Advertisement

ಇಂದಿನಿಂದ ಸಿಎಂ ಅಭಿವೃದ್ಧಿ ಯಾತ್ರೆ

06:00 AM Dec 13, 2017 | Team Udayavani |

ಬೀದರ್‌: ವಿಧಾನಸಭೆ ಚುನಾವಣೆ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್‌ನ ಯಾತ್ರೆಗಳಿಗೆ ಅಭಿವೃದ್ಧಿ ಯೋಜನೆಗಳ ಮೂಲಕ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಮ್ಮಿಕೊಂಡಿರುವ ಜಿಲ್ಲಾ ಪ್ರವಾಸದ ಸರಕಾರಿ ಯಾತ್ರೆ ಬೀದರ್‌ನ ಬಸವ ಕಲ್ಯಾಣದಲ್ಲಿ ಬುಧವಾರ ಆರಂಭವಾಗಲಿದೆ.

Advertisement

ಒಂದು ತಿಂಗಳ ಕಾಲ ನಡೆಯುವ ಜಿಲ್ಲಾ ಪ್ರವಾಸದಲ್ಲಿ ಮುಖ್ಯ ಮಂತ್ರಿ ರಾಜ್ಯದ ಮೂವತ್ತು ಜಿÇÉೆಗಳಲ್ಲಿ ಸುಮಾರು ಒಂದು ಸಾವಿರ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಅಂದಾಜು ಮೂವತ್ತು ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. 

ಬೀದರ್‌ನ ಬಸವ ಕಲ್ಯಾಣದಿಂದ ಸರಕಾರಿ ಸಾಧನ ಸಂಭ್ರಮ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆತಂಕಗಳು ಬಾರದಂತೆ ಎಚ್ಚರಿಕೆಯಿಂದಲೇ ಯಾತ್ರೆ ರೂಪಿಸಿದ್ದಾರೆ.  ಎರಡು ಹಂತದ ಪ್ರವಾಸ ಕಾರ್ಯಕ್ರಮ ಇದಾಗಿದ್ದು ಡಿ. 30ರಿಂದ ಜ. 1ರ ವರೆಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದು, ಅನಂತರ ಎರಡನೇ ಹಂತದ ಯಾತ್ರೆ ನಡೆಸಲಿದ್ದಾರೆ.

ಪಕ್ಷದ ನಾಯಕರು ಹೇಳಿದಂತೆ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಮಾತ್ರ ಸಿಎಂ ಪ್ರವಾಸ ಮಾಡುತ್ತಿಲ್ಲ. ತನ್ನ ಮೊದಲ ಕಾರ್ಯ ಕ್ರಮವನ್ನೇ ಜೆಡಿಎಸ್‌ ಶಾಸಕರ ಕ್ಷೇತ್ರದಲ್ಲಿ ಆಯೋಜನೆ ಮಾಡಿದ್ದಾರೆ. ಅಲ್ಲದೆ ಶಿಷ್ಟಾಚಾರದಂತೆ ಆಯಾ ಕ್ಷೇತ್ರದ ಶಾಸಕರಿಗೆ ಕಾರ್ಯಕ್ರಮದ ಅಧ್ಯಕ್ಷತೆ ನೀಡಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 10ರಿಂದ 15 ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಯೋಜನೆ ಹಾಕಿಕೊಂಡಿದ್ದು, ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 250 ಕೋಟಿಯಿಂದ ಸಾವಿರ ಕೋಟಿ ರೂ.ವರೆಗಿನ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಅಡಿಗಲ್ಲು ಹಾಕುವುದು, ಮುಕ್ತಾಯವಾದ ಕಾಮಗಾರಿಗಳನ್ನು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಅರ್ಪಿಸುವ ಕಾರ್ಯಕ್ರಮಗಳಿವೆ.

Advertisement

ಪ್ರಮುಖವಾಗಿ ರಸ್ತೆ ಕಾಮಗಾರಿ, ಏತ ನೀರಾವರಿ, ಕೆರೆ ತುಂಬಿಸುವ ಯೋಜನೆ, ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನಗರಾಭಿವೃದ್ಧಿ ಯೋಜನೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಣ್ಣ ಪುಟ್ಟ ಯೋಜನೆಗಳು, ಸಭಾಭವನ ನಿರ್ಮಾಣದಂತಹ ಕಾಮಾರಿಗಳಿಗೂ ಚಾಲನೆ ನೀಡಲು ತೀರ್ಮಾನಿಸಿದ್ದಾರೆ.

ಪಕ್ಷದ ಸೋಂಕಿಲ್ಲದೇ ಯಾತ್ರೆ ನಡೆಸುತ್ತಿ ರುವ ಮುಖ್ಯಮಂತ್ರಿ ಕಾರ್ಯಕ್ರಮಗಳಲ್ಲಿ ಸಚಿವರ ದೊಡ್ಡ ದಂಡೇ ಇರುವ ಸಾಧ್ಯತೆ ಇದೆ. 

ಉಸ್ತುವಾರಿ ಸಚಿವರಿಗೆ ಜವಾಬ್ದಾರಿ
 ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಯಲ್ಲಿ ನಡೆಯುವ ಪ್ರವಾಸದ ಕಾರ್ಯಕ್ರಮಗಳನ್ನು ಯಶಸ್ವಿಯಾಗು ವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಎಂ ಪ್ರವಾಸ ಕೈಗೊಳ್ಳುವ ಎಲ್ಲ ಯೋಜನೆಗಳ ಸಂಪೂರ್ಣ ಮಾಹಿತಿ ಸಿದ್ಧಪಡಿಸಿಕೊಂಡಿದ್ದಾರೆ. ಕನಿಷ್ಠ ಎಂಟರಿಂದ ಹತ್ತು ಸಚಿವರು ಸಿಎಂ ಜತೆಗಿರುವ ಸಾಧ್ಯತೆ ಇದೆ.  ಆಡಳಿತ ಪಕ್ಷದಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳುವ ಜತೆಗೆ ಸಾವಿರಾರು ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ತಮ್ಮ ಸರಕಾರದ ಸಾಧನೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಯತ್ನ ನಡೆಸುತ್ತಿ¨ªಾರೆ. ವಿಪಕ್ಷಗಳ ನಡೆಯನ್ನು ವಿರೋಧಿಸುತ್ತಲೇ ಮತ್ತೆ ಕಾಂಗ್ರೆಸ್‌ನಲ್ಲಿ ನಾನೇ ಮುಖ್ಯಮಂತ್ರಿ ಎನ್ನುವುದನ್ನು ಜನರಿಗೆ ತಲುಪಿಸುವ ಜಾಣತನವನ್ನು ಮುಖ್ಯಮಂತ್ರಿ ಈ ಮೂಲಕ ಮಾಡುತ್ತಿ¨ªಾರೆ. 

ಯಾತ್ರೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಡಿ. 16ರಂದು ರಾಹುಲ… ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ಕೂ ಹೋಗುವುದನ್ನು ತಪ್ಪಿಸಿಕೊಳ್ಳಲು ಮಂಗಳವಾರವೇ ದಿಲ್ಲಿಗೆ ತೆರಳಿ ರಾಹುಲ…ಗೆ ಶುಭಕೋರಿ ಬಂದಿ¨ªಾರೆ.

ಡಿ.27ರಿಂದ ಪರಂ ನೇತೃತ್ವದಲ್ಲಿ  ಕೋಲಾರದಿಂದ ಯಾತ್ರೆ 
ಬೆಂಗಳೂರು. ಡಿ. 12: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಮಟ್ಟದಲ್ಲಿ ಸಂಘಟನೆಗಾಗಿ ಡಿ. 27ರಿಂದ ರಾಜ್ಯಪ್ರವಾಸ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಅವರು, ಡಿ. 27ರಂದು ಕೋಲಾರದಿಂದ ತನ್ನ ಯಾತ್ರೆ ಪ್ರಾರಂಭವಾಗಲಿದೆ. ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ  ಮೊಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್‌.ಆರ್‌. ಪಾಟೀಲ್‌, ದಿನೇಶ್‌ ಗುಂಡೂರಾವ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್‌ ಗಾಂಧಿ ಅವರು ಡಿ. 16ರಂದು ಅಧಿಕಾರ ಸ್ವೀಕರಿಸಿದ ಅನಂತರ ರಾಜ್ಯದಲ್ಲಿ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಸಭೆ ಬೆಂಗಳೂರಿನಲ್ಲಿ ಮಾಡಬೇಕೋ ಚಿಕ್ಕಮಗಳೂರಿನಲ್ಲಿ ಆಯೋಜಿಸಬೇಕೋ ಎಂಬುದನ್ನು ಸದ್ಯ ದಲ್ಲೇ ತೀರ್ಮಾನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next