Advertisement

ಗೆಳೆಯ ಉಮೇಶ್ ಕತ್ತಿ‌ ನೆನೆದು ಕಣ್ಣೀರು ಹಾಕಿದ ಸಿಎಂ ಬೊಮ್ಮಾಯಿ

03:29 PM Apr 26, 2023 | Team Udayavani |

ಬೆಳಗಾವಿ: ಆತ್ಮೀಯ ಗೆಳೆಯ ದಿ. ಉಮೇಶ್ ಕತ್ತಿ ಅವರನ್ನು ನೆನಪಿಸಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರು ಸುರಿಸಿದರು.

Advertisement

ಹುಕ್ಕೇರಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಪರ ಪ್ರಚಾರಾರ್ಥವಾಗಿ ಬುಧವಾರ ನಡೆದ ರೋಡ್ ಶೋ ಬಳಿಕ ಮಾತನಾಡಲು ಆರಂಭಿಸುತ್ತಿದ್ದಂತೆ ಉಮೇಶ ಕತ್ತಿ ಅವರನ್ನು ನೆನೆಯುತ್ತಲೇ ಕಣ್ಣೀರು ಹಾಕಿದರು.

ಉಮೇಶ ಅಣ್ಣ ಕತ್ತಿ ನಮ್ಮ ಜೊತೆಗೆ ಇಲ್ಲ. ಆದರೆ ಅವರು ಸ್ವರ್ಗದಲ್ಲಿ ಇದ್ದುಕೊಂಡು ನಿಖಿಲ್ ಕತ್ತಿ ಹಾಗೂ ರಮೇಶ ಕತ್ತಿ ಅವರಿಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುತ್ತಿದ್ದಾರೆ. ರಾಜಕೀಯ ಮೀರಿ ಕತ್ತಿ ಕುಟುಂಬದೊಂದಿಗೆ ನಮ್ಮ ಸಂಬಂಧ ಇದೆ. ಮೂರನೇ ತಲೆಮಾರಿನವರೆಗೂ ನಮಗೂ ಹಾಗೂ ಕತ್ತಿ ಕುಟುಂಬಕ್ಕೆ ಇದೆ. ಹುಕ್ಕೇರಿ ಮತ್ತು ಚಿಕ್ಕೋಡಿಯಲ್ಲಿ ನಮ್ಮ ಗೆಲುವು ನಿಶ್ಚಿತವಿದೆ. ಅಂತರ ಹೆಚ್ಚಿಸಬೇಕು. ನಿಖಿಲ್ ಹಾಗೂ ರಮೇಶ ಗೆಲುವು ನೋಡಿ ಉಮೇಶಣ್ಣ ನೋಡಿ ಸಂತೋಷ ಪಡಬೇಕು ಎಂದರು.

ಇದನ್ನೂ ಓದಿ: IED ಗೆ 11 ಯೋಧರು ಹುತಾತ್ಮ: ದಾಂತೇವಾಡದಲ್ಲಿ ನಕ್ಸಲರ ಅಟ್ಟಹಾಸ

ಉಮೇಶ ಕತ್ತಿ ಸೋಲಿಲ್ಲದ ಸರರ್ದಾರ. ನಿರಂತರವಾಗಿ ಹುಕ್ಕೇರಿ ಮತಕ್ಷೇತ್ರದಿಂದ 9 ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತಂದೆ ವಿಶ್ವನಾಥ ಕತ್ತಿ ಅವರ ನಿಧನದಿಂದ 25ನೇ ವಯಸ್ಸಿನಲ್ಲಿ ಉಮೇಶ ಕತ್ತಿ ವಿಧಾನಸಭೆ ಪ್ರವೇಶಿಸಿದರು. ನಿಮ್ಮೆಲ್ಲರ ಆರ್ಶೀವಾದದಿಂದ ಹಿಂತಿರುಗಿ ನೋಡದೇ ಈ ಜನರ ಸೇವೆ ಮಾಡಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು.

Advertisement

ಸಚಿವರಾಗಿ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸಿದ್ದು ಉಮೇಶ ಕತ್ತಿ. ರೈತರ ಬಗ್ಗೆ ಅಪರವಾದ ಕಳಕಳಿ ಹೊಂದಿದ್ದರು. ಈ ಭಾಗದ ಕಬ್ಬು ಬೆಳೆಗಾರರ ಕಬ್ಬು ಇಲ್ಲಿಯೇ ಉಳಿಯಬೇಕೆಂದು ಸಂಕೇಶ್ವರ ಜೊತೆಗೆ ಬೆಲ್ಲದ ಬಾಗೇವಾಡಿಯಲ್ಲಿಯೂ ಕಾರ್ಖಾನೆ ಆರಂಭಿಸಿದರು. ಆಹಾರ ಸಚಿವರಾಗಿ ಉತ್ತರ ಕರ್ನಾಟಕಕ್ಕೆ ಜೋಳ ಹಾಗೂ ದಕ್ಷಿಣ ಕರ್ನಾಟಕಕ್ಕೆ ರಾಗಿ ವಿತರಿಸಲು ಕ್ರಮ ಕೈಗೊಳ್ಳುವ ಮೂಲಕ ರೈತರ ಬಗ್ಗೆ ದೂರದೃಷ್ಟಿ ಹಾಗೂ ಕಳಕಳಿ ಹೊಂದಿದ್ದರು ಎಂದರು.

ಅಡವಿ ಸಿದ್ದೇಶ್ವರ ಏತ ನೀರಾವರಿ ಹಾಗೂ ಶಂಕರಲಿಂಗ ಏತ ನೀರಾವರಿ ಯೋಜನೆ ನೀಡಬೇಕು ಎಂದು ನನ್ನ ಬಳಿ ಬೇಡಿಕೆ ಇಟ್ಟರು. ನಾನು ಮಂಜೂರಾತಿ ನೀಡುವ ಸಮಯದಲ್ಲಿ ಉಮೇಶಣ್ಣ ಇರಲಿಲ್ಲ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ ರಮೇಶ ಹಾಗೂ ನಿಖಿಲ್ ಮುಂದುವರಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next