Advertisement
ಉಡುಪಿಯ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ರಾಜಕೀಯ ನಡೆಸುತ್ತಿದ್ದಾರೆ. ಸರಕಾರ ಕೂಡ ಇಂತಹ ಕೃತ್ಯವನ್ನು ಬೆಂಬಲಿಸುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ದಂಗೆ ಏಳಲು ಕರೆಕೊಡುತ್ತೇನೆ ಎಂದು ಭಯೋತ್ಪಾದಕರ ಮಾದರಿಯಲ್ಲಿ ಬೆದರಿಕೆ ಹಾಕಿರುವುದು ಆಶ್ಚರ್ಯಕರ. ಇಷ್ಟರ ವರೆಗೆ ಯಾವುದೇ ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಎಂದರು.
ಐಟಿ, ಇಡಿ ಸ್ವತಂತ್ರ ಸಂಸ್ಥೆ ಎಂದು ಗೃಹಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ. ಡಿಕೆಶಿ ಅವರಿಗೆ ಬಂದಿರುವ ನೊಟೀಸ್‌ಗೆ ಕೇಂದ್ರ ಸರಕಾರ ಉತ್ತರದಾಯಿಯಲ್ಲ. ಎಐಸಿಸಿಗೆ ಡಿಕೆಶಿ ಎಟಿಎಂ ಎಂಬ ಆರೋಪ ಬಂದಾಗ, ಇಡಿಯಿಂದ ನೋಟಿಸ್ ಜಾರಿಯಾದಾಗಲೇ ಸಂಪುಟದಿಂದ ಕೈಬಿಡಬೇಕಿತ್ತು ಎಂದರು. ರಾಜಕೀಯದಲ್ಲಿ ಸಾಂದರ್ಭಿಕ ಸಮಸ್ಯೆಗಳು ಎದುರಾದ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಸಿದ್ಧ ಎಂಬ ಸೂಚನೆ ನೀಡಿರುವುದು ನಿಜ. ಶಾಸಕರು ಬೆಂಬಲ ನೀಡಿದರೆ ಅಧಿಕಾರ ಹಿಡಿಯುತ್ತೇವೆ. ಆದರೆ ಗೂಂಡಾಗಿರಿ ರಾಜಕಾರಣ ಮೂಲಕ ಅಧಿಕಾರ ನಡೆಸಬಹುದು ಎನ್ನುವ ಭ್ರಮೆಯಿಂದ ಕಾಂಗ್ರೆಸ್ ಜೆಡಿಎಸ್‌ನವರು ಹೊರಬರಬೇಕು ಎಂದರು.