Advertisement

Mysore; ಭ್ರೂಣ ಹತ್ಯೆಯ ವಿಚಾರವಾಗಿ ಸಿಎಂ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ: ಮಹದೇವಪ್ಪ

04:34 PM Nov 30, 2023 | Team Udayavani |

ಮೈಸೂರು: ಕಾನೂನು ಪ್ರಕಾರ ಭ್ರೂಣ ಹತ್ಯೆ ಅಪರಾಧ. ಅದರಲ್ಲೂ ಹೆಣ್ಣು ಬ್ರೂಣ ಹತ್ಯೆ ದೊಡ್ಡ ಅಪರಾಧ. ಕಾನೂನಿನ ಚೌಕಟ್ಟಿನಲ್ಲಿ ಅದಕ್ಕೊಂದು ತಂಡವಿದೆ. ನಿರಂತರವಾಗಿ ಖಾಸಗಿ ಆಸ್ಪತ್ರೆಗಳು, ವೈದ್ಯರ ಮೇಲೆ ನಿಗಾವಹಿಸಿ ವರದಿ ಕೊಡಬೇಕಿತ್ತು. ಇತ್ತೀಚಿಗೆ ಹೆಣ್ಣು ಬ್ರೂಣಗಳ ಹತ್ಯೆ ಹೆಚ್ಚಾಗಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆಯ ವಿಚಾರವಾಗಿ ಮುಖ್ಯಮಂತ್ರಿಗಳು ಸಹ ಬಹಳ ಗಂಭೀರವಾಗಿದ್ದಾರೆ. ಯಾರೆಲ್ಲಾ ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ಕ್ರಮ ಆಗಬೇಕೆಂದು ಸಿಎಂ ಹೇಳಿದ್ದಾರೆ. ಜಿಲ್ಲೆಯಲ್ಲೂ ಕೂಡ ಡಿಹೆಚ್ಒ ನೇತೃತ್ವದಲ್ಲಿ ಇರುವ ಸಮಿತಿಯನ್ನು ಸಕ್ರಿಯಗೊಳಿಸಿದ್ದೇವೆ. ಜಿಲ್ಲಾದ್ಯಂತ ಪರಿಶೀಲನೆ ಮಾಡಿ ವರದಿ ಕೊಡಲು ತಿಳಿಸಿದ್ದೇವೆ. ಸಮಗ್ರ ವರದಿ ಬಂದ ಮೇಲೆ ಯಾರು ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲವೆಂದು ವರದಿ ಆಧಾರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಜಾತಿಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವೇ ಸುಪ್ರೀಂ. ಅಲ್ಲಿ ಒಪ್ಪಿಗೆಯಾದ ಮೇಲೆ ಮತ್ತೆ ಯಾರ ಮಾತೂ ಬರಲ್ಲ ಎಂದು ವರದಿಗೆ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್ ಗೆ ಮಹದೇವಪ್ಪ ತಿರುಗೇಟು ನೀಡಿದರು.

ಎಐಸಿಸಿ ರಾಹುಲ್ ಗಾಂಧಿ ಸೇರಿ ಎಲ್ಲರು ವರದಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲೂ ಈ ಬಗ್ಗೆ ತೀರ್ಮಾನವಾಗುತ್ತದೆ. ರಾಹುಲ್ ಗಾಂಧಿಯೇ ಇದರ ಪರವಿದ್ದಾರೆ. ಪಕ್ಷ ಹಾಗೂ ಕ್ಯಾಬಿನೆಟ್ ಎಲ್ಲಾ ವರದಿಯ ಪರವಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದರು.

ಪಂಚರಾಜ್ಯ ಚುನಾವಣೆ ವಿಚಾರಕ್ಕೆ ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ಒಂದು ರಾಜ್ಯದಲ್ಲಿ ಸ್ಥಳೀಯ ಪಕ್ಷ ಅಧಿಕಾರ ಹಿಡಿಯಬಹುದು. ಎಲ್ಲಾ ಕಡೆ ತೀವ್ರ ಸ್ಪರ್ಧೆಯಿದೆ. ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಲ್ಲ. ಸ್ಥಳೀಯ ವಿಚಾರಗಳು ಬೇರೆ ಇರುತ್ತದೆ ಎಂದು ಮಹಾದೇವಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next