Advertisement

ಶಿಗ್ಗಾಂವಿ ಅಖಾಡಕ್ಕೆ ಬನ್ನಿ..;Congress ನಾಯಕರಿಗೆ ಪಂಥಾಹ್ವಾನ ಕೊಟ್ಟ CM ಬೊಮ್ಮಾಯಿ

05:11 PM Apr 07, 2023 | Team Udayavani |

ಹಾವೇರಿ :ನನಗೆ ಅವಿರೋಧ ಆಯ್ಕೆ ಬೇಡ, ನನಗೆ ಕುಸ್ತಿ ಬೇಕು,ಕಣಕ್ಕೆ ಯಾರು ಬರುತ್ತಿರೊ ಬನ್ನಿ. ಅಂದಾಗಲೇ ಯಾರ ಶಕ್ತಿ ಎಷ್ಟು ಅಂತ ಗೊತ್ತಾಗುತ್ತದೆ. ಸೆಡ್ಡು ಹೊಡೆದೇ ಬಿಡುತ್ತೇನೆ, ಕುಸ್ತಿ ಪಟ್ಟುಗಳು ಪ್ರ್ಯಾಕ್ಟೀಸ್ ಮಾಡಕೊಂಡೆ ಬನ್ನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಗುರುವಾರ ಸ್ವಕ್ಷೇತ್ರದಿಂದ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

Advertisement

ಶಿಗ್ಗಾಂವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಿಗ್ಗಾಂವಿ ಅಖಾಡಕ್ಕೆ ಬರುವಂತೆ ಕೈ ನಾಯಕರಿಗೆ ಪಂಥಾಹ್ವಾನ ಕೊಟ್ಟ ಸಿಎಂ”ಇವತ್ತು ಶಿಗ್ಗಾಂವಿ ಸವಣೂರಿನಲ್ಲಿ ಬಿಜೆಪಿ ಶಕ್ತಿ ಇಮ್ಮಡಿಯಾಗಿದೆ. 2023 ಮೇ 13 ಕ್ಕೆ ರಾಜ್ಯದಲ್ಲಿ ನಮ್ಮ ಪಕ್ಷ ಸಂಪೂರ್ಣ ಬಹುಮತದಿಂದ ಅಧಿಕಾರದಿಂದ ಬರುವ ದಿಕ್ಸೂಚಿ ಇದು. ಪಕ್ಷ ಸೇರಿದವರನ್ನ ನೋಡಿದಾಗ, ಅವರ್ಯಾರೂ ಹೋರಗಿನವರಲ್ಲ. 35 ವರ್ಷದ ರಾಜಕೀಯ ಜೀವನದಲ್ಲಿ ನನ್ನ ಜತೆ ಕೆಲಸ ಮಾಡಿದವರು. ನಾವೆಲ್ಲ ಒಂದುಗೂಡಿದ್ದೇವೆ ಒಂದೆ ಕುಟುಂಬದ ಸದಸ್ಯರು, ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದವರು. 2008 ರಲ್ಲಿ ತಾಲೂಕಿನ ಅಭಿವೃದ್ಧಿಗೆ ಒಂದಾಗಿದ್ದೆವು. ಅದೆ ವಾತಾವರಣ ನನಗೆ ಇವತ್ತು ನೆನಪಾಗುತ್ತಿದೆ” ಎಂದರು.

”ಇನ್ನುಮುಂದೆ ಶಿಗ್ಗಾಂವಿ ಸವಣೂರಿನಲ್ಲಿ ಒಂದೆ ಒಂದು ಪಕ್ಷದಿಂದ ಅಭಿವೃದ್ಧಿ, ಇಡಿ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿ ಪರಿವರ್ತನೆ ಮಾಡಲು ನಿವೆಲ್ಲ ಬಂದು ಶಕ್ತಿ ತುಂಬಿದ್ದಿರಿ. ಗೋಡಾ ಹೈ ಮೈದಾನ ಹೈ, ಒಂದು ತಿಂಗಳು ಮಾತ್ರ ರಾಜಕಾರಣ ಮಾಡೋಣ. ಇವತ್ತು ಬಂದವರಾರು ಒತ್ತಡಕ್ಕೆ ಮಣಿಯುವವರಲ್ಲ, ಪ್ರೀತಿ ವಿಶ್ವಾಸ ದಿಂದ ಬಂದಿದ್ದಾರೆ” ಎಂದರು.

”ಈ ಕ್ಷೇತ್ರದಲ್ಲಿ ಬಹಳಷ್ಟು ಅಪಪ್ರಚಾರ ನಡೆಯುತ್ತಿತ್ತು. ಹಿಂದೆ ಬಹಳ ದೊಡ್ದ ಅಪಪ್ರಚಾರ ಇತ್ತು.ಹಿಂದೆ ಪತ್ರಿಕೆಯಲ್ಲಿ ಬಂದಿತ್ತು ಬೊಮ್ಮಾಯಿ ಗೆಲ್ಲಲು ಸಾಧ್ಯವಿಲ್ಲ ಅಂತ ಬರೆದಿದ್ದರು. ಈಗಲೂ ಏನೇನೋ ಪ್ರಚಾರ ಮಾಡುತ್ತಾರೆ. ಬೊಮ್ಮಾಯಿಯನ್ನ ಸೋಲಿಸಲು ದೆಹಲಿ,ಬೆಂಗಳೂರಿನಲ್ಲಿ ಕುಳಿತು ಪ್ಲ್ಯಾನ್ ಮಾಡಿದ್ದೆ ಮಾಡಿದ್ದು..” ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

”ನಾನು ತಲೆ ಕೆಡಿಸುಕೊಂಡಿಲ್ಲ, ನನಗೆ ವಿಶ್ವಾಸ ಇರೋದು ಕ್ಷೇತ್ರದ ಜನರ ಮೇಲೆ. ಕ್ಷೇತ್ರದ ಜನರ ಆಶೀರ್ವಾದದಿಂದ ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಿರಿ. ನೀರಾವರಿ ಯೋಜನೆ ನಾನೆ ಮಾಡಿ, ನಾನೆ ಉದ್ಘಾಟನೆ ಕೆಲಸ ಮುಗಿಸಿದ್ದೇನೆ. ಪ್ರೀತಿ ನನ್ನ ಮೇಲಿತ್ತು, ವಿಶ್ವಾಸ ಅಲ್ಲಿತ್ತು. ಇವತ್ತು ಪ್ರೀತಿ ವಿಶ್ವಾಸ ಒಂದಾಗಿದೆ. ನನಗೆ ಬೇರೆ ಬೇರೆ ಕ್ಷೇತ್ರದಲ್ಲಿ ಆಹ್ವಾನ ಇದ್ದರೂ, ಎಲ್ಲಿ ದುಡಿಮೆ ಇದೆಯೋ ಅಲ್ಲೆ ನನ್ನ ಪರೀಕ್ಷೆ ಆಗಬೇಕು ಅಂತಾ ಶಿಗ್ಗಾಂವಿಯಿಂದಲೇ ನನ್ನ ಸ್ಪರ್ಧೆ” ಎಂದರು.

Advertisement

”ಕೆಲವರು ಕ್ಷೇತ್ರ ಹುಡುಕುತ್ತಿದ್ದಾರೆ, ಕ್ಷೇತ್ರ ಅಭಿವೃದ್ಧಿ ಮಾಡದವರು ರಾಜ್ಯ ಅಭಿವೃದ್ಧಿ ಮಾಡುತ್ತಾರಾ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

”ಬಿಜೆಪಿ ಒಂದು ಸಮುದ್ರ, ಚುನಾವಣೆ ಯಲ್ಲಿ ಸಮುದ್ರ ಮಂಥನ ಆಗುತ್ತದೆ.ಏನೇ ವಿಷ ಬಂದರೂ ನಾವು ಜನರಿಗೆ ಅಮೃತ ಕೊಡುತ್ತೇವೆ.ವಿರೋಧ ಪಕ್ಷಗಳು ಏನೆ ಅಪಪ್ರಚಾರ ಮಾಡಲಿ. ನಾನು ಮೀಸಲಾತಿ ನಿರ್ಣಯ ಮಾಡಿದ ಮೇಲೆ ವಿರೋಧ ಪಕ್ಷಗಳು ತಲೆಮೇಲೆ ಕೈ ಇಟ್ಟುಕೊಂಡು ಕುಳಿತಿದ್ದಾರೆ. ಎಸ್ ಸಿ,ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇನೆ, ಆ ಸಾಹಸ ನಿಮ್ಮ ಬಸವರಾಜ್ ಬೊಮ್ಮಾಯಿ ಮಾಡಿದ್ದಾನೆ.ಇದರ ಪರವಾಗಿ ನೀವು ಇದ್ದೀರೋ ಇಲ್ಲವೋ ಹೇಳಿ” ಎಂದು ಪ್ರಶ್ನಿಸಿದರು.

”ನನಗೆ ಈ ಕ್ಷೇತ್ರ ಮತ್ತು ಸಮಸ್ತ ಕರ್ನಾಟಕದ ಸೇವೆ ಮಾಡುವ ಅವಕಾಶ ದೊರೆಯಲು ಕಾರಣ ಈ ಕ್ಷೇತ್ರದ ಜನತೆಯ ಆಶೀರ್ವಾದ. ನಾನು ನೀರಾವರಿ ಸಚಿವನಾಗಿ 7 ಲಕ್ಷ ಎಕರೆಗಿಂತ ಹೆಚ್ಚು ಕೃಷಿಭೂಮಿಗೆ ನೀರಾವರಿ ಒದಗಿಸಿರುತ್ತೇನೆ. ಇದೊಂದು ದಾಖಲೆ ಆಗಿದ್ದು ಈ ಸಾಧನೆಯ ಶ್ರೇಯಸ್ಸು ಇಲ್ಲಿನ ಜನತೆಗೆ ಸಲ್ಲುತ್ತದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next