Advertisement
ಅತಿಥಿ ಸಂಪಾದಕರಾಗಿ ಆಗಮಿಸಿದ ಸಿಎಂ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಉದಯವಾಣಿ ಈ ಭಾಗದ ಜನರ ಧ್ವನಿಯಾಗಿದೆ. ಕರಾವಳಿ ಕರ್ನಾಟಕದಿಂದ ಪ್ರಾರಂಭವಾಗಿ ಇಡೀ ಕರ್ನಾಟಕವನ್ನು ವ್ಯಾಪಿಸಿದೆ. ಎಲ್ಲರ ಮನೆಯ ಮಾತಾಗಿದೆ, ಮನದ ಮಾತಾಗಿದೆ ಎಂದರು.
Related Articles
Advertisement
ಉದಯವಾಣಿ ಸುದ್ದಿಕೊಡುವ ಮಾಧ್ಯಮ ಅಲ್ಲ ಮಾರ್ಗದರ್ಶನ ಮಾಡುವ ಮಾಧ್ಯಮ . ನಾನು ಉದಯವಾಣಿಯ ವರದಿಗಳನ್ನು ನೋಡಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದೇನೆ ಎಂದರು.
ರಾಜಕಾರಣಿ ಮಾಧ್ಯಮ ಇಲ್ಲದೆ ಬೆಳೆಯಲು ಸಾಧ್ಯವಿಲ್ಲ, ಅಂತೆಯೇ ಮಾಧ್ಯಮಕ್ಕೂ ರಾಜಕಾರಣಿಗಳ ಅವಶ್ಯಕತೆ ಇದೆ. ನಮಗೆ ಅವಿನಾಭಾವ ಸಂಬಂಧ ಇದೆ. ಟೀಕೆ ಮಾಡಿದಾಗ ಸಮನಾಗಿ ತೆಗೆದುಕೊಂಡು ಹೋಗಬೇಕು. ನಾವು ಹೇಳಿದ್ದನ್ನ ಪ್ರಕಟ ಮಾಡಿ ನಮ್ಮ ಅಭಿಪ್ರಾಯ ಜನರಿಗೆ ತಲುಪಿಸುವ ಕಾರ್ಯ ಆಗಬೇಕು, ಹಾಗಾದಾಗ ಆರೋಗ್ಯಕರವಾದ ಸಮಾಜ ನಿರ್ಮಾಣ ಆಗುತ್ತದೆ. ಉದಯವಾಣಿಯಿಂದ ಕರ್ನಾಟಕದ ಉದಯವಾಗಲಿ ಎಂದರು.
ಉದಯವಾಣಿ ಸಂಸ್ಥೆಯ ಪರವಾಗಿ ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಪೈ, ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್ . ಪೈ, ಮಣಿಪಾಲ ಟೆಕ್ನಾಲಜಿಸ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನ ಸಿಇಒ& ಎಂಡಿ ವಿನೋದ್ ಕುಮಾರ್, ಸಂಪಾದಕರಾದ ಅರವಿಂದ ನಾವಡ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.
ಸಿಎಂ ಜತೆಯಲ್ಲಿ ಸಚಿವರಾದ ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿ ಹಿರಿಯ ಅಧಿಕಾರಿಗಳು ಆಗಮಿಸಿದ್ದರು.