Advertisement
ಇಂದಿರಾ ಕ್ಯಾಂಟೀನ್ ಯೋಜನೆಗೆ ಹಿಂದಿನ ಸಮ್ಮಿಶ್ರ ಸರ್ಕಾರ ಅನುದಾನ ನೀಡಬೇಕಾಗಿತ್ತು. ಈಗ ಈ ಯೋಜನೆಯನ್ನು ಮುಂದುವರಿಸಲು ಬಿಬಿಎಂಪಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಮೂಲಕ ಅನುದಾನ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕೆಂದರು. ಮಾಜಿ ಮೇಯರ್ ಸಂಪತ್ ರಾಜ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಯೋಜನೆ ನಿಲ್ಲಿಸುವುದು ಅಥವಾ ಹೆಸರು ಬದಲಿಸುವುದು ಬೇಡ. ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳ ಹೆಸರನ್ನು ಬದಲಾಯಿಸಿಲ್ಲ ಎಂದರು.
Related Articles
Advertisement
ಸರ್ಕಾರಕ್ಕೆ ಪತ್ರ ಬರೆದು ಪೂರಕ ಬಜೆಟ್‌ನಲ್ಲಾದರೂ,ಅನುದಾನ ಮೀಸಲಿರಿಸುವಂತೆ ಮನವಿ ಮಾಡಲಾಗಿತ್ತು ಎಂದು ವಿವರಿಸಿದರು. ಈಗ ಹೊಸ ಸರ್ಕಾರ ಮತ್ತು ಬಿಬಿಎಂಪಿ ಎರಡರಲ್ಲೂ ಅನುದಾನ ಮೀಸಲಿಡದೆ ಇರುವುದು ಇಂದಿರಾ ಕ್ಯಾಂಟೀನ್ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನು ಮಾಡಬೇಕು ಎಂದು ಪಾಲಿಕೆ ಸದಸ್ಯರೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಬಿಬಿಎಂಪಿಗೆ ಮತ್ತೂಂದು ಹೊರೆ?: ಈ ಹಿಂದಿನ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಕಳೆದ ಒಂದು ವರ್ಷದಿಂದ ಒಂದು ರೂ. ಸಹ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲ, 2017 ಮತ್ತು 2018ನೇ ಸಾಲಿನ ಹಣವನ್ನು ಸಹ ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಇದು ಮತ್ತೂಂದು ಹೊರೆಯಾಗಿದೆ.
ಬಿಬಿಎಂಪಿ 2019-20 ನೇ ಸಾಲಿನಲ್ಲಿ ಕ್ಯಾಂಟೀನ್ ನಿರ್ವಹಣೆಗೆ 152 ಕೋಟಿ ರೂ. ಅಂದಾಜು ಮಾಡುವುದರ ಜತೆಗೆ ಈ ಹಿಂದಿನ ವರ್ಷದಲ್ಲಿ ಹೆಚ್ಚುವರಿಯಾಗಿ ವೆಚ್ಚ ಮಾಡಿದ 58 ಕೋಟಿ ರೂ. ಸೇರಿಸಿ, ಒಟ್ಟು 210 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿತ್ತು. 2019-20ನೇ ಸಾಲಿನಲ್ಲಿ ಬಿಬಿಎಂಪಿ ಗುತ್ತಿಗೆದಾರರಿಗೆ ಜೂನ್‌ವರೆಗೆ 26 ಕೋಟಿ ರೂ. ಬಿಲ್ ಪಾವತಿ ಮಾಡಿದ್ದು, ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಬಿಬಿಎಂಪಿ ಬೇರೆ ಬೇರೆ ಯೋಜನೆಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ.
ಯಶಸ್ವಿಯಾಗಿರುವ ಯಾವುದೇ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ನಿಲ್ಲಿಸಿದರೂ, ಬಿಬಿಎಂಪಿ ಮೂಲಕ ಮುಂದುವರಿಸಲಾಗುವುದು. -ಗಂಗಾಂಬಿಕೆ, ಮೇಯರ್ ಬಿಬಿಎಂಪಿಯಲ್ಲಿ ಈಗ ಯಾವುದೇ ವಿಶೇಷ ಅನುದಾನ ಇಲ್ಲ. ಆಸ್ತಿ ತೆರಿಗೆ ಹಣ ಸಂಗ್ರಹಿಸುವಲ್ಲೂ ಆಡಳಿತ ಪಕ್ಷ ವಿಫಲವಾಗಿದೆ. ಈಗ ಉಳಿದಿರುವುದು ಮೇಯರ್ ನಿಧಿ ಮಾತ್ರ ಇದನ್ನು ಬೇಕಾದರೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಬಳಸಿಕೊಳ್ಳಲಿ ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ.
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ