Advertisement

ಕಾಪು ತಾಲೂಕಿನಲ್ಲೇ ಉಡುಪಿ ಮಲ್ಲಿಗೆ ಕ್ಲಸ್ಟರ್‌: ಜಿ.ಪಂ. ಸಿಇಒ

01:58 AM Mar 26, 2022 | Team Udayavani |

ಉಡುಪಿ: ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್‌)ದಡಿ ನೋಂದಣಿಯಾಗಿರುವ ಉಡುಪಿ ಮಲ್ಲಿಗೆ ಬೆಳೆಯನ್ನು ನರೇಗಾಯೋಜನೆಯಡಿ ಕ್ಲಸ್ಟರ್‌ ಮಾದರಿಯಲ್ಲಿ ಬೆಳೆದು, ಅಭಿವೃದ್ಧಿ ಪಡಿಸಲಾಗುತ್ತದೆ.

Advertisement

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆಯಿಂದ ಜಿ.ಪಂ.ಗೆ ನಿರ್ದೇಶನ ಬಂದಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮಲ್ಲಿಗೆ ಬೆಳೆಗೆ ಈಗಾಗಲೇ ಉತ್ತೇಜನ ನೀಡಲಾಗುತ್ತಿದ್ದರೂ ಕೃಷಿಕರು ನಾನಾ ಕಾರಣಕ್ಕೆ ಆಸಕ್ತಿ ತೋರಿಸುತ್ತಿಲ್ಲ.

ಐದು ಸೆಂಟ್ಸ್‌ ಜಾಗ ಇದ್ದವರೂ ಮಲ್ಲಿಗೆ ಗಿಡ ಬೆಳೆಯಲು ನರೇಗಾದಡಿ ಅವಕಾಶ ಮಾಡಿಕೊಡಲಾಗುತ್ತಿದೆ. ಜಿಐ ಸ್ಥಾನಮಾನ ಸಿಕ್ಕಿರುವುದರಿಂದ ಮಲ್ಲಿಗೆ ಬೆಳೆಯಲು ಇನ್ನಷ್ಟು ಪ್ರೋತ್ಸಾಹ ಸಿಗಲಿದೆ.

20-25 ಎಕರೆ ಪ್ರದೇಶ ದಲ್ಲಿ ಮಲ್ಲಿಗೆ ಕ್ಲಸ್ಟರ್‌ ರೂಪಿಸಲು ಇಲಾಖೆ ಸಲಹೆ ನೀಡಿರುವುದರಿಂದ ಜಿ.ಪಂ. ತಯಾರಿ ಮಾಡಿಕೊಳ್ಳುತ್ತಿದೆ. ತೋಟಗಾರಿಕೆ ಇಲಾಖೆ ಜಮೀನು ಅಥವಾ ಲಭ್ಯವಿರುವ ಖಾಸಗಿ ಜಮೀನಿನಲ್ಲಿ ಮಲ್ಲಿಗೆ ಕ್ಲಸ್ಟರ್‌ ನಿರ್ಮಿಸಲು ಯೋಜನೆ ಸಿದ್ಧಪಡಿ ಸಲಾಗುತ್ತಿದೆ. ಕಾಪು ತಾಲೂಕಿನಲ್ಲೇ ಕ್ಲಸ್ಟರ್‌ ಮಾಡಲು ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಒಂದೇ ಕಡೆ ಜಮೀನು ಸಿಗದೆ ಇದ್ದಲ್ಲಿ ಐದಾರು ಪಂಚಾಯತ್‌ಗಳನ್ನು ಸೇರಿಸಿ ಮಲ್ಲಿಗೆ ಕ್ಲಸ್ಟರ್‌ ಮಾಡಲಿದ್ದೇವೆ ಎಂದು ಜಿ.ಪಂ. ಸಿಇಒ ಡಾ| ವೈ. ನವೀನ್‌ ಭಟ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಮಠಾಧೀಶರ ಬಗ್ಗೆ ಮಾತನಾಡುವ ಕ್ರಮ ಸರಿಯಲ್ಲ: ಆರ್‌. ಅಶೋಕ್‌

Advertisement

ತೋಟಗಾರಿಕೆ ಇಲಾಖೆ ಸಹಕಾರ
ಮಲ್ಲಿಕೆ ಕ್ಲಸ್ಟರ್‌ ನಿರ್ಮಾಣ ಸಂಬಂಧ ತೋಟ ಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಸಭೆ ನಡೆಸಲಾಗುತ್ತದೆ. ನರೇಗಾ ಯೋಜನೆಯಡಿ ಗ್ರಾ.ಪಂ. ಪಿಡಿಒಗಳ ಮೂಲಕ ಕಾಮಗಾರಿ ನಡೆಸಲಾಗುತ್ತದೆ. ಮಲ್ಲಿಗೆ ಸಸಿ ಬೆಳೆಸುವುದು, ನಿರ್ವಹಣೆ ಇತ್ಯಾದಿ ತೋಟಗಾರಿಕೆ ಇಲಾಖೆ ಮಾಡಲಿದೆ. ಇದರ ಜತೆಗೆ ವೈಯಕ್ತಿಕವಾಗಿ ಮಲ್ಲಿಗೆ ಕೃಷಿ ಮಾಡುವವರಿಗೂ ಉತ್ತೇಜನ ನೀಡಲಾಗುತ್ತದೆ.

ಜಿಲ್ಲೆಯ ಮಟ್ಟುಗುಳ್ಳಕ್ಕೆ ಈಗಾಗಲೇ ಜಿಐ ಸ್ಥಾನಮಾನ ಸಿಕ್ಕಿದೆ. ಮಲ್ಲಿಗೆಗೂ ಜಿಐ ಸ್ಥಾನಮಾನ ಸಿಕ್ಕಿರುವುದರಿಂದ ಮಲ್ಲಿಗೆ ಕ್ಲಸ್ಟರ್‌ ನಿರ್ಮಾಣ ಮಾಡುವ ಮೂಲಕ ಅದರ ಅಭಿವೃದ್ಧಿಗೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುತ್ತದೆ.
ಡಾ| ವೈ. ನವೀನ್‌ ಭಟ್‌,
ಸಿಇಒ, ಜಿ.ಪಂ., ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next