Advertisement

ರಾಜ್ಯದ ಐದು ಕಡೆ ಮೋಡ ಬಿತ್ತನೆ

07:45 AM Aug 25, 2017 | Harsha Rao |

ಬೆಂಗಳೂರು: “ವರ್ಷಧಾರೆ’ ಯೋಜನೆಯಡಿ ಮೋಡ ಬಿತ್ತನೆ ಕಾರ್ಯ ಗುರುವಾರವೂ ಮುಂದುವರಿದಿದ್ದು, ಐದು ಕಡೆಗಳಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಜಕ್ಕೂರು ವಾಯು ನೆಲೆಯಿಂದ ಬೆಳಗ್ಗೆ ಮತ್ತು ಮಧ್ಯಾಹ್ನ 2 ಬಾರಿ ಹಾರಾಟ ವಿಶೇಷ ವಿಮಾನ ಹಾರಾಟ ನಡೆಸಿದೆ. 10 ಫ್ಲೇರ್‌ (ಬೆಂಕಿ ಉಗುಳುವ ಸಾಧನ) ಸುಟ್ಟು 5 ಮೋಡಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

Advertisement

ಸಂಜೆವರೆಗೆ ಕಾರ್ಯಾಚರಣೆ ನಡೆಸಿದ ವಿಮಾನ ಸಾಲಿಗ್ರಾಮದ ಬಳಿ ಇರುವ ಬಳ್ಳೂರು, ದುದ್ದಾ ಬಳಿಯ ನೀರಾಗುಂಡಾ, ಹಳೆಬೀಡು ಹತ್ತಿರದ ಚಾಟಚಾಟನಹಳ್ಳಿ ಹಾಗೂ ಕುದೂರು ಬಳಿಯ ಬೀಚನಹಳ್ಳಿಯಲ್ಲಿ ಮೋಡ ಬಿತ್ತನೆ
ಮಾಡಿತು. ಗುರುವಾರದಿಂದ ರಡಾರ್‌ ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಮೋಡ ಬಿತ್ತನೆಯ ಫ‌ಲಿತಾಂಶ ಇನ್ನಷ್ಟು ಆಶಾದಾಯಕವಾಗಿರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಘಟಕ ಕೇಂದ್ರದ ಮಾಹಿತಿಯಂತೆ ಬುಧವಾರ ಮೋಡ ಬಿತ್ತನೆ ನಡೆದ ಪ್ರದೇಶಗಳಲ್ಲಿ 2 ಮಿ.ಮೀ ರಿಂದ 30 ಮಿ.ಮೀ ವರೆಗೆ ಮಳೆ ಆಗಿದೆ ಎಂದು ಗ್ರಾಮೀಣಾಭಿವೃದಿಟಛಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next