Advertisement

CM Post: ಅಧಿಕಾರಕ್ಕಾಗಿ ಜೆಡಿಎಸ್‌ಗೆ ಸಿದ್ದರಾಮಯ್ಯ ದ್ರೋಹ: ಎಚ್‌.ಡಿ.ಕುಮಾರಸ್ವಾಮಿ

03:37 AM Oct 14, 2024 | Team Udayavani |

ದಾವಣಗೆರೆ: ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಕೇವಲ ಅಧಿಕಾರಕ್ಕಾಗಿ ಕಾರ್ಯಕರ್ತರಿಗೆ ದ್ರೋಹ ಮಾಡಿದರು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.

Advertisement

ಜೆಡಿಎಸ್‌ ಸದಸ್ಯತ್ವ ನೋಂದಣಿ ಮತ್ತು ಬೂತ್‌ ಸಮಿತಿ ರಚನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಈಗಿನ ಸಿಎಂ ಸಿದ್ದರಾಮಯ್ಯ ಅವರನ್ನು ಗುರುತಿಸಿದ್ದೇ ಜೆಡಿಎಸ್‌ ಕಾರ್ಯಕರ್ತರು. ಅಂತಹ ಕಾರ್ಯಕರ್ತರ ದುಡಿಮೆಯ ಫಲವಾಗಿಯೇ ರಾಜ್ಯ ಮಟ್ಟದ ನಾಯಕರಾಗಿ ಬೆಳೆದಂತಹವರು ಕೇವಲ ಅಧಿಕಾರಕ್ಕಾಗಿ ದ್ರೋಹ ಮಾಡಿದರು.

ಈಗ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾದ ಹಲವರು ಬಿಜೆಪಿಯ ಕೆಲ ನಾಯಕರೂ ಜೆಡಿಎಸ್‌ನಲ್ಲಿದ್ದರು. ಹಾಗಾಗಿಯೇ ಜೆಡಿಎಸ್‌ನ್ನು ನಾಯಕರ ಸೃಷ್ಟಿ ಮಾಡುವ ಪಕ್ಷ ಎಂದು ಕರೆಯುವುದು. ಆದರೆ ನಾಯಕರಾಗಿ ಬೆಳೆದವರು ಪಕ್ಷ ಬಿಟ್ಟು ಹೋಗುವಾಗ ಏನೇನೋ ಹೇಳಿ ಹೋದರು ಎಂದರು.

ಸಿದ್ದರಾಮಯ್ಯ ದಸರಾ ಅನಂತರ ರಾಜೀನಾಮೆ ಕೊಡ್ತಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ರಾಜೀನಾಮೆ ನೀಡುವುದು, ಬಿಡುವುದು ಕಾಂಗ್ರೆಸ್‌ಗೆ ಸೇರಿದ ವಿಚಾರ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಕೆಐಎಡಿಬಿಯಿಂದ ಪಡೆದಿದ್ದ 5 ಎಕರೆ ಜಾಗ ವಾಪಸ್‌ ಏಕೆ ಕೊಟ್ಟರು. ತಪ್ಪು ಮಾಡಿದ್ದೇವೆ ಎಂದು ಅರಿವಾಗಿ ಕೊಟ್ಟಿದ್ದಾರೆ. ಇನ್ನು ಏನೇನು ಆಗುತ್ತದೆ ಕಾದು ನೋಡೋಣ. ಕಳೆದ ಮೂರು ತಿಂಗಳನಿಂದ ಗೌರವಧನ ಬಿಡುಗಡೆಯಾಗದ ಕಾರಣಕ್ಕೆ ದಾವಣಗೆರೆಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಆ್ಯಸಿಡ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದಕ್ಕೆ ಹೇಳುವುದು ಈ ಸರಕಾರದಲ್ಲಿ ಬಡವರ ಸಮಸ್ಯೆ ಕೇಳುವವರು ಯಾರೂ ಇಲ್ಲ ಎಂದರು.

ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಎನ್‌ಡಿಎ ಅಭ್ಯರ್ಥಿ: ಕೇಂದ್ರ ಸಚಿವ
ದಾವಣಗೆರೆ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ನಾನೇ ಎನ್‌ಡಿಎ ಅಭ್ಯರ್ಥಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಪ್ರಾಥಮಿಕ ಹಂತದ ಚರ್ಚೆ ನಡೆದಿದೆ. ಯೋಗ್ಯರನ್ನೇ ಕಣಕ್ಕಿಳಿಸಲಾಗುವುದು. ಅಲ್ಲಿ ಯಾರೇ ಅಭ್ಯರ್ಥಿಯಾದರೂ ನಾನೇ ಎನ್‌ಡಿಎ ಅಭ್ಯರ್ಥಿ ಎಂದರು.

Advertisement

ಚಂದ್ರಶೇಖರ್‌ಗೆ ಕೋರ್ಟ್‌ನಲ್ಲೇ ಉತ್ತರ: ಎಚ್‌ಡಿಕೆ
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ನನ್ನ ಮೇಲೆ ದೂರು ದಾಖಲಿಸಿದ್ದಾರೆ. ಅದಕ್ಕೆ ನಾನು ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಸುದ್ದಿಗಾರರ ಬಳಿ ಹೇಳಿದರು.

3-4 ಸಾವಿರ ಪುಟಗಳಷ್ಟು ಚಾರ್ಜ್‌ಶೀಟ್‌ ಹಾಕುತ್ತಾರೆ. 12 ವರ್ಷದಿಂದ ನನ್ನ ಮೇಲೆ ಪ್ರಕರಣ ಹಾಗೆ ಉಳಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಎಲ್ಲ ಚರ್ಚೆ ಆಗಲಿ. ಕುಮಾರಸ್ವಾಮಿ ತಾಜ್‌ ವೆಸ್ಟೆಂಡ್‌ನ‌ಲ್ಲಿ ಅ ಧಿಕಾರ ನಡೆಸಿದ್ರು ಎಂದು ಬಾಲಕೃಷ್ಣ ಹೇಳಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಕಾರಣ ಬಾಲಕೃಷ್ಣ ಹಿನ್ನೆಲೆ ಏನು ಎಂಬುದು ಗೊತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next