Advertisement
ಪೋಸ್ಟರ್ ಅಭಿಯಾನಕ್ಕೆ ತಿರುಗೇಟು ನೀಡಲು ಮುಂದಾದ ಬಿಜೆಪಿ, “ಇದು ಲಿಂಗಾಯತ ಸಮು ದಾಯದ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರುವ ಪ್ರಯತ್ನ’ ಎಂದು ಬಿಂಬಿಸಲು ಮುಂದಾಗಿದೆ.
Related Articles
Advertisement
ರಾಜಕೀಯ ದುರುದ್ದೇಶಈ ಮಧ್ಯೆ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ ಎಂಬುದನ್ನು ತಿಳಿದು ವೀರಶೈವ ಲಿಂಗಾಯತ ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಒಡೆಯುವ ಕೆಲಸ ನಡೆದಿತ್ತು. ಪ್ರತೇಕ ಧರ್ಮದ ಬಗ್ಗೆ ಕೆಲವರಿಗೆ ಆಗ ನೆನಪಾಗಿತ್ತು. ಅದರಲ್ಲಿ ಒಳ್ಳೆಯ ಉದ್ದೇಶ ಇರಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಡೆಯಬೇಕಿತ್ತು. ಆದರೆ ಸಫಲ ರಾಗಲಿಲ್ಲ ಎಂದಿದ್ದಾರೆ. ಸಚಿವ ಸುಧಾಕರ್ ಹೇಳಿಕೆ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ನಾನು ಅದರ ಭಾಗವಲ್ಲ. ಹಾಗಾಗಿ ಏನೂ ಹೇಳುವುದಿಲ್ಲ ಎಂದರು. ಲಿಂಗಾಯತ ವಿರೋಧಿ ಸರಕಾರ : ಕಾಂಗ್ರೆಸ್ ಟೀಕೆ
ಜಾತಿ ಶೀಲ್ಡ್ ಹಿಡಿದು ಕಮಿಷನ್ ಭ್ರಷ್ಟಾಚಾರವನ್ನು ರಕ್ಷಿಸಲುಬಿಜೆಪಿ ವಿಫಲಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್‌ಮೂಲಕ ಕುಟುಕಿದೆ. ಮಠಗಳ ಅನುದಾನದಲ್ಲೂ 30 ಪರ್ಸೆಂಟ್ ಕಮಿಷನ್ ದೋಚಲಾಗಿದೆ ಎಂದು ಲಿಂಗಾಯತ ಸ್ವಾಮಿಗಳೇ ಆರೋಪಿಸಿದ್ದರು. ಇದು ಲಿಂಗಾಯತರಿಗೆ ಮಾಡಿದ ಅವಮಾನ ವಲ್ಲವೇ? 40 ಪರ್ಸೆಂಟ್ ಸರಕಾರದ್ದು “ಜಾತ್ಯತೀತ ಭ್ರಷ್ಟಾಚಾರ’. ಇದರಲ್ಲಿ ಲಿಂಗಾಯತರೂ ಸಂತ್ರಸ್ತರೇ. 40 ಪರ್ಸೆಂಟ್ ಕಮಿಷನ್‌ಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ ಸಂತೋಷ್ ಪಾಟೀಲ್ ಕೂಡ ಲಿಂಗಾಯತ. ಅದೇ ಸಮುದಾಯದ ಜೀವ ತೆಗೆದ ಬಿಜೆಪಿ ಸರಕಾರ ಲಿಂಗಾಯತ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದೆ. ಪೇಸಿಎಂ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ಸಿ ನದ್ದು ಕೊಳಕು ರಾಜಕೀಯ. ಏನೇ ವಿಷಯವಿದ್ದರೂ ನೇರವಾಗಿ ಮಾತಾಡಬೇಕು, ದಾಖಲೆ ನೀಡ ಬೇಕು, ತನಿಖೆಯಾಗಬೇಕು. ಇದು ಅವರ ನೈತಿಕತೆಯ ಅಧ:ಪತನ ತೋರಿಸುತ್ತದೆ. -ಬಸವರಾಜ ಬೊಮ್ಮಾಯಿ, ಸಿಎಂ ನನ್ನ ಹಾಗೂ ಡಿ.ಕೆ.ಶಿ. ಫೋಟೋ ಹಾಕಿ ಬಿಜೆಪಿ ಯವರು ಸಾಮಾಜಿಕ ಜಾಲತಾಣ, ಬುಕ್ ಮಾಡಿ ಬಿಡುಗಡೆ ಮಾಡಿ ದ್ದಾರಲ್ಲಾ, ಹಾಗಾದರೆ ಅವರು ಯಾವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇದು ವ್ಯಕ್ತಿ ಪ್ರಶ್ನೆಯಲ್ಲ, ಮುಖ್ಯಮಂತ್ರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಭಿಯಾನ ಮಾಡುತ್ತಿದ್ದೇವೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಯವರ ಜನಪರ ಕಾರ್ಯ ಸಹಿಸದ ವಿಪಕ್ಷದವರು ಬೊಮ್ಮಾಯಿವರ ಚಾರಿತ್ರ್ಯಹರಣ ಮಾಡುತ್ತಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ನಾವು ಉಗ್ರ ಹೋರಾಟ ಕೈಗೊಳ್ಳುತ್ತೇವೆ.
-ಶಿವಕುಮಾರ್ ಆರ್. ಮೇಟಿ,
ಅಧ್ಯಕ್ಷರು, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ