Advertisement
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಮೋದಿಯವರನ್ನು ನಿಂದಿಸಿದಷ್ಟು ಅವರ ಜನಪ್ರಿಯತೆ ಗಟ್ಟಿಗೊಳ್ಳುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಸೋಲಲಿದೆ ಎಂಬ ಖಾತರಿಯಿಂದಲೇ ಸಿಎಂ ರಾಜಕೀಯ ನಿವೃತ್ತಿ ಮಾತನಾಡಿದ್ದಾರೆ.ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಹೇಳಿದ್ದಾರೋ ಅದು ಸತ್ಯವಾಗಿದೆ. ಎನ್ ಡಿಆರ್ ಎಫ್ ಅಡಿಯಲ್ಲಿ ಶೇ.75ರಷ್ಟು ಹಣ ನೀಡಲಾಗಿದೆ. ಕಾಂಗ್ರೆಸ್ ಸದಾ ಸುಳ್ಳು ಹೇಳುತ್ತ ಬಂದಿದ್ದು, ಬರ ಪರಿಹಾರ ವಿಚಾರದಲ್ಲಿ ಅದನ್ನೇ ಮುಂದುವರೆಸಿದೆ ಎಂದು ಆರೋಪಿಸಿದರು.