ಮುಂಬಯಿ : ಆ್ಯಸಿಡ್ ದಾಳಿಯಲ್ಲಿ ಬದುಕುಳಿದ ಮಹಿಳೆಯರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ, ಬ್ಯಾಂಕರ್, ಅಮೃತಾ ಫಡ್ನವೀಸ್ ramp ಮೇಲೆ ನಡೆಯಲಿದ್ದಾರೆ.
ಅಮೃತಾ ಫಡ್ನವೀಸ್ ಅವರ “ದಿವ್ಯಜ ಪ್ರತಿಷ್ಠಾನ’ ಮಾರ್ಚ್ 5ರಂದು ಈ ಕಾರ್ಯಕ್ರಮವನ್ನು ಸಂಘಟಿಸಿದೆ.
ಅಮೃತಾ ಫಡ್ನವೀಸ್ ಅವರು ಈ ಹಿಂದೆ ನ್ಯೂಯಾರ್ಕ್‌ನಲ್ಲಿ “ಹೆಣ್ಣುಮಕ್ಕಳ ಶಿಕ್ಷಣ’ಕ್ಕಾಗಿ ನಡೆದಿದ್ದ ಫ್ಯಾಶನ್ ಸಪ್ತಾಹದಲ್ಲಿ ramp ಮೇಲೆ ನಡೆದಿದ್ದರು.
ಆ್ಯಸಿಡ್ ದಾಳಿ ಸಂತ್ರಸ್ತ್ರರನ್ನು ನಾವು ಬದುಕುಳಿದ ವನಿತೆಯರು ಎಂದೆಲ್ಲ ಹೇಳಬಾರದು; ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಘಾಸಿಗೊಂಡಿರಬಹುದು; ಆದರೂ ಅವರು ತಮ್ಮ ಬದುಕನ್ನು ಸವಾಲಾಗಿ ತೆಗೆದುಕೊಂಡಿದ್ದು ಆ ಕಾರಣಕ್ಕಾಗಿ ಅವರು ನಿಜಕ್ಕೂ ವಿಜೇತರು. ಆ್ಯಸಿಡ್ ಅಟ್ಯಾಕ್‌ಗೆ ಗುರಿಯಾದ ಮಹಿಳೆಯರೊಂದಿಗೆ ಈ ಬಾರಿ ಇಬ್ಬರು ಹುಡುಗರು ಕೂಡ ರಾಂಪ್ ಮೇಲೆ ನಡೆದಾಡಲಿದ್ದಾರೆ ಎಂದು ಅಮೃತಾ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನೊಂದಿಗೆ ತನ್ನ ಮಗಳು ದಿವಿಜಾ ಕೂಡ ramp ಮೇಲೆ ನಡೆದಾಡಳಿದ್ದಾಳೆ ಎಂದು ಅಮೃತಾ ತಿಳಿಸಿದ್ದಾರೆ.
ಆ್ಯಸಿಡ್ ಅಟ್ಯಾಕ್ ಗುರಿಯಾಗಿ ಬದುಕನ್ನೇ ಕಳೆದುಕೊಂಡಿರುವ ನತದೃಷ್ಟ ಮಹಿಳೆಯರಿಗೆ ಸೂಕ್ತ ಉದ್ಯೋಗ ಕೊಡಿಸುವಂತೆ ಅಮೃತಾ ಅವರು ಹಲವಾರು ಕಾರ್ಪೊರೇಟ್‌ಗಳನ್ನು ಕೇಳಿಕೊಂಡಿದ್ದಾರೆ.