Advertisement

ಉಗ್ರ ಚಟುವಟಿಕೆಗಳಲ್ಲಿ ಬಿಜೆಪಿ ನಾಯಕರಿಗೆ ನಿಕಟ ಸಂಪರ್ಕ: ಉತ್ತಮ್ ಕುಮಾರ್ ರೆಡ್ಡಿ

03:34 PM Jul 09, 2022 | Team Udayavani |

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳ ಜತೆ ಬಿಜೆಪಿ ನಾಯಕರಿಗೆ ನಿಕಟ ಸಂಪರ್ಕ ಇದೆ ಎಂದು ಕಾಂಗ್ರೆಸ್ ನಾಯಕ, ಸಂಸದ ಉತ್ತಮ್ ಕುಮಾರ್ ರೆಡ್ಡಿ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ನಾಯಕರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಭಯೋತ್ಪಾದಕ ನಂಟುಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದರು.

ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಬಿಜೆಪಿ ಕಾರ್ಯಕರ್ತ ಎಂದು ಗೊತ್ತಾಗಿದೆ. ಆತ ಸ್ಥಳೀಯ ಹಿರಿಯ ಮುಖಂಡರೊಬ್ಬರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ.ರಾಜಸ್ಥಾನ ಬಿಜೆಪಿಯ ವಿಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರ ಅಳಿಯ ಅಟ್ಟಾರಿ ಅವರನ್ನು ನೇಮಿಸಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳು‌ ಸಹ ವರದಿ ಮಾಡಿವೆ. ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಅವರು ಪಕ್ಷದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದರು.

ಇತ್ತೀಚೆಗಷ್ಟೇ ಸ್ಥಳೀಯರಿಂದ ಲಷ್ಕರ್-ಎ-ತೊಯ್ಬಾ ಉಗ್ರ ತಾಲಿಬ್ ಹುಸೇನ್ ಷಾ ಸೆರೆಸಿಕ್ಕಿದ್ದ. ಈತ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಪದಾಧಿಕಾರಿ ಅಂತಾ ತಿಳಿದುಬಂದಿದೆ. ತಾಲಿಬ್ ಹುಸೇನ್ ಶಾ ಈ ಹಿಂದೆ ಗೃಹ ಸಚಿವ ಅಮಿತ್ ಶಾ ಜೊತೆಯೂ‌ ಕಾಣಿಸಿಕೊಂಡಿದ್ದ. ಅಷ್ಟೇ ಅಲ್ಲ ಇತರೆ ಹಿರಿಯ ಬಿಜೆಪಿ ನಾಯಕರೊಂದಿಗೆ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದ. ಈ‌ ಬಗ್ಗೆ ಆರೋಪಿ ಜತೆ ಬಿಜೆಪಿ‌ ಲೀಡರ್ ಗಳ ಫೋಟೋ ಇರೋ ಸ್ಕ್ರೀನ್ ಶಾಟ್ ಗಳನ್ನ ಬಹಿರಂಗಪಡಿಸಿದ್ದೇನೆ. ಬಂಧನಕ್ಕೊಳಗಾದಾಗ ಈತ ಅಮರನಾಥ ಯಾತ್ರೆ ಮೇಲೂ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಎಂದರು.

ಅಮರಾವತಿಯ ಕೆಮಿಸ್ಟ್ ಉಮೇಶ್ ಕೋಲ್ಹೆ ಹತ್ಯೆಯ ಮಾಸ್ಟರ್ ಮೈಂಡ್ ಇರ್ಫಾನ್ ಖಾನ್, ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ರಾಣಾ ಮತ್ತು ಬಿಜೆಪಿ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ. ಇರ್ಫಾನ್ ಖಾನ್ ಅವರು ರಾಣಾ ಪರ ಪ್ರಚಾರ ನಡೆಸಿ ಮತ ಯಾಚಿಸಿದ್ದ. 2017ರಲ್ಲಿ ಬಿಜೆಪಿ ಐಟಿ ಸೆಲ್ ಸದಸ್ಯ ಧ್ರುವ ಸಕ್ಸೇನಾ ಸೇರಿ 10 ಮಂದಿ ಬಂಧಿಸಿದ್ದರು.
ಭಯೋತ್ಪಾದಕ ನಿಗ್ರಹ ದಳ ದಾಳಿ‌ ನಡೆಸಿತ್ತು, ಇವರ ವಿರುದ್ಧ ಇಲ್ಲಿಗಲ್ ಟೆಲಿಫೋನ್ ಎಕ್ಸ್ ಚೇಂಜ್ ಹೊಂದಿದ್ದ ಆರೋಪ ಇದೆ. ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಕೂಡ ಫೋಟೋ ವೈರಲ್ ಮಾಡಿದ್ದರು. ಎರಡು ವರ್ಷದ ಬಳಿಕ ಬಲರಾಮ್ ಸಿಂಗ್ ಎಂಬಾತನನ್ನ ಬಂಧಿಸಿದ್ದರು. ಈತ ಮಧ್ಯಪ್ರದೇಶದ ಬಜರಂಗದಳದ ಮುಖ್ಯಸ್ಥ.ಭಯೋತ್ಪಾದಕರಿಗೆ ಹಣ ಒದಗಿಸಿದ ಆರೋಪ ಈತನ‌ ಮೇಲಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next