ 240 ರನ್ ಗಳಿಸಲು ಯಶಸ್ವಿಯಾಯಿತು, ಆದರೆ ಆಸ್ಟ್ರೇಲಿಯಾದ ಬೌಲರ್‌ಗಳು, ವಿಶೇಷವಾಗಿ ಪ್ಯಾಟ್ ಕಮಿನ್ಸ್ (2/34), ಜೋಶ್ ಹ್ಯಾಜಲ್‌ವುಡ್ (2/60), ಮತ್ತು ಮಿಚೆಲ್ ಸ್ಟಾರ್ಕ್ (3/55) ಉತ್ತಮ ಆಕ್ರಮಣಕಾರಿ ಬೌಲಿಂಗ್ ನಿಂದ ನಮ್ಮ ಆಟಗಾರರನ್ನು ಹತೋಟಿಯಲ್ಲಿಡುವಲ್ಲಿ ಯಶಸ್ವಿಯಾದರು.

ಈ ನಡುವೆ ಕೋಚ್ ಆಗಿ ಮುಂದುವರೆಯುವ ಕುರಿತು ಕೇಳಿದ ಪ್ರಶ್ನೆಗೆ ದ್ರಾವಿಡ್ ಅವರು ವಿಶ್ವಕಪ್ 2023 ರ ಅಭಿಯಾನದ ಮೇಲೆ ಗಮನಹರಿಸಿದ್ದರಿಂದ ತಮ್ಮ ಭವಿಷ್ಯದ ಬಗ್ಗೆ ಯೋಚಿಸಲಿಲ್ಲ ಎಂದು ಹೇಳಿದರು.

“ಪ್ರಾಮಾಣಿಕವಾಗಿ, ನಾನು ಅದರ ಬಗ್ಗೆ ಯೋಚಿಸಿಲ್ಲ. ನಮ್ಮ ಎಲ್ಲಾ ಅಭಿಯಾನಗಳು, ನಮ್ಮ ಎಲ್ಲಾ ಶಕ್ತಿಗಳು ಈ ಪಂದ್ಯದ ಮೇಲೆ ಕೇಂದ್ರೀಕೃತವಾಗಿವೆ ಮತ್ತು ನಾನು ಅದರ ಬಗ್ಗೆ ಯಾವುದೇ ಆಲೋಚನೆಯನ್ನು ಮಾಡಿಲ್ಲ. ನಾನು ಮುಂದೆ ಎಂದು ಮಾಡಬೇಕು ಎಂಬುದರ ಕುರಿತು ಯಾವುದೇ ಯೋಜನೆಗಳನ್ನು ಮಾಡಲಿಲ್ಲ ಎಂದು ದ್ರಾವಿಡ್ ಹೇಳಿದರು.

ನೀವು ಕೇವಲ ವೈಟ್-ಬಾಲ್ ಅಥವಾ ರೆಡ್-ಬಾಲ್ ಕೋಚ್ ಆಗಿ ಮುಂದುವರಿಯಲು ಬಯಸುತ್ತೀರಾ ಎಂದು ಕೇಳಿದಾಗ, ದ್ರಾವಿಡ್ ಮತ್ತೊಮ್ಮೆ ನಾನು ಅದರ ಬಗ್ಗೆ ಯೋಚಿಸಿಲ್ಲ ಮತ್ತು ಸಮಯ ಸಿಕ್ಕರೆ ಅದರ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Rosalynn Carter: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಪತ್ನಿ ವಿಧಿವಶ

Advertisement

Udayavani is now on Telegram. Click here to join our channel and stay updated with the latest news.

Next