Advertisement

ಬರ ವೀಕ್ಷಣೆಗೆ ಬಾರದ ಸಿಎಂ: ಜಿಗಜಿಣಗಿ ಕಿಡಿ

06:30 AM Sep 07, 2018 | Team Udayavani |

ವಿಜಯಪುರ: “ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಭೀಕರ ಬರ ಆವರಿಸಿ, ಜನ-ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದರೂ ಸಿಎಂ ಕುಮಾರಸ್ವಾಮಿ ವಿಧಾನಸೌಧ ಬಿಟ್ಟು ಕದಲಲಿಲ್ಲ. ಮೈತ್ರಿ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಆಂತರಿಕ ಕಲಹ ಪರಿಹಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಕಣ್ಣೀರು ಒರೆಸಲು ಮುಂದಾಗಿಲ್ಲ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಕಿಡಿ ಕಾರಿದರು.

Advertisement

ಗುರುವಾರ ಪತ್ರರ್ಕರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಒಳಜಗಳ, ಮೈತ್ರಿ ಪಕ್ಷ ಜೆಡಿಎಸ್‌ ಅತೃಪ್ತಿಗಳಂಥ ಕಾರಣಗಳಿಂದ ರಾಜ್ಯದ ಅಭಿವೃದ್ಧಿ ಕುಸಿತವಾಗಿದ್ದು, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಮೈತ್ರಿ ಸರ್ಕಾರ ಶೀಘ್ರ ಪತನವಾಗುವ ಕಾಲ ದೂರವಿಲ್ಲ. ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗಲೂ ರಾಜ್ಯ ಭೀಕರ ಬರಕ್ಕೆ ತುತ್ತಾಗಿತ್ತು. ಆದರೆ ಹೆಗಡೆ ಅವರು ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದರು. ರಾಜ್ಯದಲ್ಲಿ ಭೀಕರ ಬರ ಆವರಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಂದ್ರ ಸ್ಥಾನ ಬಿಡದಂತೆ ತಾಕೀತು ಮಾಡಿದ್ದರು. ನಿರ್ಲಕ್ಷ್ಯ ತೋರಿ ಬೆಂಗಳೂರಿಗೆ ಬರುತ್ತಿದ್ದ ಸಚಿವರ ಕುರಿತು ಗುಪ್ತ ವಾರ್ತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂಥ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದರು.

ಕುಮಾರಸ್ವಾಮಿ ಅವರಿಗೆ ಅಂಥ ಬದ್ಧತೆ ಕಂಡು ಬರುತ್ತಿಲ್ಲ. ಭೀಕರ ಬರಗಾಲ ಪರಿಸ್ಥಿತಿ ಇರುವ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡದೇ ಬೇಜವಾಬ್ದಾರಿ ತೋರಿದ್ದಾರೆ. ಕಾಂಗ್ರೆಸ್‌ ನಾಯಕರು ಅತೃಪ್ತರ ಓಲೈಕೆಯಲ್ಲಿ ತೊಡಗಿದ್ದು, ಸಂಕಷ್ಟದಲ್ಲಿರುವ ಜನರ ಗೋಳು ಕೇಳುವವರೇ ಇಲ್ಲವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next