Advertisement
ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ನಿಮಿಸಲಾದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ಹಾಲು ಉತ್ಪಾದಕರಿಗೆ ಹಸಿರು ಶಾಲು ಹಾಕಿ ತೆಂಗಿನ ಗಿಡ ವಿತರಿಸಲಾಯಿತು. ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮುಖಂಡ ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಸಂಘದ ಅಧ್ಯಕ್ಷ ಬಸವರಾಜಸ್ವಾಮಿ ಕಂದಗಲ್ಲಮಠ, ಉಪಾಧ್ಯಕ್ಷ ಈರಪ್ಪ ಸದರಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಆಡೂರು, ರಾಬಕೊ ನಿರ್ದೇಶಕಿ ಕವಿತ ಗುಳಗಣ್ಣವರ್, ಕ್ಷೇತ್ರ ಸಹಾಯಕ ಬಸವರಾಜ ಯರದೊಡ್ಡಿ, ಸಮಾಲೋಚಕ ಸೋಮಶೇಖರ ಗುರಿಕಾರ, ಕ್ಷೇತ್ರ ಸಹಾಯಕಿ ರತ್ಮಮ್ಮ ಹಕ್ಕಂಡಿ, ಕಾರ್ಯದರ್ಶಿ ಶಿವಕುಮಾರ ಸಿದ್ನಕೊಪ್ಪ, ಗ್ರಾಪಂ ಸದಸ್ಯರು, ಆಡಳಿತ ಮಂಡಳಿ ನಿರ್ದೇಶಕರು, ಮುಖಂಡರಿದ್ದರು. ಜಗತ್ತಿನಲ್ಲಿ ದೇವಾನು ದೇವತೆಗಳನ್ನು ಕಾಮಧೇನು, ಕಲ್ಪವೃಕ್ಷಕ್ಕೆ ಹೊಲಿಸುತ್ತಾರೆ. ಕಾಮಧೇನು ನಂಬಿದರೆ ಕಷ್ಟ ದೂರ ಆಗುತ್ತದೆ. ಆ ನಿಟ್ಟಿನಲ್ಲಿ ದ್ಯಾಂಪೂರಿನ ಜನತೆ ಹಾಗೂ ಸುತ್ತಲಿನ ಜನತೆ ಕಾಮಧೇನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಹಾಲು ಉತ್ಪಾದಕರಿಗೆ ತೆಂಗಿನ ಸಸಿ ಸಹ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ವಿಭಿನ್ನ ಕಾರ್ಯ. ಇದರಿಂದ ಪರಿಸರ ಸಂರಕ್ಷಣೆ ಹಾಗೂ ಮುಂದಿನ ದಿನಗಳಲ್ಲಿ ರೈತರಿಗೆ ತೆಂಗಿನ ಗಿಡದಿಂದ ಫಲ ಸಹ ಸಿಗುತ್ತದೆ ಎಂದರು. –ಶ್ರೀಮಹಾದೇವ ದೇವರು, ಅನ್ನದಾನೀಶ್ವರ ಶಾಖಾಮಠ