Advertisement

ಸುಳ್ಳು-ಮೋಸ ಕಾಂಗ್ರೆಸ್‌ನ ಮನೆ ದೇವ್ರು: ಬೊಮ್ಮಾಯಿ

08:42 PM Mar 03, 2023 | Team Udayavani |

ಬಸವಕಲ್ಯಾಣ: ಸುಳ್ಳು, ಮೋಸವೇ ಕಾಂಗ್ರೆಸ್‌ ಪಕ್ಷದ ಮನೆ ದೇವರು. ಸಾಮಾಜಿಕ ನ್ಯಾಯ ಎನ್ನುವುದು ಭಾಷದಲ್ಲಿ ಸಿಗುವುದಿಲ್ಲ. ಹಿಂದುಳಿದ ಜನರನ್ನು ಹಿಂದೆಯೇ ಬಿಟ್ಟು, ಕಾಂಗ್ರೆಸ್‌ ಮುಂದೆ ಹೋಗಿದೆ. ಕೇವಲ ಒಂದು ವರ್ಗಕ್ಕೆ ಬೆಣ್ಣೆ, ಉಳಿದ ವರ್ಗಗಳಿಗೆ ಸುಣ್ಣ ಕೊಟ್ಟಿದ್ದು ಕಾಂಗ್ರೆಸ್‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

Advertisement

ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ದೀನದಲಿತರು,ದುರ್ಬಲವರ್ಗದವರಿಗೆ ಸಾಮಾಜಿಕ ನ್ಯಾಯ ಎಂದು ಕೇವಲ ಭಾಷಣ ಮಾಡುತ್ತಾರೆ. ಆ ಪಕ್ಷ ದುರ್ಬಲ ಸಮುದಾಯಗಳನ್ನು ಕೇವಲ ಮತಬ್ಯಾಂಕ್‌ ಆಗಿ ಬಳಸಿಕೊಂಡಿತು. ಎಸ್‌ಸಿ-ಎಸ್‌ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಕೈಗೊಂಡು ನ್ಯಾಯಕೊಡಿಸಿದ್ದು ಬಿಜೆಪಿ ಸರ್ಕಾರ ಎಂದರು.

ಕಾಂಗ್ರೆಸ್‌ನವರು ತಮ್ಮ ಐದು ವರ್ಷದ ಆಡಳಿತದಲ್ಲಿ ರಾಜ್ಯದ ಪ್ರತಿ ಜನರ ಮೇಲೆ ಸಾಲ ಹೊರೆಯನ್ನು ಹೊರಿಸಿ¨ªಾರೆ. ಅಲ್ಲದೇ ರಾಜಕೀಯ-ಜಾತಿ-ಧರ್ಮದ ವಿಷಯದಲ್ಲಿ ದ್ವೇಷ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ. ವಿವಿಧ ಭಾಗ್ಯಗಳನ್ನು ನೀಡುತ್ತೇವೆ ಎಂದು ಜನರ ಪಾಲಿಗೆ ದೌರ್ಭಾಗ್ಯವನ್ನು ನೀಡಿ, ರಾಜ್ಯದ ಅಭಿವೃದ್ಧಿಯಲ್ಲಿ ಹಿನ್ನಡೆ ಮಾಡಿದ್ದಾರೆ. ಈ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ದೂರುತ್ತಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ದುರ್ಬಲ ವರ್ಗದವರಿಗೆ ನ್ಯಾಯ ಒದಗಿಸುವಲ್ಲಿ ವಿಫ‌ಲರಾಗಿದ್ದಾರೆ. ಅನ್ನಭಾಗ್ಯ’ ಯೋಜನೆಯಡಿ ಪಡಿತರ ಅಕ್ಕಿಯನ್ನು ಐ ದು ಕೆಜಿಗೆ ಇಳಿಸಿದರು. ಚುನಾವಣೆ ಬಂದಾಗ ಏಳು ಕೆಜಿಗೆ ಹೆಚ್ಚಿಸಿದರು. ಈಗ 10 ಕೆಜಿ ಅಕ್ಕಿ ನೀಡುತ್ತೇವೆಂದು ಭರವಸೆ ನೀಡುತ್ತಿದ್ದಾರೆ. ಈ ರೀತಿ ಜನರಿಗೆ ಸುಳ್ಳು ಹೇಳುವುದು ಕಾಂಗ್ರೆಸ್‌ ಪಕ್ಷದ ಜಾಯಮಾನವಾಗಿದೆ ಎಂದರು.

ಕೋವಿಡ್‌ ಸಂದರ್ಭ ಜೀವನೋಪಾಯ, ಆಹಾರ, ಔಷಧಿ, ಲಸಿಕೆಯನ್ನು ದೇಶಕ್ಕೆ ಕೊಟ್ಟ ಧೀಮಂತ ನಾಯಕ ಪ್ರಧಾನಿ ಮೋದಿ. ದೇಶದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತಂದು, ದೇಶದಲ್ಲಿ ಶೇ. 6.5ರಷ್ಟು ಬೆಳವಣಿಗೆ ದಾಖಲಿಸಲಾಗಿದೆ.

ಕೋವಿಡ್‌ ಸಂದರ್ಭ ಕಾಂಗ್ರೆಸ್‌ ಆಡಳಿತದಲ್ಲಿದ್ದರೆ, ದೇಶದಲ್ಲಿ ಅಲ್ಲೋಲಕಲ್ಲೋಲ ಆಗುತ್ತಿತ್ತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸ್ವಾಭಿಮಾನಿ ದೇಶವನ್ನು ನಿರ್ಮಿಸಲಾಗಿದೆ. ಬಸವಣ್ಣನವರ ಆದರ್ಶಗಳ ಹಾದಿಯಲ್ಲಿ ನಡೆಯುತ್ತಿರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ. ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಅಮೃತ ಕಾಲವನ್ನು ಸಾಧಿಸಲು ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಬೇಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next