ಬಾಬಾ ಡಾ ದಾಭಾ ಏರ್ಪಡಿಸಿರುವ “ಸ್ವದೇಶಿ ಫುಡ್ ಆಂಡ್ ಶಾಪಿಂಗ್’ ಮೇಳ ಯಲಹಂಕದಲ್ಲಿ ನಡೆಯು ತ್ತಿದೆ. ಮೇಳದ ಪ್ರಮುಖ ಆಕರ್ಷಣೆ ಮೂಲತಃ ಉಡುಪಿಯವರಾದ ಸಂದೇಶ್. ಅವರು ಪಿಯುಸಿ ಯಲ್ಲಿ ಫೇಲಾದಾಗ ಅವರ ತಂದೆ ಕೆಲಸಕ್ಕೆ ಬಾರದವನು ಎಂದಿದ್ದನ್ನೇ ಸವಾಲಾಗಿ ಸ್ವೀಕರಿಸಿ, ತಂದೆ ನಡೆಸುತ್ತಿರುವ ಹೊಟೆಲ್ ಉದ್ಯಮದಲ್ಲಿಯೇ ಏನಾದರೂ ಹೊಸತನ್ನು ಸಾಧಿಸಬೇಕೆಂಬ ಹಠದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವ ಕಲೆ ಕರಗತ ಮಾಡಿಕೊಂಡರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಈರುಳ್ಳಿ, ತರಕಾರಿ, ಮೆಣಸಿನಕಾಯಿ ಎಲ್ಲವನ್ನೂ ಕತ್ತರಿಸಿಕೊಳ್ಳುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಇವರು ಘೀ ರೈಸ್, ಜೀರಾ ರೈಸ್, ವೆಜ್ ಫಲಾವ್, ಮಸಾಲಾ ರೈಸ್, ಗೋಬಿ ಮಂಚೂರಿ, ಇಡ್ಲಿ ವಡೆ, ದೋಸೆಯನ್ನೂ ರುಚಿ ರುಚಿಯಾಗಿ ಮಾಡುತ್ತಾರೆ. ಯಲಹಂಕಕ್ಕೆ ಬಂದರೆ ಸಂದೇಶ್ ಅವರ ಅಡುಗೆ ರುಚಿ ಮಾತ್ರ ವಲ್ಲದೆ ಮೇಳದ ದಸರಾ ಗೊಂಬೆ ಪ್ರದರ್ಶನ, ಭಾರತೀಯ ಸಾಂಪ್ರದಾುಕ ಫ್ಯಾಶನ್ ಶೋ ಮುಂತಾದ ಕಾರ್ಯಕ್ರಮಗಳನ್ನೂ ನೋಡಬಹುದು.
ಎಲ್ಲಿ?: ನಿಸರ್ಗ ಮೈದಾನ,ಯಲಹಂಕ ಯಾವಾಗ?: ಅ. 6- 7
ಭಾರತದಲ್ಲಿ ಈವರೆಗೂ ಯಾರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡಿದ್ದನ್ನು ನಾನು ಕೇಳಿಲ್ಲ. ಆರು ಗಂಟೆಗಳ ಕಾಲ
ನಿರಂತರವಾಗಿ ಅಡುಗೆ ಮಾಡಿದ್ದು ಇಲ್ಲಿಯವರೆಗಿನ ದಾಖಲೆ. ವಿಶ್ವ ದಾಖಲೆ ಮತ್ತು ಗಿನ್ನಿಸ್ ದಾಖಲೆಗೆ ನನ್ನ ಹೆಸರು
ನೋಂದಾಯಿಸಿ ದ್ದೇನೆ.
ಸಂದೇಶ ದೊಡಮನಿ