Advertisement

ಕಾಂಗ್ರೆಸ್ ನಲ್ಲಿರುವುದು ಗೊಡ್ಡು ಎಮ್ಮೆಗಳು, ಮತ ತರುವ ಹಸು ಇಲ್ಲ: ಸಿ.ಎಂ.ಇಬ್ರಾಹಿಂ

04:19 PM Mar 12, 2022 | Team Udayavani |

ಬೆಂಗಳೂರು :ಕಾಂಗ್ರೆಸ್ ಗೆ ಅಧಿಕೃತ ವಾಗಿ ಗುಡ್ ಬೈ ಹೇಳಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ನಲ್ಲಿರುವುದು ಗೊಡ್ಡು ಎಮ್ಮೆಗಳು, ಮತ ತರುವ ಹಸು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ರಾಜೀನಾಮೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನೀಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತಾರೆ.ಒಳ್ಳೆಯದೆಲ್ಲಾ ಅವರ ಪಾಲು, ಬೇಡದ್ದೆಲ್ಲಾ ನಮ್ಮ ಪಾಲು. ಹಿಜಾಬ್ ಬಗ್ಗೆ ನನ್ನ ಸಲಹೆ ಕೇಳಿಲ್ಲ. ಹಿಜಾಬ್ ಅನ್ನೋದನ್ನ ಸೆರಗು ಅನ್ನಿ ಎಂದೇ.ಯಾರೂ ನನ್ನ ಮಾತನ್ನು ಕೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯು.ಟಿ.ಖಾದರ್‌ಗೆ ಕೊಟ್ಟಿರುವುದು ಚಡ್ಡಿ. ಶಿವಕುಮಾರ್ ಬಂದ ತಕ್ಷಣ ಇಬ್ರಾಹಿಂ ಬನ್ನಿ ಎನ್ನಬೇಕಿತ್ತು. ಬಸರು ಮಾಡುವುದಕ್ಕೆ ನಾವು ಬೇಕು, ಹೆರಿಗೆ ಮಾಡಿಸುವುದಕ್ಕೆ ನಾವು ಬೇಕು. ಹೆಸರು ಮಾತ್ರ ಬೇರೆಯವರು ಇಡಬೇಕಾ ? ಎಂದು ಪ್ರಶ್ನಿಸಿದರು.

ಜೋಳಿಗೆ ಹಾಕಿಕೊಂಡು ಹೋಗುತ್ತಿದ್ದೇನೆ. ಮುಂದೆ ಜನ ತೀರ್ಮಾನ ಮಾಡುತ್ತಾರೆ. ಜೋಳಿಗೆಗೆ ಬಿದ್ದದ್ದನ್ನು ಪಕ್ಷಕ್ಕೆ ಕೊಡುತ್ತೇನೆ. ಸಿದ್ಧರಾಮಯ್ಯ ನಮ್ಮ ಮನೆಗೆ ಯಾವಾಗ ಬರುತ್ತಾರೋ, ಬರಲಿ. ಬಿರಿಯಾನಿ ತಿನ್ನಲಿ ಎಂದರು.

Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ.  ಅವರು ಕಾಂಗ್ರೆಸ್‌ನಲ್ಲಿ ಎಸಿ ರೂಮ್‌ನಲ್ಲಿದ್ದಾರೋ, ಟೆಂಪರೇಚರ್ ರೂಮಿನಲ್ಲಿದ್ದಾರೋ? ಎಂಬುದನ್ನು ಸಿದ್ದರಾಮಯ್ಯ ಅವರನ್ನು ಕೇಳಿ. ಅವರು 50 ಡಿಗ್ರಿ ಟೆಂಪರೇಚರ್‌ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾನ ನಿರೀಕ್ಷೆಯಿಂದ ಮಾತ್ರ ಜೆಡಿಎಸ್‌‌ ಕಡೆ ಹೋಗುತ್ತಿದ್ದೇನೆ.ಸ್ಥಾನ ನಿರೀಕ್ಷೆ ಇಲ್ಲ. ಕಾಂಗ್ರೆಸ್‌ನವರು ನಮಗೆ ಚೆನ್ನಾಗಿ ಮೇಕಪ್ ಮಾಡಿ, ಬಸ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ರು.ಹೋಗುವವರನ್ನು, ಬರುವವರನ್ನು ಕರೆಯುವ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗರು, ಸಾಬರು ಸೇರಿದ್ರೆ 65 ಸೀಟು ಬರುತ್ತದೆ.ಸಾಬರು,‌ಲಿಂಗಾಯತರು ಸೇರಿದ್ರೆ 110 ಸೀಟು ಬರುತ್ತದೆ.ಇದು ಸಿದ್ಧರಾಮಯ್ಯರಿಗೂ ಗೊತ್ತಿದೆ. ಕಾಂಗ್ರೆಸ್‌ನಲ್ಲಿ ಇರುವುದು ಗೊಡ್ಡು ಎಮ್ಮೆಗಳು.ಯಾವ ಹಸು ಇದೆ ಓಟು ತರುವುದಕ್ಕೆ? ಎಂದು ಪ್ರಶ್ನಿಸಿದರು.

ಸಿದ್ಧರಾಮಯ್ಯರನ್ನು ನಂಬಿ ಕಾಂಗ್ರೆಸ್‌ಗೆ ಸೇರಿದೆ. ನನ್ನನ್ನು ನಡು ನೀರಲ್ಲಿ ಕೈ ಬಿಟ್ಟರು.  ಟೆಂಟ್‌ಗೆ ಬೆಂಕಿ ಬಿದ್ದಿದೆ. ಎಲ್ಲರೂ ಗೇಟು ನೋಡುತ್ತಿದ್ದಾರೆ. ಕಾಂಗ್ರೆಸ್‌ನವರು ನನ್ನನ್ನು ತಳ್ಳಿದ್ದು ಆಯ್ತು.ಈಗ ನಾವು ಹೊರಗೆ ಹೋಗುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next