Advertisement
“ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷದವರ ತೇಜೋವಧೆಗೆ ಮತ್ತೂಂದು ಪಕ್ಷದವರು ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಅರಿವು ಇಧ್ದೋ, ಇಲ್ಲದೆಯೋ ಸುದ್ದಿ ವಾಹಿನಿಗಳಿಗೆ ಡೈರಿ ಪ್ರಕರಣ ಒಂದು ವಾರ ಆಹಾರವಾಯಿತು’ ಡೈರಿ ಬಿಡುಗಡೆ ಮಾಡಿದವರ ಅರ್ಹತೆ ಏನು? ಐಟಿ ಇಲಾಖೆ ವಕ್ತಾರರೇ? ಎಂಬ ಇತರೆ ಅಂಶಗಳನ್ನು ಯೋಚಿಸದೆ ಪ್ರಸಾರ ಮಾಡಿದ್ದು ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Related Articles
ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಸಮಾಜದ ಪ್ರಗತಿಗೆ ಪತ್ರಿಕಾರಂಗದ ಕೊಡುಗೆ ಅಪಾರ ಮತ್ತು ಅಗಾಧ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ರಂಗಗಳಲ್ಲೂ ಮೌಲ್ಯಗಳು ಕುಸಿದಿವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಯಾರಲ್ಲೂ ಯಾವ ಭಿನ್ನಮತವೂ ಇಲ್ಲ ಎಂಬುದು ಸೋಜಿಗ. ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳ ನಡವಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.
Advertisement
ನಾಡಿನ ಹೆಮ್ಮೆಯ ಇಬ್ಬರು ನಟರ ಟ್ವೀಟ್ ಸಮರ, ಪರಸ್ಪರ ಟೀಕೆ, ಪ್ರತಿ ಟೀಕೆ ಸುದ್ದಿ ಎಲ್ಲ ವಾಹಿನಿಗಳಿಗೆ ಎರಡು ದಿನ ಆಹಾರವಾಗಿತ್ತು. ಮೂರನೆಯದಾಗಿ ಉಕ್ಕಿನ ಸೇತುವೆ ಯೋಜನೆ ಮೇಲಿನ ಅಪ್ರಚಾರದ ಪರಾಕಾಕ್ಷೆ. ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲದವರು ಹುಯಿಲೆಬ್ಬಿಸಿದ ಅಬ್ಬರದ ಅಪಪ್ರಚಾರಕ್ಕೆ ವಾಹಿನಿಗಳ ಸಮಯ ವ್ಯರ್ಥವಾಯಿತು. 2010ರ ಯೋಜನೆಯ ವೆಚ್ಚ 2014ರಲ್ಲಿ ಹೆಚ್ಚಳವಾಗಿದ್ದಕ್ಕೆ ಕಾರಣವಾದ ಅಂಶ ಹುಡುಕದೆ ಕೆಲವರು ಆರೋಪ ಮಾಡಿದ್ದು ದುರದೃಷ್ಟಕರ.
ಮಾಧ್ಯಮವೆಂಬ ಪ್ರಭಾವಿ ವೇದಿಕೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಂತ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿವೆ. ಆದರೆ ಮಾಧ್ಯಮಗಳು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಬಾರದು. ಅಕಸ್ಮಾತ್ ಪಟ್ಟಭದ್ರರ ಕೈಗೊಂಬೆಗಳಾದರೆ ಮಾಧ್ಯಮಗಳು ಜನರ ವಿಶ್ವಾಸ ಕಳೆದುಕೊಳ್ಳುವ ಜತೆಗೆ ಸಮಾಜದಲ್ಲಿನ ಶಾಂತಿ- ಸುವ್ಯವಸ್ಥೆಯೂ ಕದಡಿದ ಅಪರಾಧಕ್ಕೆ ಹೊಣೆ ಹೊರಬೇಕಾಗುತ್ತದೆ. ನ್ಯೂಸ್ ಪ್ಲಾಂಟೇಶನ್‌ಗಳು ಹೆಚ್ಚಾಗುತ್ತಿವೆ. ನನ್ನ ಪರವಾಗಿ ಬರೆದಾಗ ನಾನು ಹಿಗ್ಗಲಿಲ್ಲ. ವಿರುದ್ಧ ಬರೆದಾಗಲೂ ಕುಗ್ಗಲಿಲ್ಲ. ಯಾರನ್ನೂ ಓಲೈಸಲು ಸುಳ್ಳು ಬರೆಯಬೇಡಿ, ಯಾರನ್ನೇ ವಿರೋಧಿಸಲು ಸುಳ್ಳು ಬರೆಯಬೇಡಿ. ಬರವಣಿಗೆಯಲ್ಲಿ ನಿತ್ಯ ಸತ್ಯವಿರಲಿ.ಪ್ರಶಸ್ತಿ ಪುರಸ್ಕೃತ ನಟರಾಜ್ ಹುಳಿಯಾರ್ ಅವರು ಪ್ರಶಸ್ತಿಯೊಂದಿಗೆ ನೀಡಿರುವ ನಗದು ಮೊತ್ತವನ್ನು ಇತ್ತೀಚೆಗೆ ಮ್ಯಾನ್‌ಹೋಲ್‌ನಲ್ಲಿ ಮುಳುಗಿ ಸಾವನ್ನಪ್ಪಿದ ಕುಟುಂಬದವರಿಗೆ ನೆರವು ನೀಡಲಾಗುವುದು ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಎಚ್.ಆರ್.ಶ್ರೀಶ, ಶಾಂತಲಾ ಧರ್ಮರಾಜ್ ಮಾತನಾಡಿದರು. ಸಚಿವ ಆರ್.ರೋಷನ್ ಬೇಗ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್,ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಕಾರ್ಯದರ್ಶಿ ಶಂಕರಪ್ಪ ಉಪಸ್ಥಿತರಿದ್ದರು.
ವಾರ್ಷಿಕ ಪ್ರಶಸ್ತಿ ಪುರಸ್ಕೃತರುಎಚ್.ಆರ್.ಶ್ರೀಶ, ಶಾಂತಲಾ ಧರ್ಮರಾಜ್, ಜಿ.ವೀರಣ್ಣ, ಮಹಮ್ಮದ್ ಸಿದ್ದಕಿ ಆಲ್ದೂರಿ (ತಂದೆ ಪರವಾಗಿ ಪುತ್ರಿ ಸ್ವೀಕರಿಸಿದರು), ರೊನಾಲ್ಡ್ ಅನಿಲ್ ಫರ್ನಾಂಡಿಸ್, ಎ.ಸಿ.ಪ್ರಭಾಕರ್, ಉಜ್ಜಿನಿ ರುದ್ರಪ್ಪ, ಹೇಮಂತಕುಮಾರ್, ವಿ.ರಾಮಸ್ವಾಮಿ ಕಣ್ವ, ಶಂಕರಪ್ಪ ಹುಸನಪ್ಪ ಚಲವಾದಿ, ನಾಗರಾಜ ಸುಣಗಾರ, ಅನಿಲ್‌ಕುಮಾರ್ ಚಂದ್ರಶೇಖರ ಹೊಸಮನಿ, ಮಾಲತೇಶ ಗದಿಗೆಪ್ಪ ಅಂಗೂರ, ಕೆ.ಎಚ್.ಚಂದ್ರು (ಹೇಮಚಂದ್ರ ನಾಯಕ). ಇತರೆ ಪ್ರಶಸ್ತಿ ಪುರಸ್ಕೃತರು
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ- ಶಿವಮೊಗ್ಗ ಟೈಮ್ಸ್ ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ “ಮೈಸೂರು ದಿಗಂತ ಪ್ರಶಸ್ತಿ- ಸಿ.ಜೆ.ರಾಜೀವ ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ- ಸ್ನೇಹಪ್ರಿಯ ನಾಗರಾಜ್ ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ “ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ’- ಡಾ.ನಟರಾಜ್ ಹುಳಿಯಾರ್ “ಉದಯವಾಣಿ’ಯ ಚಿ.ನಿ.ಪುರುಷೋತ್ತಮ್ ಅವರಿಗೆ ವಾರ್ಷಿಕ ಪ್ರಶಸ್ತಿ ಹಾಗೂ ಚಂದ್ರಶೇಖರ ಮೋರೆ ಅವರಿಗೆ ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ “ಅಭಿಮಾನಿ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.