Advertisement
ಶನಿವಾರ ಫಾರೂಕ್ ವಿರುದ್ಧ ಹರಿಹಾಯ್ದ ಸಿಎಂ ಮೆಹಬೂಬಾ, “ಅಮೆರಿಕದ ಹಸ್ತಕ್ಷೇಪದಿಂದ ಸಿರಿಯಾ, ಅಫ್ಘಾನಿಸ್ಥಾನ ಮತ್ತು ಇರಾಕ್‌ನ ಪರಿಸ್ಥಿತಿ ಏನಾಗಿದೆಯೆಂದು ನಿಮಗೆ ಗೊತ್ತಿಲ್ಲವೇ? ಅಂಥದ್ದೇ ಪರಿಸ್ಥಿತಿ ಕಾಶ್ಮೀರಕ್ಕೂ ಬರಲಿ ಎಂಬುದು ನಿಮ್ಮ ಬಯಕೆಯೇ’ ಎಂಬ ಖಾರ ಪ್ರಶ್ನೆಯನ್ನು ಹಾಕಿದ್ದಾರೆ. ಅಷ್ಟೇ ಅಲ್ಲ, “ಅಮೆರಿಕವಾಗಲೀ, ಚೀನವಾಗಲೀ, ತಮ್ಮ ಕೆಲಸವೇನಿದೆ ಅಷ್ಟನ್ನು ಮಾಡಿದರೆ ಸಾಕು. ನಮ್ಮ ದೇಶದ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಚೀನ ಟಿಬೆಟ್ ಜತೆ ಇರುವ ಜಗಳವನ್ನು ಬಗೆಹರಿಸಿಕೊಳ್ಳಲಿ. ನಮ್ಮ ವಿಷಯಕ್ಕೆ ಅಮೆರಿಕವಾಗಲೀ, ಟರ್ಕಿ ಯಾಗಲೀ, ಇಂಗ್ಲೆಂಡ್ ಆಗಲೀ ಬರುವುದು ಬೇಡ. ಕಾಶ್ಮೀರ ವಿವಾದವನ್ನು ಭಾರತ ಮತ್ತು ಪಾಕಿಸ್ಥಾನವು ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಲಿದೆ’ ಎಂದೂ ಹೇಳಿದ್ದಾರೆ.
12ಕ್ಕೂ ಹೆಚ್ಚು ಯೋಧರು ಪೊಲೀಸ್ ಠಾಣೆಗೆ ನುಗ್ಗಿ ಸಹಾಯಕ ಸಬ್‌ಇನ್ಸ್ ಪೆಕ್ಟರ್ ಸೇರಿ 8 ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ನಡೆ ದಿದೆ. ಠಾಣೆಯಲ್ಲಿದ್ದ ದಾಖಲೆಗಳಿಗೂ ಹಾನಿ ಯಾಗಿದ್ದು, ಯೋಧರ ವಿರುದ್ಧ ಪ್ರಕರಣ ದಾಖ ಲಿಸಲಾಗಿದೆ. ಅಮರನಾಥ ಯಾತ್ರಿಕರ ಮೇಲೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕತ್ತಲಾದ ಬಳಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾ ಗಿತ್ತು. ಇದೇ ವೇಳೆ ಯೋಧರಿದ್ದ(ಸಮವಸ್ತ್ರ ಧರಿಸಿರಲಿಲ್ಲ) ಖಾಸಗಿ ವಾಹನವೊಂದು ಅಮರ ನಾಥ ಬೇಸ್ ಕ್ಯಾಂಪ್‌ನಿಂದ ಬಂದಿದ್ದು, ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಅದನ್ನು ತಡೆದರು. ಆದರೂ ಯೋಧರು ವಾಹನ ನಿಲ್ಲಿಸಲಿಲ್ಲ. ಹೀಗಾಗಿ, ಮುಂದಿನ ಚೆಕ್‌ಪೋಸ್ಟ್‌ಗೆ ಮಾಹಿತಿ ರವಾನಿಸಲಾಯಿತು. ಅಲ್ಲಿ ವಾಹನವನ್ನು ತಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯೋಧರು, ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.