Advertisement

ಫೆಬ್ರವರಿಯಲ್ಲಿ ಮುದ್ದೇಬಿಹಾಳಕ್ಕೆ ಸಿಎಂ ಭೇಟಿ

11:33 AM Dec 22, 2022 | Kavyashree |

ಮುದ್ದೇಬಿಹಾಳ: ತಾಲೂಕಿನ ಸುಕ್ಷೇತ್ರ, ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವಾಗಿರುವ ಮುದ್ದೇಬಿಹಾಳ ತಾಲೂಕು ಕೃಷ್ಣಾ ನದಿ ತೀರದ ತಂಗಡಗಿ ಗ್ರಾಮಕ್ಕೆ ಫೆಬ್ರವರಿ ತಿಂಗಳ ಮೊದಲ ವಾರ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

Advertisement

ಗುರುವಾರ ಬೆಳಿಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಉಸ್ತುವಾರಿಯಲ್ಲಿ ಮತ್ತು ತಂಗಡಗಿಯ ಹಡಪದ ಅಪ್ಪಣ್ಣ ಮಹಾ ಸಂಸ್ಥಾನದ ಪೀಠಾಧಿಪತಿ ಅನ್ನದಾನ ಭಾರತಿ ಸ್ವಾಮೀಜಿ ನೇತೃತ್ವದ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ.

ತಂಗಡಗಿ ಗ್ರಾಮದ ಸಮಗ್ರ ಅಭಿವೃದ್ದಿಗಾಗಿ ಶಾಸಕ ನಡಹಳ್ಳಿಯವರಿಗೆ ಮುಖ್ಯಮಂತ್ರಿಯವರು ಸಂಪೂರ್ಣ ಸಹಕಾರ ನೀಡಿರುವುದನ್ನು ನೆನಪಿಸಿದ ಸ್ವಾಮೀಜಿ, ಈಗಾಗಲೇ ಸರ್ಕಾರದ ಕೋಟಿ ಅನುದಾನದ ಸಮುದಾಯ ಭವನ ಪೂರ್ಣಗೊಂಡಿದೆ. ಜೊತೆಗೆ 3 ಕೋಟಿ ಅನುದಾನದ ಕಟ್ಟಡ ನಿರ್ಮಾಣ ಕೆಲಸವೂ ಪ್ರಾರಂಭಗೊಳ್ಳಲಿದೆ. ಹೀಗಾಗಿ ಸಮುದಾಯ ಭವನ ಉದ್ಘಾಟನೆ ಮತ್ತು ಕಟ್ಟಡ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಬೇಕು ಎಂದು ನಿಯೋಗ ಮನವಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂಧಿಸಿದರು.  ಮಾತ್ರವಲ್ಲದೆ ಶಾಸಕ ನಡಹಳ್ಳಿ ಅವರ ಅದ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲು ತಿಳಿಸಿ ಶೀಘ್ರ ದಿನಾಂಕ ಕೊಡುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸಿ, ನಿಯೋಗದ ಮನವಿ ಆಲಿಸಲು ಮುಖ್ಯಮಂತ್ರಿಯವರ ಸಮಯ ಕೊಡಿಸಿದ ಶಾಸಕ ನಡಹಳ್ಳಿಯವರನ್ನು ಸ್ವಾಮೀಜಿ ನೇತೃತ್ವದ ನಿಯೋಗ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next