Advertisement

ಅಕ್ರಮ ಗಣಿ ವರದಿ ಜಾರಿಗೆ ಸಿಎಂ ಹಿಂದೇಟು

05:24 PM Apr 13, 2018 | |

ಬಾದಾಮಿ: ಅಕ್ರಮ ಗಣಿಕಾರಿಗೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಅಧಿಕಾರಿಗಳಿಗೆ ಬಡ್ತಿ ನೀಡಿದರು ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿ ಕಾರಕ್ಕೆ ಬಂದರೆ ಎಲ್ಲವನ್ನೂ ಮಾಡುತ್ತಾರೆ ಎಂಬ ಭರವಸೆಯೊಂದಿಗೆ ಎಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದೆವು. ಆದರೆ 5 ವರ್ಷವಾದರೂ ಏನನ್ನೂ ಮಾಡಲಿಲ್ಲ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಅಧಿ ಕಾರಿಗಳಿಗೆ ಶಿಕ್ಷೆ ನೀಡುವ ಬದಲಾಗಿ ಬಡ್ತಿ ನೀಡಿದರು. ಅಕ್ರಮ ಗಣಿಗಾರಿಕೆ ವರದಿ ಜಾರಿಮಾಡಲಿಲ್ಲ ಕೊಟ್ಟ ವಚನ ಪಾಲಿಸದೇ ವಚವ ಭ್ರಷ್ಟರಾದರು ಎಂದು ಆರೋಪಿಸಿದರು.

ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡಿದ ಅಣ್ಣಾ ಹಜಾರೆ ದೆಹಲಿಯಲ್ಲಿ ಜ್ಯೂಸ್‌ ಕುಡಿದು ಸುಮ್ಮನಾದದ್ದು ಏಕೆ? ಎಂದು ದೇಶದ ಜನರಿಗೆ ಉತ್ತರ ನೀಡಬೇಕು ಎಂದರು. ಅವರಿಗೆ ಬದ್ಧತೆ ಮತ್ತು ಪಕ್ವತೆ ಇಲ್ಲ ಎಂದು ಹೇಳಿದರು.

ಮಹದಾಯಿ ನದಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಪ್ರಜೆಗಳ ಹಿತಕ್ಕಾಗಿ ಏನನ್ನೂ ಮಾಡುತ್ತಿಲ್ಲ. ಬರಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದನ್ನು ತಡೆಯಲು ಜೆಸಿಬಿ(ಜೆಡಿಎಸ್‌,ಕಾಂಗ್ರೆಸ್‌,ಬಿಜೆಪಿ) ಅಳಿಸಿ ಹೊಸ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕಬೇಕು. ರಾಜಕೀಯದಲ್ಲಿ ಒಳ್ಳೆಯ ಜನರಿಗೆ ಅವಕಾಶಗಳು ಸಿಗುತ್ತಿಲ್ಲ. ಬಂಡವಾಳಶಾಯಿ ಆಡಳಿತ ನಡೆಸುತ್ತಿದ್ದಾರೆ. 

ಜನಾಂದೋಲನದ ಮಹಾಮೈತ್ರಿ ಮೂಲಕ ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಖಾಸಗೀಕರಣ ವಿರುದ್ಧ ಹೋರಾಡಲು ಪರ್ಯಾಯ ಶಕ್ತಿ ಹುಟ್ಟು ಹಾಕಿದ್ದೇವೆ. ರಾಜ್ಯದಲ್ಲಿ 6 ಪಕ್ಷಗಳು ಒಂದಾಗಿ ಜನಾಂದೋಲನ ಮೈತ್ರಿ ಮೂಲಕ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಇದರಡಿ ಬಾದಾಮಿ ಮತಕ್ಷೇತ್ರದಿಂದ ವಿಚಾರ ವೇದಿಕೆಯ ಸಂಚಾಲಕ ಲಕ್ಷ್ಮಣ ಮರಡಿತೋಟದ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗಿದೆ. ಇವರಿಗೆ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ. ಎಂಇಪಿಯನ್ನು ಅಲ್ಪಸಂಖ್ಯಾತ ಮತಗಳ ವಿಭಜನೆಗೆ ಬಿಜೆಪಿಯವರೇ ಈ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಜೆಡಿಎಸ್‌ ಮತ್ತು ಭ್ರಷ್ಟಾಚಾರ
ಆರೋಪ ಹೊತ್ತ ಅಭ್ಯರ್ಥಿಗಳಿಗೆ ಮತ ನೀಡಬೇಡಿ ಎಂದರು.

ಪಕ್ಷೇತರ ಅಭ್ಯರ್ಥಿ ಲಕ್ಷ್ಮಣ ಮರಡಿತೋಟದ ಮಾತನಾಡಿ, ನಾನು ಕಳೆದ 3-4 ದಶಕಗಳಿಂದ ಅನೇಕ ಜನಪರ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದು, ನನ್ನನ್ನು ಜನರು ಆಯ್ಕೆ ಮಾಡಿದರೆ ಪ್ರವಾಸೋದ್ಯಮ, ಮೂಲಭೂತ ಸೌಕರ್ಯ, ಕೈಗಾರಿಕೆ ಸೇರಿದಂತೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಆಮ್‌ ಆದ್ಮಿ ಪಕ್ಷದ ಶಿವಕುಮಾರ, ಮಹಲಿಂಗಪ್ಪ ಆಲಬಾಳ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next