ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನ್ನ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್ ಬಗ್ಗೆ ಮಾತನಾಡಿದ್ದು, “ಒಮ್ಮೆ ಅಲ್ಲಿ ತಯಾರಾದ ಫಿರಂಗಿಗಳು ಘರ್ಜಿಸಿದರೆ, ಪಾಕಿಸ್ತಾನವು ವಿಶ್ವ ಭೂಪಟದಿಂದ ತನ್ನಷ್ಟಕ್ಕೇ ಮಾಯವಾಗುತ್ತದೆ” ಎಂದಿದ್ದಾರೆ.
ಬಂದಾದಲ್ಲಿ ಬುಂದೇಲ್ಖಂಡ್ ಪ್ರಾಂತ್ಯದ ಕಲಿಂಜರ್ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಈ ಪ್ರದೇಶವನ್ನು ಅಭಿವೃದ್ಧಿಯೊಂದಿಗೆ ಸಂಪರ್ಕಿಸಲು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿದೆ. ಇದೀಗ ಚಿತ್ರಕೂಟ ಮತ್ತು ಡೆಲ್ಲಿ ನಡುವಿನ ಪ್ರಯಾಣವು ಸುಮಾರು ಐದು ಗಂಟೆಗಳಷ್ಟು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಆಕ್ರೋಶ: ಪ್ರಧಾನಿ ಮೋದಿ ಮತ್ತು ಅದಾನಿ ಕುರಿತು ಅಮೆರಿಕದ ಹೂಡಿಕೆದಾರ ಸೊರೋಸ್ ಹೇಳಿದ್ದೇನು?
ಚಿತ್ರಕೂಟದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ರಕ್ಷಣಾ ಕಾರಿಡಾರ್ ನಿರ್ಮಾಣವಾಗುತ್ತಿದೆ. ಒಮ್ಮೆ ಅಲ್ಲಿ ತಯಾರಾದ ಫಿರಂಗಿಗಳು ಘರ್ಜಿಸಿದರೆ, ಪಾಕಿಸ್ತಾನವು ವಿಶ್ವ ಭೂಪಟದಿಂದ ತನ್ನಷ್ಟಕ್ಕೇ ಮಾಯವಾಗುತ್ತದೆ ಎಂದು ಯೋಗಿ ಹೇಳಿದರು.
ರಕ್ಷಣಾ ವಲಯದಲ್ಲಿ ವಿದೇಶಗಳ ಮೇಲಿನ ಭಾರತದ ಅವಲಂಬನೆಯನ್ನು ತಪ್ಪಿಸಲು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಎಂಬ ಮಹತ್ವದ ಯೋಜನೆ ಜಾರಿ ಮಾಡಲಾಗಿದೆ.