ಬಾಂಗ್ಲಾದೇಶದ ನಡುವಿನ ನೀರು ಹಂಚಿಕೆಯ ಮಾತುಕತೆಯಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳವನ್ನು ಆಹ್ವಾನಿಸಲಾಗಿಲ್ಲ. “ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ಮತ್ತು ಅಭಿಪ್ರಾಯ ಪಡೆಯದೇ ಇಂತಹ ಏಕಪಕ್ಷೀಯ ಚರ್ಚೆಗಳು ಮತ್ತು ನಿರ್ಧಾರ ಸ್ವೀಕಾರಾರ್ಹ ಅಲ್ಲ ಎಂದು ಮಮತಾ ಹೇಳಿದರು. ಇತ್ತೀಚೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ದೆಹಲಿಗೆ ಭೇಟಿ ನೀಡಿದಾಗ ಗಂಗಾ ಮತ್ತು ತೀಸ್ತಾ ಜಲ ಹಂಚಿಕೆ ಕುರಿತು ಚರ್ಚೆ ನಡೆಸಲಾಗಿತ್ತು.
Advertisement
“2026ರಲ್ಲಿ ಮುಕ್ತಾಯಗೊಳ್ಳುತ್ತಿರುವ ಭಾರತ ಬಾಂಗ್ಲಾದೇಶ ಫರಕ್ಕಾ ಒಪ್ಪಂದವನ್ನು (1996) ಭಾರತ ಸರ್ಕಾರವು ನವೀಕರಿಸುವ ಪ್ರಕ್ರಿಯೆಯಲ್ಲಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಭಾರತ -ಬಾಂಗ್ಲಾ ನಡುವಿನ ನೀರಿನ ಹಂಚಿಕೆಯನ್ನು ವಿವರಿಸುವ ಒಪ್ಪಂದವಾಗಿದೆ. ಬಾಂಗ್ಲಾದೇಶ ಮತ್ತು ಭಾರತ, ನಿಮಗೆ ತಿಳಿದಿರುವಂತೆ, ಪಶ್ಚಿಮ ಬಂಗಾಳದ ಜನರಿಗೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ. ಬಂಗಾಳದ ಜನರು, ಅಂತಹ ಒಪ್ಪಂದಗಳಿಂದ ಸಂಕಷ್ಟ ಅನುಭವಿಸುತ್ತಾರೆ ಎಂದು ಮಮತಾ ಹೇಳಿದ್ದಾರೆ.