Advertisement
ನೂರಾರು ಸಾಧು ಸಂತರನ್ನು ಆಮಂತ್ರಿ ಸಲಾಗಿದ್ದು, ಅವರ ಆತಿಥ್ಯಕ್ಕಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸಮಾರಂಭದಲ್ಲಿ ಮಠಾಧೀಶರು, ಸ್ವಾಮೀಜಿಯವರಿಗೆ ಪ್ರತ್ಯೇಕ ಆಸನ ಇತ್ತು. ಯೋಗಿ ಮತ್ತೆ ಅಧಿಕಾರ ಸ್ವೀಕರಿಸುತ್ತಿರುವುದನ್ನು ಉತ್ತರ ಪ್ರದೇಶದ ಜನ ಸಂಭ್ರಮಿಸುತ್ತಿರುವುದು ಎಲ್ಲೆಲ್ಲೂ ಕಂಡುಬಂತು. ರಸ್ತೆ ಇಕ್ಕೆಲಗಳಲ್ಲಿ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ನೂರಾರು ನೃತ್ಯ ತಂಡಗಳ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಬ್ಯಾಂಡ್ ಇತ್ಯಾದಿ ವಾದ್ಯಗಳನ್ನು ನುಡಿಸುತ್ತ ಸಂಭ್ರಮಿಸುತ್ತಿದ್ದರು ಎಂದು ಪೇಜಾವರ ಶ್ರೀಗಳು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಲಕ್ನೋದಲ್ಲಿ ಶುಕ್ರವಾರ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಲಕ್ಷಾಂತರ ಜನ ಸಮಾರಂಭಕ್ಕೆ ಆಗಮಿಸಿದ್ದರಿಂದ ಮತ್ತು ಮೋದಿ, ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಆಗಮಿಸಿದ್ದರಿಂದ ಅವರ ಬೆಂಗಾವಲು ವಾಹನಗಳ ಸರತಿ ಸಾಲು ಪ್ರಮುಖ ರಸ್ತೆಗಳಲ್ಲಿ ಸೇರಿದ್ದರಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಅನೇಕರು ಸಿಲುಕಿದರು. ಪೇಜಾವರ ಶ್ರೀಗಳ ವಾಹನವೂ ಸರತಿಯಲ್ಲಿ ಮುಂದೆ ಹೋಗದ ಪರಿಸ್ಥಿತಿ ಎದುರಾದಾಗ ಶ್ರೀಗಳು ವಾಹನದಿಂದ ಇಳಿದು ಸುಮಾರು ಎರಡು ಕಿ.ಮೀ. ನಡೆದೇ ಸ್ಟೇಡಿಯಂ ತಲುಪಿದರು.