Advertisement

ಅನನ್ಯ, ನಿನ್ನ ಭೇಟಿ ಮಾಡುವೆ

06:00 AM Jul 12, 2018 | Team Udayavani |

ಬೆಂಗಳೂರು: ಉದಯವಾಣಿ “ಜೋಶ್‌’ ಪುರವಣಿ ಮೂಲಕ “ನನ್ನ ಶಾಲೆ ನನ್ನ ಹೆಮ್ಮೆ’ ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಅಕ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಎಚ್‌.ಎಸ್‌.ಅನನ್ಯಳಿಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪಂದಿಸಿದ್ದಾರೆ. ಅಷ್ಟೇ ಅಲ್ಲ, ನಾನೇ ಖುದ್ದಾಗಿ ನಿನ್ನನ್ನು ನಾನು ಖುದ್ದಾಗಿ ಭೇಟಿ ಮಾಡುತ್ತೇನೆ ಎಂದು ಪತ್ರ ಮುಖೇನವೇ ಉತ್ತರ ನೀಡಿದ್ದಾರೆ.

Advertisement

ಪತ್ರದ ಸಾರಾಂಶ: ಉದಯವಾಣಿಯ “ಜೋಶ್‌’ ಪುರವಣಿಯ”ನನ್ನ ಶಾಲೆ ನನ್ನ ಹೆಮ್ಮೆ’ ಎಂಬ ಅಂಕ‌ಣದಲ್ಲಿ ನೀನು ನನಗೆ ಬರೆದ ಪತ್ರವನ್ನು ಓದಿದೆ. ನಿನ್ನ ಆತಂಕ ಅರ್ಥವಾಗಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸಿ ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳು ಅಪ್ಪಿಕೊಳ್ಳುವಂತೆ ಮಾಡುವುದು ನನ್ನ ಉದ್ದೇಶ. ಆಯವ್ಯಯದಲ್ಲಿ  ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಗ್ರಾಮೀಣ ಹಂತದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಮುಂತಾದ ಸೌಲಭ್ಯಗಳಿರಬೇಕು ಎನ್ನುವುದು ನನ್ನ ಗುರಿ. ಕನ್ನಡದ ಜೊತೆಗೆ ಇಂಗ್ಲಿಷ್‌ನ್ನು ಸಹ ಒಂದು ವಿಷಯವನ್ನಾಗಿ ಕಲಿಯಬೇಕೆನ್ನುವುದು ನನ್ನ ಆಶಯ. ಭಾಷಾ ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.

“ಪೋಷಕರ ಕಾನ್ವೆಂಟ್‌ನ ವ್ಯಾಮೋಹಕ್ಕೆ ಕಡಿವಾಣ ಹಾಕಿ, ಸರ್ಕಾರಿ ಶಾಲೆಗಳ ಬಗ್ಗೆ ಪ್ರೀತಿ ಬರಬೇಕು. ನೀನು ಪತ್ರ ಬರೆದಿದ್ದಕ್ಕೆ ಧನ್ಯವಾದಗಳು, ನಿನ್ನ ಓದಿನ ಬಗ್ಗೆ ಕೇಂದ್ರೀಕರಿಸು, ಒಳ್ಳೆಯದಾಗಲಿ. ನಾನು ನಿನ್ನನ್ನು ಖುದ್ದಾಗಿ ಭೇಟಿ ಮಾಡುತ್ತೇನೆ.
ಶುಭಾಶಯಗಳು
ಎಚ್‌.ಡಿ.ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next