Advertisement
ಆತಂಕ ಯಾಕೆ?: ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪನೆ ಮಾಡುವುದಾಗಿ ಘೋಷಿಸಿದೆ. ಕೊಪ್ಪಳದಲ್ಲಿ ಕಿನ್ನಾಳ ಕಲೆಯನ್ನಾಧರಿಸಿ ತೊಟ್ಟಿಲು, ಧಾರ್ಮಿಕ ಕಲಾಕೃತಿಗಳು, ಹಣ್ಣಿನ ಮಾದರಿಗಳಿಗೆ ಖ್ಯಾತಿ ಪಡೆದಿವೆ. ಚನ್ನಪಟ್ಟಣದ ಆಟಿಕೆಗಳು ಮಕ್ಕಳ ಆಟ, ಮನರಂಜನೆಗಾಗಿ ಮತ್ತು ಮನೆಯ ಅಲಂಕಾರಕ್ಕೆ ತಯಾರಾಗುವ ವಸ್ತುಗಳು, ಆಲೆಮರದಿಂದ ಗೊಂಬೆ ತಯಾರಿಸಿ ಅದಕ್ಕೆ ಸಸ್ಯಜನ್ಯ ಬಣ್ಣಗಳನ್ನು ಹಚ್ಚಿ, ಲಾಕ್ವೇರ್‌ನಿಂದ ಅಂತಿಮಗೊಳಿಸಲಾಗುತ್ತದೆ. ಚನ್ನಪಟ್ಟಣದ ಆಟಿಕೆಗಳಿಗೂ, ಕಿನ್ನಾಳ ಗ್ರಾಮದ ಕಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ರಾಜ್ಯ ಸರ್ಕಾರ ಅದೇಕೋ ಕೊಪ್ಪಳದಲ್ಲಿ ಆಟಿಕೆಗಳ ಕ್ಲಸ್ಟರ್ ಸ್ಥಾಪಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಈನಿರ್ಧಾರ ಚನ್ನಪಟ್ಟಣದ ಆಟಿಕೆ ಉದ್ಯಮಕ್ಕೆ ಧಕ್ಕೆಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
Related Articles
Advertisement
ಉಪಯೋಗಕ್ಕೆ ಬಾರದ ಕ್ರಾಫ್ಟ್ ವಿಲೇಜ್ : ಚನ್ನಪಟ್ಟಣದ ಆಟಿಕೆ ಕರಕುಶಲ ಕರ್ಮಿಗಳಿಗೆಂದೇ ರಾಜ್ಯ ಸರ್ಕಾರದಿಂದ ಕ್ರಾಫ್ಟ್ ವಿಲೇಜ್ ಸ್ಥಾಪನೆಯಾಗಿದೆ. ಆದರೆ ಇಲ್ಲಿರುವ ಯಂತ್ರೋಪಕರಣ ಮುಂತಾದ ವ್ಯವಸ್ಥೆಗಳು ಗೊಂಬೆ ಉದ್ಯಮಕ್ಕೆ ಪೂರಕವಾಗಿಲ್ಲ ಎಂದು ಕರಕುಶಲ ಕರ್ಮಿ ಎಂ.ಶಿವಣ್ಣ ಆರೋಪಿಸುತ್ತಾರೆ. ಮರಗೆಲಸಕ್ಕೆ ಹೆಚ್ಚು ಉಪಯೋಗವಾಗುವ ಯಂತ್ರೋಪಕರಣಗಳು ಇವು ಎಂದು ಅವರು ದೂರಿದ್ದಾರೆ. ಕ್ರಾಫ್ಟ್ ವಿಲೇಜ್ ಸ್ಥಾಪನೆಯಾದಾಗ ಗೊಂಬೆ ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಅಂತಲೇ ಭಾವಿಸಿದ್ದಾಗಿ, ಆದರೆ ಇಲ್ಲಿ ಗೊಂಬೆ ಉದ್ಯಮಕ್ಕೆ ಪ್ರಮುಖವಾಗಿ ಬೇಕಾಗದ ಯಂತ್ರೋಪಕರಣಗಳಾಗಲಿ, ಕಚ್ಚಾ ವಸ್ತುಗಳಾಗಲಿ ಸಿಗುವುದಿಲ್ಲ ಎಂದು ಮತ್ತೂಬ್ಬ ಕುಶಲ ಕರ್ಮಿ ರಾಮು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಶಂಸಿದ್ದಾರೆ. ಈ ಉದ್ಯಮದ ಕೈ ಹಿಡಿಯಲು ಸೂಕ್ತ ಯೋಜನೆ ರೂಪಿಸುವಂತೆ ಪ್ರಧಾನಿಗಳು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಚನ್ನಪಟ್ಟಣದ ಗೊಂಬೆ ನಮ್ಮ ಸಂಸ್ಕೃತಿ. ಕೊಪ್ಪಳದಲ್ಲಿ ಉದ್ದೇಶಿಸಿರುವ ಆಟಿಕೆ ಕ್ಲಸ್ಟರ್‌ಗೂ ಚನ್ನಪಟ್ಟಣದ ಆಟಿಕೆ ಉದ್ಯಮಕ್ಕೂ ಸಾಕಷ್ಟು ವ್ಯತ್ಯಾಸವಿದೆ. – ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಕೊಪ್ಪಳದಲ್ಲಿ ಚೀನಾ ಮಾದರಿಯ ಎಲೆಕ್ಟ್ರಾನಿಕ್ಸ್ ಆಟಿಕೆಗಳು ತಯಾರಾಗುತ್ತವೆ. ಹೀಗಾಗಿ ಚನ್ನಪಟ್ಟಣದ ಗೊಂಬೆ ಉದ್ದಿಮೆದಾರರು ವಿರೋಧಿಸುವ ಅಗತ್ಯವಿಲ್ಲ. ಮರದ ಗೊಂಬೆಗಳ ತಯಾರಿಕೆ ಚನ್ನಪಟ್ಟಣದ ವಿಶೇಷ. ಈ ಉದ್ಯಮಕ್ಕೆ ಇನ್ನಷ್ಟು ಜೀವ ತುಂಬುವ ಅಗತ್ಯವಿದೆ. –ಕುಮಾರಸ್ವಾಮಿ, ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ
-ಬಿ.ವಿ.ಸೂರ್ಯಪ್ರಕಾಶ್