Advertisement

ವರ್ಚುವಲ್ ಆನ್ ಲೈನ್ ಮೂಲಕ ಚಿಕ್ಕೋಡಿ ಕೋವಿಡ್ ಟೆಸ್ಟ್ ಸೆಂಟರ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

06:24 PM Aug 21, 2021 | Team Udayavani |

ಚಿಕ್ಕೋಡಿ: ಬಹುದಿನಗಳ ಬೇಡಿಕೆಯಾಗಿದ್ದ ಚಿಕ್ಕೋಡಿ ನಗರದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಆರಂಭಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ವರ್ಚುವಲ್ ಆನ್ ಲೈನ್ ಮೂಲಕ ಉದ್ಘಾಟಿಸಿ ಲೋಕಾರ್ಪನೆಗೊಳಿಸಿದರು.

Advertisement

ಶನಿವಾರ ಬೆಳಗಾವಿಗೆ ಆಗಮೀಸಿದ ಮುಖ್ಯಮಂತ್ರಿಗಳು ಸುವರ್ಣಸೌಧದಲ್ಲಿ ವರ್ಚುವಲ್ ಮೂಲಕ ಚಿಕ್ಕೋಡಿ ಕೋವಿಡ್ ಆರ್‌ಟಿಪಿಸಿಆರ್ ಸೆಂಟರ್ ಉದ್ಘಾಟಿಸಿದರು. ಚಿಕ್ಕೋಡಿ ಉಪವಿಭಾಗ ನೆರೆಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವುದರಿಂದ ಪ್ರತಿದಿನ ನೂರಾರು ಕೋವಿಡ್ ಸೋಂಕಿತರು ಕಂಡು ಬರುತ್ತಿದ್ದರು. ಇಡೀ ರಾಜ್ಯದಲ್ಲಿ ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಟೆಸ್ಟಿಂಗ್ ರಿಪೋರ್ಟ ಬರುವುದು ನಾಲ್ಕೈದು ದಿನದಿಂದ ಒಂದು ವಾರದವರೆಗೆ ತಡವಾಗುತ್ತಿತ್ತು. ಹೀಗಾಗಿ ಸರ್ಕಾರ ಕೋವಿಡ್ ಟೆಸ್ಟಿಂಗ್ ಸೆಂಟರ್ ಚಿಕ್ಕೋಡಿಗೆ ಮಂಜೂರು ಮಾಡಿತ್ತು.

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾದ ಕೋವಿಡ್ ಟೆಸ್ಟಿಂಗ್ ಸೆಂಟರ್ ಉದ್ಘಾಟನೆ ಮುಂಚಿತವಾಗಿ ತಹಶೀಲ್ದಾರ ಪ್ರವೀನ ಜೈನ, ತಾಲೂಕಾ ಆರೋಗ್ಯಾಧಿಕಾರಿ ಡಾ, ವಿಠ್ಠಲ ಶಿಂಧೆ, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ, ಸಂತೋಷ ಕೊಣ್ಣೂರೆ, ಡಾ, ರವೀಂದ್ರ ಅಂಟಿನ ಅವರು ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1350 ಪ್ರಕರಣ ಪತ್ತೆ|1648 ಸೋಂಕಿತರು ಗುಣಮುಖ

ಈ ಸಂದರ್ಭದಲ್ಲಿ ವೈದ್ಯರಾದ ವಿಶಾಲ ಹಡಪದ, ಡಾ, ಲಕ್ಷ್ಮೀಕಾಂತ ಕಡ್ಲೇಪ್ಪಗೋಳ, ಡಾ, ಬದನಿಕಾಯಿ, ಲಕ್ಕಮಗೌಡ ಪಾಟೀಲ, ಸೋಮನಾಥ ಪೂಜೇರಿ, ರಾಜಶೇಖರ ಹಳೆಮನಿ, ರಮೇಶ ದೊಡಮನಿ, ಶ್ರೀನಿವಾಸ ನಾಯಿಕ, ಸಂಜು ಕುಲಕರ್ಣಿ, ಗೀತಾ ಕಾಮತ, ಅಜೀತ ಕೊಟ್ನಿಸ್, ಜಗದೀಶ ಹುಲಕುಂದ,ಜಹೀರ ಮುಲ್ಲಾ ಮುಂತಾದವರು ಇದ್ದರು.

Advertisement

ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದ ಫಲ: ಚಿಕ್ಕೋಡಿಯಲ್ಲಿ ಕೋವಿಡ್ ಟೆಸ್ಟಿಂಗ್ ಸೆಂಟರ್ ಆರಂಭಿಸಬೇಕೆಂದು ಶಾಸಕ ಗಣೇಶ ಹುಕ್ಕೇರಿ ನಿಕಟಪೂರ್ವ ಸಿಎಂ ಯಡಿಯೂರಪ್ಪ. ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು. ಈಗೀನ ಆರೋಗ್ಯ ಸಚಿವ ಡಾ.ಸುಧಾಕರ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next