Advertisement

ಸಹಕಾರಿ ಸಂಘ, ಕ್ರೀಡಾಂಗಣಕ್ಕೆ ನಿವೇಶನ ಕಲ್ಪಿಸಿ

12:31 PM Oct 09, 2017 | Team Udayavani |

ತಿ.ನರಸೀಪುರ: ಚೌಹಳ್ಳಿ ಗ್ರಾಮದಲ್ಲಿ ಸಹಕಾರಿ ಸಂಘಗಳ ಕಟ್ಟಡಗಳಿಗೆ ಹಾಗೂ ಕ್ರೀಡಾಂಗಣಕ್ಕೆ ಅಗತ್ಯವಿರುವ ನಿವೇಶನ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ತಾಲೂಕಿನ ಚೌಹಳ್ಳಿ ಗ್ರಾಮದಲ್ಲಿ ಭಾನುವಾರ ಸಾಮಾನ್ಯ ವರ್ಗಗಳ ಜನರು ವಾಸಿಸುವ ರಸ್ತೆಗಳನ್ನು 25 ಲಕ್ಷ ರೂಗಳ ವೆಚ್ಚದಲ್ಲಿ ಸಿಮೆಂಟ್‌ ಚರಂಡಿ ಮತ್ತು ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ನೀರು ಬಳಕೆದಾರರ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಾಗೂ ಯುವಕರ ಒತ್ತಾಯದಂತೆ ಕ್ರೀಡಾಂಗಣಕ್ಕೆ ಸೂಕ್ತ ನಿವೇಶನವನ್ನು ಮಂಜೂರು ಮಾಡುವಂತೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮದ ಆಸುಪಾಸಿನಲ್ಲಿರುವ ಸರ್ಕಾರಿ ಜಾಗವನ್ನು ಸರ್ವೇ ಮಾಡಿ, ಗ್ರಾಮಸ್ಥರ ಬೇಡಿಕೆಯಂತೆ ನಿವೇಶನ ಕಲ್ಪಿಸಿಕೊಡಬೇಕು. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಡಿಕೆ ಕೇಳಿ ಬರುತ್ತಿರುವುದರಿಂದ ಸ್ಥಳ ಪರಿಶೀಲನೆ ನಡೆಸಿ, ಅಂದಾಜು ಪಟ್ಟಿ ತಯಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವಂತೆ ಜಿಪಂ ತಾಂತ್ರಿಕ ವಿಭಾಗದ ಕಾರ್ಯಪಾಲಕ ಅಭಿಯಂತರ ರಂಗಯ್ಯ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಪಿ.ಲಕ್ಷ್ಮಣ್‌ರಾವ್‌ರಿಗೆ ಸೂಚಿಸಿದರು.

ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಜನರ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ನಂತರ ಹಿಂ.ವರ್ಗಗಳು, ಅಲ್ಪ$ಸಂಖ್ಯಾತರು ಹಾಗೂ ಸಾಮಾನ್ಯ ವರ್ಗಗಳ ಜನರ ವಾಸಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಎಲ್ಲಾ ಗ್ರಾಮಗಳಲ್ಲೂ ಬಾಕಿ ಉಳಿದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅಂತಿಮ ಹಂತ ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರದಿಂದ 30 ಕೋಟಿ ರೂಗಳ ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌, ಜಿಪಂ ಸದಸ್ಯ ಟಿ.ಎಚ್‌.ಮಂಜುನಾಥನ್‌, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿರ್ದೇಶಕ ಕೊತ್ತೇಗಾಲ ಬಸವರಾಜು, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು, ತಾಪಂ ಸದಸ್ಯರಾದ ಕುಮುದ, ರಾಮಲಿಂಗಯ್ಯ, ಕೆ.ಎಸ್‌.ಗಣೇಶ್‌, ಆರ್‌.ಚಲುವರಾಜು, ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಜೆ.ಅನೂಪ್‌ಗೌಡ, ಮಾಜಿ ಸದಸ್ಯ ಕೆ.ಜಿ.ವೀರಣ್ಣ,

-ಪುರಸಭಾ ಸದಸ್ಯರಾದ ಸಿ.ಉಮೇಶ್‌(ಕನಕಪಾಪು), ರಾಘವೇಂದ್ರ, ಲೋಕೋಪಯೋಗಿ ಇಇ ರವಿಕುಮಾರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್‌.ವಿನಯ್‌ಕುಮಾರ್‌, ಜಿಪಂ ತಾಂತ್ರಿಕ ಉಪವಿಭಾಗದ ಎಇಇ ಎಸ್‌.ಸಿದ್ದರಾಜು, ತಾಪಂ ಇಒ ಬಿ.ಎಸ್‌.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ, ಗ್ರಾಪಂ ಸದಸ್ಯರಾದ ಹೊಸಹಳ್ಳಿ ಮಾದೇಶ, ಸಿದ್ದನಹುಂಡಿ ಸೋಮಣ್ಣ ಮತ್ತಿತರರಿದ್ದರು.

ಮಾದಾಪುರ ಆರೋಗ್ಯ ಕೇಂದ್ರ ಲೋಕಾರ್ಪಣೆ: ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ 80 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಆರೋಗ್ಯ ಸೇವೆಗೆ ಲೋಕಾರ್ಪಣೆ ಮಾಡಿದರು.

ತಾಲೂಕಿನ ಚೌಹಳ್ಳಿ, ನಿಲಸೋಗೆ ಹಾಗೂ ಹಿರಿಯೂರು ಗ್ರಾಮದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾದಾಪುರ ಗ್ರಾಮಕ್ಕೆ ತೆರಳಿದರು. ಮಾದಾಪುರ ಗ್ರಾಮಕ್ಕೆ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನೀಡಬೇಕೆಂಬ ತಮ್ಮ ಬಹುವರ್ಷಗಳ ಕನಸನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸುವ ಮೂಲಕ ಸಾಕಾರಗೊಳಿಸಿದ್ದೇನೆಂದರು.

ಅಲ್ಲದೆ, ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಸಮಾಲೋಚನೆ ನಡೆಸಿದರು. ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌, ಜಿಪಂ ಸದಸ್ಯ ಟಿ.ಎಚ್‌.ಮಂಜುನಾಥನ್‌, ಗ್ರಾಪಂ ಅಧ್ಯಕ್ಷ ಮಾದಪ್ಪ(ಚಂಡಿಪ್ರಕಾಶ್‌), ಗುತ್ತಿಗೆದಾರ ಪ್ರಸಾದ್‌, ಹೊಸಪುರ ಕೆ.ಮಲ್ಲು, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಲ್‌.ಶ್ರೀನಿವಾಸ್‌, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೋಭಾರಾಣಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next