Advertisement
ಸುದ್ದಿಗಾರರ ಜತೆ ಮಾತನಾಡಿ ಇದು ಕ್ರಿಮಿನಲ್ ಪ್ರಕರಣ ಆಗಿರುವುದರಿಂದ ಕೂಡಲೇ ಸಿಬಿಐ ತನಿಖೆಗೆ ನೀಡಬೇಕು. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಯಾವುದೇ ಆಧಾರ, ದಾಖಲೆಗಳು ಇಲ್ಲದಿದ್ದರೂ ಬೊಮ್ಮಾಯಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಇವರ ಸರ್ಕಾರ ಬಂದ ನಂತರ ಯಾವುದಾದರೂ ಆಯೋಗ ಮಾಡಿ ಈ ಕುರಿತು ತನಿಖೆ ಮಾಡಿದ್ದಾರೆಯೇ. ತಾವು ಹಿಂದುಳಿದ ನಾಯಕ ಎನ್ನುವ ಕಾರಣಕ್ಕೆ ಈ ಆರೋಪ ಮಾಡುತ್ತಿದ್ದಾರೆ ಎನ್ನುವ ಮೂಲಕ ಜಾತಿ ತಂದು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಇದೊಂದು ಹೇಡಿತನದ ಕೆಲಸ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹರಾಜು ಪ್ರಕ್ರಿಯೆಯಲ್ಲಿ ಇರುವಂತೆ ಪ್ರತಿಯೊಂದು ಠಾಣೆಗೂ ಒಂದೊಂದು ಬೇಸ್ ದರ ನಿಗದಿ ಮಾಡಿದ್ದಾರೆ. ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಒತ್ತಡವಿತ್ತು. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗುತ್ತಿದ್ದಂತೆ ಅಲ್ಲಿನ ಶಾಸಕರು ನಾಪತ್ತೆಯಾಗುತ್ತಾರೆ. ಇಲ್ಲಿ ಅಧಿಕಾರಿಗಳ ಪ್ರಾಮಾಣಿಕತೆ, ದಕ್ಷತೆ ಹಾಗೂ ಹಿಂದಿನ ಅನುಭವ ಯಾವುದೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹಣ ನೀಡಿದವರನ್ನು ಬೇಡಿಕೆಯಿಟ್ಟ ಠಾಣೆಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಿರುವಾಗ ಹಣ ನೀಡಿ ಬಂದ ಪೊಲೀಸ್ ಅಧಿಕಾರಿಗಳು ಎಲ್ಲಾ ಅಪರಾಧ ಮಾಡುವ ವ್ಯಕ್ತಿಗಳಿಂದಲೂ, ಗ್ಯಾಂಗ್‌ಗಳಿಂದ ಹಣ ಕೀಳುವ ಮಟ್ಟಕ್ಕೆ ಇಳಿಯುತ್ತಾರೆ ಎಂದರು.